ಉಪೇಂದ್ರ ನಿರ್ದೇಶನದ ಹೊಸ ಚಿತ್ರಕ್ಕೆ ಜೂ.3 ರಂದು ಮುಹೂರ್ತ

Public TV
1 Min Read
FotoJet 63

ಪ್ಪಿ 2 ಸಿನಿಮಾದ ನಂತರ ನಟ, ನಿರ್ದೇಶಕ ಉಪೇಂದ್ರ ಕೈಗೆತ್ತಿಕೊಂಡಿರುವ ಹೊಸ ಸಿನಿಮಾದ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಿ, ಜನರ ತಲೆಗೆ ಹುಳು ಬಿಟ್ಟಿರುವ ಉಪೇಂದ್ರ ಅವರು ತಮ್ಮ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತವನ್ನು ಜೂ.3ಕ್ಕೆ ಫಿಕ್ಸ್ ಮಾಡಿದ್ದಾರೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

upendra 4

ಈ ಹಿಂದೆ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ, ಅದರಲ್ಲಿ ಟೈಟಲ್ ಕೂಡ ಅನಾವರಣಗೊಳಿಸಿದ್ದರು. ಅದರಲ್ಲಿ ಒಂದು ಟೈಟಲ್ ಕೂಡ ಬರೆದಿದ್ದರು. ಆದರೆ, ಆ ಟೈಟಲ್ ಏನು ಎನ್ನುವುದೇ ಒಂದು ನಿಗೂಢ ಚಿತ್ರಕಥೆಯಂತಿತ್ತು. ಈ ಹೊಸ ಸಿನಿಮಾದ ಟೈಟಲ್, ಕುದುರೆ ಲಾಳ ಎನ್ನಬೇಕೆ? ಮೂರು ನಾಮ ಎಂದು ತಿಳಿದುಕೊಳ್ಳಬೇಕೆ? ಅಥವಾ ಉಗುರಿನ ಮೇಲೆ ಮತದಾನದ ಇಂಕು ಹತ್ತಿರವ ಗುರುತು ಎಂದು ಕರೆಯಬೇಕೋ? ನಾವು ಏನು ಅಂದುಕೊಳ್ಳುತ್ತೆವೆಯೋ ಅದೇ ಸಿನಿಮಾದ ಟೈಟಲ್ ಎನ್ನುವಂತೆ ಶೀರ್ಷಿಕೆ ಇಟ್ಟಿದ್ದರು. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

upendra 1

ಈಗಾಗಲೇ ಈ ಹೊಸ ಸಿನಿಮಾಗಾಗಿ ಒಂದಿಷ್ಟು ಆಡಿಷನ್ ಕೂಡ ನಡೆಸಿದ್ದು,  ಪಾತ್ರಗಳ ಆಯ್ಕೆಯನ್ನೂ ಮಾಡಿದ್ದಾರೆ. ಚಿಕ್ಕವರಿಂದ ವಯಸ್ಸಾದ ವ್ಯಕ್ತಿಗಳು ಈ ಸಿನಿಮಾಗಾಗಿ ಬೇಕಾಗಿದ್ದರಿಂದ ಹದಿನೈದು ದಿನಗಳ ಕಾಲ ಆಡಿಷನ್ ಮಾಡಿದ್ದಾರಂತೆ ನಿರ್ದೇಶಕರು. ನಟನೆಯ ಚಿತ್ರ ನಿರ್ದೇಶನವನ್ನೂ ಉಪೇಂದ್ರ ಅವರೇ ಮಾಡುತ್ತಿದ್ದು, ನಾಯಕಿ ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಈಗಾಗಲೇ ನಾಯಕಿಯ ಆಯ್ಕೆ ಕೂಡ ಆಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

upendra 5

ಲಹರಿ ಸಂಸ್ಥೆ ಮತ್ತು ಕೆ.ಪಿ.ಶ್ರೀಕಾಂತ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಹೀಗೆ ಏಳು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *