ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಇತ್ಯಾದಿ’ ಚಿತ್ರ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡಿತು. ’ಮದಗಜ’ ಖ್ಯಾತಿ ನಿರ್ದೇಶಕ ಮಹೇಶ್‌ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಂಗಭೂಮಿಯಲ್ಲಿ ಅನುಭವ ಪಡೆದುಕೊಂಡು, ’ಬೆಟ್ಟದ ಆಸೆ’ ಎಂಬ ಕಲಾತ್ಮಕ ಚಿತ್ರವನ್ನು ನಿರ್ದೇಶನ ಮಾಡಿರುವ ಚಿತ್ರದುರ್ಗದ ವಿಕಾಸ್ ನಾಗರಾಜ್.ಬಿ.ಎನ್ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೀಲಕಂಠ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಯೋಗರಾಜ್.ಡಿ ನಿರ್ಮಾಣ ಮಾಡುವ ಜತೆಗೆ ಛಾಯಾಗ್ರಹಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
Advertisement
ನಿರ್ದೇಶಕರು ಅವರ ಮನಸ್ಸಿನಲ್ಲಿರುವ ಒಂದಷ್ಟು ಪಾತ್ರಗಳನ್ನು ಪೋಣಿಸಿಕೊಂಡು ಕಥೆಯನ್ನು ಬರೆದಿದ್ದಾರೆ. ಜನರು ಸಾಹಸ, ಮಾಯಾಜಾಲದಲ್ಲಿ ಇದ್ದರೆ ಹಂಗೇ ಇರ‍್ತಾರೆ ಎಂಬುದನ್ನು ಹೇಳ ಹೊರಟಿದ್ದಾರೆ. ಅಂದರೆ ಒಂದು ಪಾತ್ರಕ್ಕೂ ಒಂದು ಪಾತ್ರಗಳು ಮುಂತಾದವುಗಳು ಆಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿರುವ ಪಾತ್ರವನ್ನು ಬೇರೆಯವರು ಹುಡುಕುತ್ತಾರೆ. ನಿಮ್ಮಲ್ಲಿರುವ ಪಾತ್ರವನ್ನು ಅವನು ಹುಡುಕುತ್ತಾನೆ. ನಾವು ಹಂಗೇ ನೋಡ್ತೆವೋ ಅದೇ ರೀತಿ ಸಿನಿಮಾ ಸಾಗುತ್ತದೆ. ಎಲ್ಲರ ಮನಸ್ಥಿತಿಗೂ ಬೇರೆ ಬೇರೆ ಅರ್ಥ ಕಲ್ಪಿಸುತ್ತಾ ಹೋಗುತ್ತದೆ. ಮಾಯಾಜಾಲದಲ್ಲಿ ಪಾತ್ರಗಳೇ ಕಥೆಯನ್ನು ಹುಟ್ಟು ಹಾಕುತ್ತವೆ. ಪ್ರತಿ ರೋಲ್‌ಗೂ ಸಂಬಂದ ಇರುತ್ತದೆ. ಒಂದು ದೃಶ್ಯ ತಪ್ಪಿಹೋದರೂ ಕಥೆ ಅರ್ಥವಾಗುವುದಿಲ್ಲವೆಂದು ವಿಕಾಸ್‌ನಾಗರಾಜ್ ಹೇಳುತ್ತಾರೆ. ಇದನ್ನೂ ಓದಿ: ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್
Advertisement
Advertisement
Advertisement
ನಾಯಕನಾಗಿ ಸಚ್ಚಿನ್, ಇವರೊಂದಿಗೆ ರಘುಪಾಂಡೇಶ್ವರ್, ವೀರೇಶ್‌ಮುತ್ತಿನಮಠ, ರೇಷ್ಮಾ, ರಶ್ಮಿತಾ, ಪ್ರೀತಂ, ರಾಧಿಕಾ ಮುಂತಾದವರು ನಟಿಸುತ್ತಿದ್ದಾರೆ. ಒಂದರೆಡು ಚಿತ್ರಗಳಲ್ಲಿ ನಟಿಸಿರುವ ಕಲಾವಿದೆ ನಾಯಕಿಯಾಗುವ ಸಾಧ್ಯತೆ ಇದೆ. ಉಳಿದಂತೆ ಸಂಗೀತ, ಸಂಕಲನ, ಸಾಹಸ ಇವೆಲ್ಲಕ್ಕೂ ತಂತ್ರಜ್ಘರನ್ನು ಸದ್ಯದಲ್ಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಸುಂದರ ಸಮಾರಂಭದಲ್ಲಿ ’ರಥಾವರ’ ನಿರ್ಮಾಪಕ ಧರ್ಮಶ್ರೀ ಮಂಜುನಾಥ್, ಸಂಭಾಷಣೆಗಾರ ಮಾಸ್ತಿ ಮುಂತಾದವರು ಹಾಜರಿದ್ದರು.