‘ಹಲೋ ಸರ್’ ಚಿತ್ರಕ್ಕೆ ಮುಹೂರ್ತ : ಕೆ.ಶಂಕರ್ ನಿರ್ದೇಶನದ ಸಿನಿಮಾ

Public TV
1 Min Read
Hello Sir 1

ಹಿಂದೆ ಮುಕ್ತಿ, ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ  ಕೆ.ಶಂಕರ್ (Shankar) ಇದೀಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಆ ಚಿತ್ರದ ಹೆಸರು ‘ಹಲೋ ಸರ್’‌ (Hello Sir). ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಬರುವ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಮೊದಲ ದೃಶ್ಯಕ್ಕೆ ಭಾ.ಮ. ಗಿರೀಶ್ ಕ್ಯಾಮೆರಾ ಸ್ವಿಚಾನ್ ಮಾಡಿದರೆ, ನಿರ್ಮಾಪಕ ರಮೇಶ್ ಕ್ಲಾಪ್ ಮಾಡಿದರು. ನಾಯಕ, ನಾಯಕಿ ದೇವರನ್ನು ಪ್ರಾರ್ಥಿಸುವ ಪ್ರಥಮ ದೃಶ್ಯವನ್ನು ನಿರ್ದೇಶಕ ಶಂಕರ್ ಚಿತ್ರಿಸಿಕೊಂಡರು.

Hello Sir 2

ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು  ಮಾಡುತ್ತಿರುವವರ ವಿರುದ್ದ ಹೋರಾಡುವ ಯುವಕನ ಕಥೆಯಿದು.  ಇಂದಿನಿಂದಲೇ ಚಿತ್ರೀಕರಣ ಆರಂಭಿಸಿ 45 ದಿನಗಳ ಕಾಲ ಮಂಗಳೂರು, ಜೋಗಫಾಲ್ಸ್, ತಲಕಾಡು, ಮಹದೇವಪುರದ ಸುತ್ತಮುತ್ತ 45 ದಿನಗಳ‌ ಕಾಲ ಈ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ.

 

ಶ್ರೀ ಅಂಕುರ ಕ್ರಿಯೆಷನ್ ಬ್ಯಾನರ್ ಅಡಿ ಎಲ್. ಮಂಜುನಾಥ್ ಮತ್ತು ಗೆಳೆಯರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ ಶಂಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಎನ್.ಕೃಪಾಕರ್ ಅವರ ಸಂಗೀತ, ಚಂದ್ರು ಸೊಂಡೇಕೊಪ್ಪ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮನ್ವಿತ್, ಸಮನ್ವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ.

Share This Article