ಬಹಳ ದಿನಗಳ ನಂತರ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ನಾಯಕನಾಗಿ ತೆರೆಮೇಲೆ ಬರುತ್ತಿದ್ದಾರೆ. ಅರಸೀಕೆರೆಯ ಪುನೀತ್ ಅವರ ನಿರ್ದೇಶನದಲ್ಲಿ ಮುಡಿಬರುತ್ತಿರುವ ಆ ಚಿತ್ರದ ಹೆಸರು ಅಮರಾವತಿ ಪೋಲೀಸ್ ಸ್ಟೇಷನ್. ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತು. ಪ್ರಾರಂಭದ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಚಿತ್ರರಂಗಕ್ಕೆ ಶುಭ ಕೋರಿದರು.
Advertisement
ಮೂಲತಃ ಓರ್ವ ರೈತರಾದ ಅಂಜನರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುರೇಶ್ ಬಾಬು ಅವರ ಕ್ಯಾಮೆರಾ ವರ್ಕ್, ಕಾರ್ತೀಕ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರದ ನಾಯಕಿಯಾಗಿ ರೇಖಾಶ್ರೀ ನಟಿಸುತ್ತಿದ್ದಾರೆ. ಪ್ರಾರಂಭ ಖ್ಯಾತಿಯ ಮನು ಕಲ್ಯಾಡಿ ಈ ಚಿತ್ರದ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ಪೋಲೀಸ್ ಸ್ಟೇಷನ್ ಸುತ್ತಮುತ್ತ ನಡೆಯುವ ಘಟನೆಗಳು ಚಿತ್ರದ ಪ್ರಮುಖ ಆಂಶಗಳಾಗಿವೆ. ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ
Advertisement
Advertisement
ನಾಯಕ ಗುರುರಾಜ್ ಮಾತನಾಡುತ್ತ, ಪುನೀತ್ ಕಳೆದ ೩ ವರ್ಷಗಳಿಂದ ಈ ಕಥೆ ರೆಡಿ ಮಾಡಿಕೊಂಡಿದ್ದಾರೆ. ಒಂದು ಇಂಟರೆಸ್ಟಿಂಗ್ ಸಬ್ಜೆಕ್ಟ್ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದಾರೆ. ಈಗ ಟೆಸ್ಟ್ ಮ್ಯಾಚ್ ಥರ ಸಿನಿಮಾ ಮಾಡಿದರೆ ಯಾರೂ ನೋಡುವುದಿಲ್ಲ. ಈ ಕಥೆ ಕೇಳಿದ ತಕ್ಷಣ ಮಾಡಬೇಕು ಎನಿಸಿತು ಎಂದು ಹೇಳಿದರು. ನಿರ್ದೇಶಕ ಪುನೀತ್ೇ ಮಾತನಾಡುತ್ತ, ರೈತರು, ಪ್ರೆಸ್ ಇಟ್ಟುಕೊಂಡು ಈಗಿನ ಕಾಲದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೇ ಈ ಚಿತ್ರದ ಮೂಲಕ ಹೇಳಹೊರಟದ್ದನೆ.ಮೈಸೂರು, ಬೆಂಗಳೂರು, ಮೈಸೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲಾನಿದೆ ಎಂದು ಜೇಳಿದರು. ನಿರ್ಮಾಪಕ ಅಂಜನ ರೆಡ್ಡಿ ಮಾತನಾಡಿ, ನಾನು ನೂಲತಃ ರೈತ. ಪುನೀತ್ ಈ ಕಥೆ ತಂದಾಗ ನಾವು ರೈತರು, ಇದೆಲ್ಲ ನಮಗೆ ಬೇಡಪ್ಪ, ಅಂದೆ. ರೈತರು, ರಾಜಕೀಯದವರು, ಪೋಲೀಸರ ಬಗ್ಗೆಯೂ ಈ ಚಿತ್ರದಲ್ಲಿದೆ. ನಂತರ ಕಥೆ ಕೇಳಿದಮೇಲೆ ಮಾಡಬೇಕೆನಿಸಿತು. ಜನರಿಗೆ ಒಂದು ನೀತಿಪಾಠ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.ನಾಯಕಿ ರೇಖಾಶ್ರೀ ಅವರಿಗಿದು ನಾಲ್ಕನೇ ಚಿತ್ರ. ಹಿರಿಯ ನಟಿ ಸುಧಾರಾಣಿ, ತಾರಾ, ನೀನಾಸಂ ಅಶ್ವಥ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.