ಕೊಪ್ಪಳ: ಮೊಹರಂ ಹಿಂದೂ ಮುಸ್ಲಿಮರು ಸೇರಿ ಆಚರಿಸುವ ಏಕೈಕ ಹಬ್ಬವಾಗಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಅತ್ಯಂತ ವಿಭಿನ್ನವಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತಿದೆ.
Advertisement
ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮದಲ್ಲಿ ಹಿಂದೂಗಳ ಮನೆಯಲ್ಲೇ ಅಲಾಯಿ ದೇವರಿಗೆ ಪೂಜೆ ಮಾಡುತ್ತಿದ್ದು, ಈ ಗ್ರಾಮದಲ್ಲಿ ದೇವರನ್ನು ಅಂದಪ್ಪ ಬಡಿಗೇರ ಎಂಬುವರ ಮನೆಗೆ ಗ್ರಾಮಸ್ಥರು ಕರೆ ತಂದು ಸ್ಥಾಪನೆ ಮಾಡುತ್ತಾರೆ. ಮೊಹರಂನ 7 ದಿನದ ಸವಾರಿ ಭಾಗವಾಗಿ ಅಂದಪ್ಪ ಮನೆಗೆ ಬರುವ ದೇವರಿಗೆ ಭಕ್ತರು ಇಡೀ ದಿನ ಅಲ್ಲೇ ಪೂಜೆ ಮಾಡುತ್ತಾರೆ. ನಂತರ ಅಂದಪ್ಪ ಕುಟುಂಬ ಅನ್ನ ಸಂತರ್ಪಣೆ ಮಾಡುತ್ತಾರೆ. ಇದನ್ನೂ ಓದಿ: ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ
Advertisement
Advertisement
ಮತ್ತೊಂದು ಕಡೆ ಅಲಾಯಿ ದೇವರು ಹನುಮಂತನಿಂದ ಪ್ರಸಾದ ಪಡೆಯುತ್ತದೆ. ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ಈ ಆಚರಣೆ ನಡೆಯುತ್ತಿದೆ. ಶನಿವಾರ 7 ದಿನದ ಸವಾರಿಯಂದು ಹನುಮಂತ ದೇವರ ಗುಡಿಗೆ ಅಲಾಯಿ ದೇವರು ಭೇಟಿ ನೀಡುತ್ತಾನೆ. ಹನುಮಂತನಿಂದ ಪ್ರಸಾದ ಕೇಳುವ ಅಲಾಯಿ ದೇವರು, ಹನುಮಂತ ದೇವರ ಮುಡಿಯಲ್ಲಿದ್ದ ಹೂವಿನ ಪ್ರಸಾದ ಪಡೆಯುತ್ತಾನೆ. ಈ ದೃಶ್ಯ ವೈರಲ್ ಆಗಿದೆ. ಒಟ್ಟಾರೆ ಮೊಹರಂ ಹಬ್ಬ ಸೂಫಿ ಶರಣರ ನಾಡಿನಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್
Advertisement