ಧಾರವಾಡ: ಭಾವೈಕ್ಯತೆ ಹಾಗೂ ತ್ಯಾಗದ ಪ್ರತೀಕ ಈ ಮೊಹರಂ ಹಬ್ಬ. ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವ ಹಬ್ಬವೂ ಹೌದು. ಅದರಲ್ಲೂ ಧಾರವಾಡದಲ್ಲಿ ನಡೆಯುವ ಈ ವಿಶಿಷ್ಟ ಆಚರಣೆ ಗಮನಸೆಳೆದಂತೆ ಭಯವೂ ಹುಟ್ಟಿಸಿದೆ.
Advertisement
ಹೌದು ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವುದಕ್ಕೋಸ್ಕರ ಧಾರವಾಡದ ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದ್ದಾರೆ. ಪ್ರತಿವರ್ಷ ಮೊಹರಂ ಹಬ್ಬದಂದು ಇವರು ತಮ್ಮ ಎದೆಗೆ ಬ್ಲೇಡ್‌ನಿಂದ ಹೊಡೆದುಕೊಳ್ಳುವ ಮೂಲಕ ರಕ್ತ ಚೆಲ್ಲಿ ಮೊಹರಂ ಹಬ್ಬವನ್ನು ಆಚರಿಸಿ, ತ್ಯಾಗದ ಸಂದೇಶ ಸಾರುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು
Advertisement
Advertisement
ಹಾಗೆಯೇ ಇಂದು ನಡೆದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಇರಾನಿ ಸಮುದಾಯದ ಜನ ನಗರದ ಜನ್ನತನಗರದಿಂದ ಹೊಸಯಲ್ಲಾಪುರದವರೆಗೆ ಪಾಂಜಾಗಳ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಇವರು ಬ್ಲೇಡ್‌ನಿಂದ ತಮ್ಮ ಎದೆಗೆ ಹೊಡೆದುಕೊಂಡು ರಕ್ತ ಚೆಲ್ಲುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.