ಮೊಹರಂ ಹಬ್ಬದ ಆಚರಣೆ ವೇಳೆ ಎತ್ತುಗಳಿಗೆ ಚಿತ್ರಹಿಂಸೆ, ಮರಗಳ ಮಾರಣಹೋಮ

Public TV
1 Min Read
KPL MUHARRAM

– ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಕೊಪ್ಪಳ: ಮೊಹರಂ ಹಬ್ಬದ ಆಚರಣೆ ಹೆಸರಿನಲ್ಲಿ ಜಾನುವಾರುಗಳಿಗೆ ಚಿತ್ರಹಿಂಸೆ ನೀಡುತ್ತಿರುವುದರ ಜೊತೆಗೆ ಮರಗಳ ಮಾರಣಹೋಮ ನಡೆಸಿದ ಘಟನೆ ಜಿಲ್ಲೆಯ ನೂತನ ತಾಲೂಕು ಕನಕಗಿರಿಯಲ್ಲಿ ನಡೆದಿದೆ.

ಮೊಹರಂ ಹಬ್ಬದ ಆಚರಣೆಯ ಹಿಂದಿನ ದಿನ ಕತ್ತಲ್ ರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕತ್ತಲ್ ಹಬ್ಬದ ಆಚರಣೆಗಾಗಿ ನೂರಾರು ಮರಣಗಳ ದಫನ್ ಮಾಡುಲಾಗುತ್ತದೆ. ಬಳಿಕ ಮರಗಳನ್ನು ಕಡಿದು ಜಾನುವಾರಿಗಳಿಗೆ ಕಟ್ಟಿ ತರುವ ವಿಶಿಷ್ಟ ಆಚರಣೆಯೊಂದು ರೂಡಿಯಲ್ಲಿದೆ. ಇದನ್ನೂ ಓದಿ: ಮೊಹರಂ ಹಬ್ಬದ ವಿಶೇಷತೆ ಏನು..? ಯಾರು ಈ ಇಮಾಮ್ ಹುಸೇನ್? ಇಲ್ಲಿದೆ ಕರಬಲಾದ ಕಥೆ

vlcsnap 2018 09 21 10h08m35s865

ಗುರುವಾರ ತಡರಾತ್ರಿಯೂ ಸಹ ನೂತನ ತಾಲೂಕು ಕನಕಗಿರಿಯಲ್ಲಿ ಜನರು ಕತ್ತಲ್ ಹಬ್ಬಕ್ಕಾಗಿ ನೂರಾರು ಮರಗಳ ಮಾರಣಹೋಮ ನಡೆಸಿ, ಅವುಗಳನ್ನು ಎತ್ತುಗಳಿಗೆ ಕಟ್ಟಿ ಎಳೆದು ತಂದಿದ್ದಾರೆ. ಈ ವೇಳೆ ಎತ್ತುಗಳು ನಿತ್ರಾಣಗೊಂಡು ಕುಸಿದರು ಸಹ ಅವುಗಳಿಗೆ ಚಿತ್ರಹಿಂಸೆ ನೀಡಿ ಹಬ್ಬವನ್ನು ಆಚರಿಸಿದ್ದಾರೆ. ಇದನ್ನೂ ಓದಿ: ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ- ಬಾಲಕಿ ಸಾವು, 30 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

ಮೊಹರಂ ಆಚರಣೆ ನಿಮಿತ್ತ ಜಾನುವಾರುಗಳಿಗೆ ಚಿತ್ರಹಿಂಸೆ ಹಾಗೂ ಮರಗಳ ಮಾರಣಹೋಮಗಳ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಇಂತಹ ವಿಶಿಷ್ಟ ಆಚರಣೆ ಹೆಸರಿನಲ್ಲಿ ಮರಗಳ ಮಾರಣಹೋಮ ಹಾಗೂ ಎತ್ತುಗಳಿಗೆ ಚಿತ್ರಹಿಂಸೆ ನೀಡುತ್ತಿರುವ ವಿಚಾರ ತಿಳಿದಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಕ್ರಮ ಕೈಗೊಳ್ಳ ಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *