CrimeLatestMain PostNational

11 ವರ್ಷದ ಬಾಲಕನ ಮೇಲೆ ಮದರಸಾದ ಮುಫ್ತಿಯಿಂದ ಅತ್ಯಾಚಾರ ಆರೋಪ!

ಲಕ್ನೋ: 11 ವರ್ಷದ ಬಾಲಕನ ಮೇಲೆ ಮದರಸಾದ ಮುಫ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಾವನ ತಾಲೂಕಿನಲ್ಲಿ ನಡೆದಿದೆ.

ಸತ್ಲದ ನಿವಾಸಿಯಾದ ಮದರಸಾದ ಮುಫ್ತಿ ಅಬ್ದುಲ್ ಕಲಾಂ ಶಿಕ್ಷಣದ ಹೆಸರಿನಲ್ಲಿ ಮೂಲತಃ ಸಹರಾನ್‍ಪುರದ ಸಂತ್ರಸ್ತ ಬಾಲಕನಿಗೆ ದೌರ್ಜನ್ಯ ಎಸಗುತ್ತಿದ್ದರು ಎನ್ನಲಾಗಿದೆ. ಈದ್ ಹಬ್ಬದಂದು ಮನೆಗೆ ತೆರಳಿದ್ದ 11 ವರ್ಷದ ಬಾಲಕ ತನ್ನ ಕುಟುಂಬಸ್ಥರಿಗೆ 7 ತಿಂಗಳ ನಂತರ ನೋವಿನ ಬಗ್ಗೆ ಹೇಳಿಕೊಂಡಿದ್ದಾನೆ.

ಈ ಕುರಿತು ಸಂತ್ರಸ್ತ ಬಾಲಕನ ತಂದೆ ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಮುಫ್ತಿ ತಲೆಮರೆಸಿಕೊಂಡಿದ್ದಾನೆ.

ಮುಫ್ತಿ, ಮೀರತ್‍ನ ಮಾವಾನಾದ ಇಕ್ರಮ್ ನಗರ ಫರೀದ್ ಕಾಲೋನಿಯಲ್ಲಿರುವ ಮದರಸಾದ ನಿರ್ದೇಶಕನಾಗಿದ್ದಾನೆ. ಅವನು ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ಸುತ್ತಮುತ್ತಲಿನ ಪ್ರದೇಶದ ಜೊತೆಗೆ ಇತರ ಹಲವು ಜಿಲ್ಲೆಗಳ ಮಕ್ಕಳು ಸಹ ಈ ಮದರಸಾದಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ ಸಂತ್ರಸ್ತ ಬಾಲಕನೂ ಇದ್ದಾನೆ. ಬಾಲಕನು ಸುಮಾರು 7 ತಿಂಗಳ ಹಿಂದೆ ಮದರಸಾದಲ್ಲಿ ಓದಲು ಬಂದಿದ್ದರು ಎಂದು ತಿಳಿದು ಬಂದಿದೆ.

ಈದ್ ಹಬ್ಬದಂದು ಸಂತ್ರಸ್ತ ಬಾಲಕ ಮನೆಗೆ ಹೋದಾಗ ಆರೋಪಿ ಮುಫ್ತಿಯ ಕೃತ್ಯವನ್ನು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾನೆ. ಹಬ್ಬ ಮುಗಿದ ಬಳಿಕ ಶನಿವಾರ ಮಧ್ಯಾಹ್ನ ಬಾಲಕನನ್ನು ಮನೆಯವರು ಮದರಸಾಕ್ಕೆ ಕರೆದೊಯ್ದರು. ಆದರೆ ಈ ಆರೋಪ ಸುಳ್ಳು ಎನ್ನುತ್ತಿದ್ದಾರೆ ಮದರಸಾದವರು.

police (1)

ಕೊನೆಗೆ ಸಂಜೆಯ ವೇಳೆಗೆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದೂರು ಸ್ವೀಕರಿಸಿದ ಪೊಲೀಸರು ಸಂತ್ರಸ್ತ ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಮುಫ್ತಿ ವಿರುದ್ಧ ಕೇಸ್ ದಾಖಲಾಗಿತ್ತು.

Leave a Reply

Your email address will not be published.

Back to top button