ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗಿದೆ. ಬೈಂದೂರಿನ ಒತ್ತಿನೆಣೆ ಜೇಡಿ ಮಣ್ಣು ಗುಡ್ಡ ರಸ್ತೆ ಮೇಲೆ ಕುಸಿದಿದೆ.
ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿಗಾಗಿ ಗುಡ್ಡ ಕೊರೆಸಿದ್ದು, ಮಳೆಯಿಂದ ಮಣ್ಣು ಸಂಪೂರ್ಣ ತೇವಗೊಂಡು ರಸ್ತೆ ಮೇಲೆ ಕುಸಿದಿದೆ. ಮಣ್ಣು ಕುಸಿತದಿಂದಾಗಿ ಉಡುಪಿ- ಕಾರವಾರ- ಗೋವಾ ಸಂಪರ್ಕ ಮಾಡುವ ಈ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸ್ಥಗಿತಗೊಂಡಿವೆ. ಸಾಲುಗಟ್ಟಿ ನಿಂತಿರುವ ನೂರಾರು ವಾಹನಗಳನ್ನು ಮುಂದೆ ಗುಡ್ಡದ ಕಡೆ ಬಾರದಂತೆ ಪೊಲೀಸರು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಮಣ್ಣು ತೆಗೆಯುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.
Advertisement
Advertisement
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅನವಾಲ್ ಗ್ರಾಮದ ಕೊಳ್ಳದಲ್ಲಿ ಕಾರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. ಪವಾಡ ಸದೃಶವೆಂಬಂತೆ ಯಂಡಿಗೇರಿಯ ಬಸಲಿಂಗಪ್ಪ ಶಿರಗುಂಪಿ ಎಂಬವರು ಕಾರಿನಿಂದ ಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾರೆ.
Advertisement
Advertisement