ವಿಜಯಪುರ: ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ರಾಜ್ಯ ಪೊಲಿಸ್ ಇಲಾಖೆಯಲ್ಲಿ ಅಪರಾಧ ಪ್ರಕರಣಗಳ ತನಿಖೆಗೆ ಬಳಸಿಕೊಳ್ಳಲಾಗ್ತಿತ್ತು. ಈ ನಾಯಿಗಳು ಇದೀಗ ಭಾರತೀಯ ಸೇನೆಗೂ ಆಯ್ಕೆ ಆಗಿದೆ.
Advertisement
ಇದು ವಿಜಯಪುರ-ಬಾಗಲಕೋಟೆ ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ. ಈ ತಳಿಯ ನಾಯಿಗಳ ಮೇಲೆ ವಿಜಯಪುರದ ಪ್ರಾಣೇಶ ಜಹಗೀರದಾರವರು ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು ಇವುಗಳ ಆಹಾರ ಪದ್ಧತಿ, ವೇಗ, ಬೆಳವಣಿಗೆ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ, ಜಿಲ್ಲೆಯ ಜನರಿಗೆ ಈ ನಾಯಿಗಳ ವಿಶೇಷತೆ ಬಗ್ಗೆ ತಿಳಿಸುತ್ತಿದ್ದಾರೆ.
Advertisement
ಇದನ್ನೂ ಓದಿ: ಭಾರತೀಯ ಸೇನೆಗೆ ರಾಜ್ಯದ ಮುಧೋಳ ಸೇರ್ಪಡೆ: ವಿಶೇಷತೆ ಏನು? ಬೇರೆ ನಾಯಿಗಳಿಗಿಂತ ಭಿನ್ನ ಹೇಗೆ?
Advertisement
ಪ್ರಾಣೇಶ್ ಜಹಗೀರದಾರರ ಕಾರ್ಯ ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸುವಲ್ಲಿ ಮುಧೋಳ ನಾಯಿಗಳ ಪಾತ್ರದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement