‘ಬಿಗ್ ಬಾಸ್’ ಖ್ಯಾತಿಯ (Bigg Boss) ನಿವೇದಿತಾ ಗೌಡ (Niveditha Gowda) ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಟ್ರೋಲಿಗರ (Troll) ಕಾಟದ ನಡುವೆಯೂ ಹೊಸದೊಂದು ರೀಲ್ಸ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿರೋ ನಿವೇದಿತಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ ಗೌಡ
ಬ್ಲ್ಯಾಕ್ & ವೈಟ್ ಉಡುಗೆ ಧರಿಸಿ ರೀಲ್ಸ್‌ವೊಂದಕ್ಕೆ ನಿವೇದಿತಾ ಹೆಜ್ಜೆ ಹಾಕಿದ್ದಾರೆ. ಬೋಲ್ಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ರೀಲ್ಸ್ ಮಾಡಿದಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ನಿವೇದಿತಾ ಪೋಸ್ಟ್‌ಗೆ ಹರಿದು ಬರುತ್ತಿವೆ. ಮೊದಲು ನೀನು ರೀಲ್ಸ್ ಮಾಡೋದನ್ನು ಬಿಡಮ್ಮ ಎಂದೆಲ್ಲಾ ನಟಿಗೆ ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ:ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್ ಬಗ್ಗೆ ನಿವಿ ಖಡಕ್ ಮಾತು
View this post on Instagram
ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಕೆಟ್ಟ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದರು. ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಮತ್ತಷ್ಟು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿಕೆ ನೀಡಿದ್ದರು.
ಸದ್ಯ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಗೆ ನಾಯಕಿಯಾಗಿ ‘ಮುದ್ದು ರಾಕ್ಷಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸ್ಪರ್ಧಿಯಾಗಿದ್ದಾರೆ.