ರಾಜಕೀಯ ಅಧ್ಯಾಯ ಮುಗಿದಿಲ್ಲ, ಹೊಸ ಇನ್ನಿಂಗ್ಸ್ ಪ್ರಾರಂಭ ಮಾಡ್ತೀನಿ: ಮುದ್ದಹನುಮೇಗೌಡ

Public TV
1 Min Read
TMK 2

ತುಮಕೂರು: ನನ್ನ ರಾಜಕೀಯ ಜೀವನ ಇಲ್ಲಿಗೆ ಮುಗಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ ಹೊಸ ಇನ್ನಿಂಗ್ಸ್ ಆರಂಭಿಸುತ್ತೇನೆ ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದ್ದಾರೆ.

ತುಮಕೂರಿನಲ್ಲಿ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಗೆ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಆದ್ದರಿಂದ ನಾನು ಚುನಾವಣೆ ಫಲಿತಾಂಶಕ್ಕೆ ಕಾಯಬೇಕಿಲ್ಲ. ಆದರೆ ಯಾರಾದರೂ ಚುನಾಯಿತರಾಗಲಿ ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

vlcsnap 2019 05 21 13h38m35s238

ರಾಜ್ಯದ ಜನತೆ ಜೊತೆಗೆ ಜಿಲ್ಲೆಯ ಜನತೆ ನನ್ನ ಅನುಮಾನಿಸಿಲ್ಲ. ಕೆಲ ವಿಕೃತ ಮನಸ್ಸುಗಳನ್ನು ಹೊರತುಪಡಿಸಿ ಜಿಲ್ಲೆಯ ಜನರ ಮನಸು ನನಗಾಗಿ ಮಿಡಿದಿದೆ. ಅದು ನನ್ನ ಪೂರ್ವ ಜನ್ಮದ ಪುಣ್ಯಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದ್ದು, ಇದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು. ಅಷ್ಟೇ ಅಲ್ಲದೇ ನನ್ನ ರಾಜಕೀಯ ಜೀವನದ ಅಧ್ಯಾಯ ಮುಗಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಹೊಸ ಇನ್ನಿಂಗ್ಸ್ ಆರಂಭಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನಗೆ ಟಿಕೆಟ್ ಸಿಗದೇ ಇದ್ದರೂ ಪಕ್ಷ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಹೇಳಿದ್ದಾರೆ. ಇದೇ ತಿಂಗಳ ಅಂತ್ಯಕ್ಕೆ ತಮ್ಮ ಅಧಿಕಾರ ಅವಧಿ ಅಂತ್ಯಗೊಳ್ಳಲಿದ್ದು ಸಹಕಾರ ನೀಡಿದ ಜನತೆ, ಅಧಿಕಾರಿಗಳು ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *