ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಈಗಿನಿಂದಲೇ ಕಾಂಗ್ರೆಸ್ ಟಿಕೆಟ್‍ಗಾಗಿ ಫೈಟ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಬಂಧಿ ಡಾ.ರಂಗನಾಥ ಹಾಲಿ ಶಾಸಕರಿದ್ದರೂ ಮಾಜಿ ಸಂಸದ ಮುದ್ದಹನುಮೇಗೌಡ ಟಿಕೆಟ್‍ಗಾಗಿ ಫೈಟ್ ಶುರುಮಾಡಿದ್ದಾರೆ.
ಪಬ್ಲಿಕ್ ಟಿ.ವಿ. ಜೊತೆಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ನಾನು ಸ್ಥಾನ ತ್ಯಾಗ ಮಾಡಿದ್ದೆ. ರಾಜ್ಯ ಸಭಾ ಸದಸ್ಯರಾಗಿ ಮಾಡೋದಾಗಿ ವೇಣುಗೋಪಾಲ್ ಹೇಳಿದ್ದರು. ಈ ವಿಚಾರದಲ್ಲೂ ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಹೀಗಾಗಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಕೊಟ್ಟು ನನಗೆ ಆದ ಅನ್ಯಾಯ ಸರಿಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ
Advertisement
Advertisement
ಟಿಕೆಟ್ ಕೊಡಲಿ, ಬಿಡಲಿ ನಾನಂತು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸೋದು ಶತಸಿದ್ಧವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಳಿ ಹೋಗಿ ಟಿಕೆಟ್ ಕೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.