– 144 ಫೈಲ್ ತೆಗೆದುಕೊಂಡು ಹೋದದ್ದು ನಿಜವೇ?
– ಲೋಕಾಯುಕ್ತ ಸರ್ಚ್ ವಾರೆಂಟ್‌ನಲ್ಲಿ ಸ್ಫೋಟಕ ಮಾಹಿತಿ
ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ) ಸೈಟು ಹಂಚಿಕೆ ಅಕ್ರಮದ (MUDA Scam) ತನಿಖೆ ಚುರುಕು ಪಡೆದಿರುವ ಹೊತ್ತಿನಲ್ಲೇ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ನಗರಾಭಿವೃದ್ಧಿ ಇಲಾಖೆಯ ಐಎಎಸ್ ಅಧಿಕಾರಿಯ ಶ್ರೀರಕ್ಷೆ ಇತ್ತಾ? ಅನ್ನೂ ಅನುಮಾನಕ್ಕೆ ಲೋಕಾಯುಕ್ತದ (Lokayukta) ಅಧಿಕೃತ ದಾಖಲೆ ಎಡೆಮಾಡಿಕೊಟ್ಟಿದೆ.
Advertisement
ಹೌದು. ಬ್ರಹ್ಮಾಂಡ ಭ್ರಷ್ಟಾಚಾರದ ಹಿನ್ನೆಲೆ ಮುಡಾ ಮೂಡಾದಲ್ಲಿನ ದಾಖಲೆ ಜಪ್ತಿಗೆ ಲೋಕಾಯುಕ್ತ ಸರ್ಚ್ ವಾರೆಂಟ್ (Search Warrant) ಸಿದ್ಧಪಡಿಸಿಕೊಂಡಿತ್ತು. ಜೂನ್ 28ರ ಸಂಜೆ ಸರ್ಚ್ ವಾರೆಂಟ್ ಸಿದ್ಧವಾಗಿತ್ತು. ಸರ್ಚ್ ವಾರೆಂಟ್ ಸಿದ್ಧವಾದ 12 ತಾಸಿನೊಳಗೆ (ಜೂನ್ 29ರ ಬೆಳಗ್ಗೆ ) ಸಿನಿಮೀಯ ರೀತಿಯಲ್ಲಿ ಮೈಸೂರು ಪ್ರಾಧಿಕಾರಕ್ಕೆ ಐಎಎಸ್ ಅಧಿಕಾರಿ ಬಂದಿದ್ದರು. ಒಟ್ಟು 144 ಕಡತಗಳನ್ನ ತೆಗೆದುಕೊಂಡು ಹೋಗಿದ್ದರು ಲೋಕಾಯುಕ್ತವೇ ತನ್ನ ರಿಪೋರ್ಟ್‌ನಲ್ಲಿ ಉಲ್ಲೇಖಿಸಿತ್ತು. ಇನ್ನೂ ನಾವು ದಾಳಿ ಮಾಡಿ ಪ್ರಯೋಜನ ಇಲ್ಲ ಎಂದು ಲಿಖಿತವಾಗಿ ಉಲ್ಲೇಖಿಸಿ ಲೋಕಾಯುಕ್ತ ಸರ್ಚ್ ವಾರೆಂಟ್ ರದ್ದು ಪಡಿಸಿಕೊಂಡಿತ್ತು ಎಂದು ದಾಖಲೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: MUDA Scam| ನೋಟಿಸ್ ಇಲ್ಲದೇ ರಾತ್ರಿ ದಿಢೀರ್ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ನೀಡಿದ ಸಿಎಂ ಬಾಮೈದ!
Advertisement
Advertisement
ಸರ್ಚ್ ವಾರೆಂಟ್‌ನಲ್ಲಿ ಇದ್ದ ಅಂಶಗಳೇನು?
ಜೂನ್ 28ರ ಸಂಜೆ ಲೋಕಾಯುಕ್ತ ಸರ್ಚ್ ವಾರಂಟ್‌ನಲ್ಲಿ ಹಲವು ಸ್ಫೋಟಕ ಮಾಹಿತಿ ಬೆಳಿಕಿಗೆ ಬಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೈಟ್ ಹಂಚಿಕೆಯಲ್ಲಿ ಗೋಲ್ ಮಾಲ್ ಆಗುತ್ತಿದೆ. ಬದಲಿ ನಿವೇಶ ಕೊಡುವ ವಿಚಾರದಲ್ಲಿ ಎಲ್ಲಾ ಕಾನೂನು ಉಲ್ಲಂಘನೆ ಆಗಿದೆ. ಎಲ್ಲಾ ಅಕ್ರಮ ನೀತಿಗಳ ಅನುಸರಿಸಿ ನಿವೇಶನ ಮಂಜೂರು ಮಾಡಲಾಗುತ್ತಿದೆ, ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಇದರ ಬಗ್ಗೆ ನೋಟಿಸ್ ಕೊಟ್ಟು ದಾಖಲೆ ಕೇಳಿದರೆ ಅಧಿಕಾರಿಗಳು ಯಾವ ದಾಖಲೆ ಕೊಡುವುದಿಲ್ಲ. ದಾಖಲೆ ಕೇಳಿದ ಕೂಡಲೇ ದಾಖಲೆ ನಾಶಮಾಡುತ್ತಾರೆ. ಅಲ್ಲದೇ ದಾಖಲೆಗಳನ್ನು ಸುಟ್ಟು ಹಾಕುತ್ತಾರೆ. ಇದಕ್ಕಾಗಿ ದಿಢೀರ್ ದಾಳಿ ಮಾಡಿ ದಾಖಲೆ ಜಪ್ತಿ ಮಾಡುವ ಅವಶ್ಯಕತೆ ಇದೆ. ನಗರ ಯೋಜನಾ ವಿಭಾಗ, ಮುಡಾ ಸೂಪರಿಂಟೆಂಡೆಂಟ್ ಕಚೇರಿಯಲ್ಲಿನ ಮಹತ್ವದ ದಾಖಲೆ ಜಪ್ತಿ ಮಾಡಲೇ ಬೇಕಾಗಿದೆ. ಹೀಗಾಗಿ ದಿಢೀರ್ ದಾಳಿ ಮಾಡಲು ಸರ್ಚ್ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ 120 ಕೋಟಿ ರೂ. ಪರಿಹಾರ ಕೊಡಬೇಕಿತ್ತು: ಸಿಎಂ ಪರ ಮಾಜಿ ಶಾಸಕ ಬ್ಯಾಟಿಂಗ್
Advertisement
ಟೈಂ ಲೈನ್:
* ಜೂನ್ 28ರ ಸಂಜೆ ಸರ್ಚ್ ವಾರೆಂಟ್ ಸಿದ್ಧ.
* ಜೂನ್ 29ರ ಬೆಳಗ್ಗೆ ಐಎಎಸ್ ಅಧಿಕಾರಿ ಪ್ರಾಧಿಕಾರಕ್ಕೆ ಎಂಟ್ರಿ.
* ಜುಲೈ 1ಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಾಧಿಕಾರಕ್ಕೆ ದಿಢೀರ್ ಆಗಮನ ಸಭೆ.
* ಜುಲೈ 2ಕ್ಕೆ ಮೈಸೂರು ಲೋಕಾಯುಕ್ತರ ವರ್ಗಾವಣೆ
* ಈ ಎಲ್ಲಾ ಬೆಳವಣಿಗೆಗಳನ್ನು ಲಿಖಿತವಾಗಿ ಉಲ್ಲೇಖಿಸಿ ಸರ್ಚ್ ವಾರೆಂಟ್ ರದ್ದು.
* ಐಎಎಸ್ ಅಧಿಕಾರಿ ಬಂದು 144 ಫೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಾಯುಕ್ತ ರೀಪೋರ್ಟ್