ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಆತ್ಮ ಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ (Pratap Simha Nayak) ಆಗ್ರಹ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ನಾನು ಕಳಂಕರಹಿತ ಅಂತ ಹೇಳ್ತಿದ್ದರು. ಇದು ಅವರ ಬಾಯಿಂದ ಹೇಳಿದ್ದೋ, ಅವರ ನಡವಳಿಕೆಯೇ ಇವತ್ತು ಜನರಿಗೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಉಪದೇಶ ಕೊಡುತ್ತಿದ್ದರು. ಸಿದ್ದರಾಮಯ್ಯ ಅವರ ಮಾತು ಕೇವಲ ನಾಲಿಗೆಯಿಂದ ಬಂದ ಮಾತಾ ಅಂತ ಜನ ವಿಮರ್ಶೆ ಮಾಡಲಿ. ಹೈಕೋರ್ಟ್ ನಲ್ಲಿ ತೀರ್ಪು ಬಂದಿದೆ. ಸಿದ್ದರಾಮಯ್ಯ ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆ ಅಂತ ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷ: ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ ವಾಗ್ದಾಳಿ
ಮೊದಲ ಬಾರಿ ಸಿದ್ದರಾಮಯ್ಯ ಸಿಎಂ ಆದಾಗ 40+ ಆರೋಪ ಬಂದಿತ್ತು.ಆಗ ಎಸಿಬಿ (ACB) ಮಾಡಿ ಕೇಸ್ ಮುಚ್ಚಿ ಹಾಕಿದರು. ಲೋಕಾಯುಕ್ತವನ್ನ ಅವರು ಮುಚ್ಚಿದ್ದರು. ಅವರ ಎಲ್ಲಾ ಕೇಸ್ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿ ಹಾಕಿದ್ರು. ಸಿದ್ದರಾಮಯ್ಯ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಕಳಕಳಿ ಇಲ್ಲ. ಕಾಂಗ್ರೆಸ್ ಸಂಸ್ಥೆಗಳನ್ನು ದುರ್ಬಳಕೆ ಮಾಡ್ತಿದೆ. ದೇಶಪಾಂಡೆ, ಎಚ್ ಕೆ ಪಾಟೀಲ್ ಅವರಂತಹ ಹಿರಿಯರು ಕೇಸ್ ಮುಚ್ಚಿ ಹಾಕೋಕೆ ಸಾಥ್ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಚಾರ.ಈಗ ಸಿಎಸ್ ರಾಜ್ಯಪಾಲರಿಗೆ ವರದಿ ಕೊಡದೇ ಇರೋದು, ಸಿಬಿಐಗೆ ತಡೆ ಹಾಕಿರೋದು ನೋಡಿದ್ರೆ ಸಿಎಂ ನೇರವಾಗಿ ಹಗರಣದಲ್ಲಿ ಭಾಗಿಯಾಗಿರೋದು ಗೊತ್ತಾಗುತ್ತದೆ. ಮುಂದೆ ಇನ್ನು ಅನೇಕ ಹಗರಣ ಹೊರಗೆ ಬರುತ್ತದೆ. ಹೀಗಾಗಿ ಈ ಕ್ರಮ ಮಾಡಿದ್ದಾರೆ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಡಾ.ಕೆ ಸುಧಾಕರ್ ನೇಮಕ
ನಾಗೇಂದ್ರ ರಾಜೀನಾಮೆ ಕೇಳುವ ನೀವು ಯಾಕೆ ರಾಜೀನಾಮೆ ಕೊಡ್ತಿಲ್ಲ. ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಬೆಕು. ತನಿಖೆಯಿಂದ ಹಿಂದೆ ಓಡಿ ಹೋಗೋದು ಬೇಡ ಎಂದು ಕಿಡಿಕಾರಿದರು.