ಬೆಂಗಳೂರು: ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಿ. ತನಿಖೆ ಎದುರಿಸಿ, ನ್ಯಾಯಯುತವಾಗಿ ಹೊರಗೆ ಬನ್ನಿ. ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ವಿಚಾರವಾಗಿ ಬಿಜೆಪಿ (BJP) ಕಚೇರಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಯಾವುದೇ ಕಿಂಚಿತ್ತು ನೈತಿಕತೆ ಇದ್ದರೆ, ರಾಜೀನಾಮೆ ಕೊಡಲಿ ಎಂದರು. ಇದನ್ನೂ ಓದಿ: ಪ್ರಜಾಪ್ರಭುತ್ವ ಚುನಾಯಿತ ಸರ್ಕಾರವನ್ನ ಉರುಳಿಸಲು ಯತ್ನ: ರಮೇಶ್ ಬಂಡಿಸಿದ್ದೇಗೌಡ
Advertisement
ಬೆಳಗ್ಗೆ ಎದ್ದರೆ ನೈತಿಕತೆ ಬಗ್ಗೆ, ಕಾನೂನಿನ ಬಗ್ಗೆ ಮಾತಾಡೋ ಸಿದ್ದರಾಮಯ್ಯ ಈ ಕ್ಷಣಕ್ಕೆ ರಾಜೀನಾಮೆ ಕೊಡಬೇಕಿತ್ತು. ಅವರು ಮಾಡಿರುವ ತಪ್ಪುಗಳನ್ನು ಮರೆಮಾಚಿದ್ದಾರೆ. ನಾನು ತಪ್ಪೇ ಮಾಡಿಲ್ಲ ಅನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು. ಇದನ್ನೂ ಓದಿ: 8ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದಲೇ ರೇಪ್ – ಆಸ್ಪತ್ರೆಗೆ ದಾಖಲಾದ 20 ದಿನಗಳ ಬಳಿಕ ಸಾವು
Advertisement
Advertisement
ಯಡಿಯೂರಪ್ಪ, ನನ್ನ ಮೇಲೆ ಪ್ರಾಸಿಕ್ಯೂಷನ್ ಬಿಡಿ. ಲೋಕಾಯುಕ್ತದಲ್ಲಿ ನಮ್ಮ ಹೆಸರನ್ನ ದಾಖಲಿಸಿದ ಕೂಡಲೇ, ಯಡಿಯೂರಪ್ಪ ಅವರು ನಮ್ಮನ್ನು ಕರೆದಿದ್ದರು. ನಾವು ಮುಂದುವರೆಯೋದು ಸರಿಯಲ್ಲ ಎಂದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದೆವು. ಅದೆಲ್ಲಾ ಇತಿಹಾಸ ಎಂದರು. ಇದನ್ನೂ ಓದಿ: ಇದು ದೊಡ್ಡ ಷಡ್ಯಂತ್ರ.. ಕಾನೂನಿನಡಿ ಹೋರಾಟ ಮಾಡ್ತೀನಿ: ಸಿಎಂ ಸಿದ್ದರಾಮಯ್ಯ
Advertisement
ಅಹಿಂದ ಅಂತ ಹೇಳೋ ವ್ಯಕ್ತಿ. ಅಧಿಕಾರದ ಆಸೆಗೆ ಮುಂದುವರೆದಿದ್ದಾರೆ. ಬಳ್ಳಾರಿ ಪಾದಯಾತ್ರೆಗೆ ಬಂದ ಈ ಮಹಾನುಭಾವ ಪಾದಯಾತ್ರೆಗೆ ಬಿಡುತಿಲ್ಲ ಎಂದು ಆರೋಪ ಮಾಡಿದ್ದರು. ರಿಪಬ್ಲಿಕನ್ ಆಫ್ ಬಳ್ಳಾರಿ ಅಂದರು. ಜನಾರ್ದನ ರೆಡ್ಡಿ (Janardhan Reddy) ಗೋಡೆ ಕಾಂಪೌಂಡ್ ಬಗ್ಗೆ ಮಾತಾಡಿದರು. ಕೇವಲ ಪಾದಯಾತ್ರೆಗೆ ಬಂದು ನಮ್ಮಮೇಲೆ ಆರೋಪ ಮಾಡಿದ್ದರು. ನಮ್ಮನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?
ನ್ಯಾಯಯುತವಾಗಿ ಹಣ ದುಡಿದಿದ್ದು ಜನಾರ್ದನ ರೆಡ್ಡಿ. ನಿಮ್ಮಹಾಗೆ ಅಕ್ರಮವಾಗಿ ಹಣ ದುಡಿದಿಲ್ಲ. ಸಭೆಯಲ್ಲಿ ಆಸೆ ಆಕಾಂಕ್ಷೆ ಇಲ್ಲ. ಎರಡು ಮನೆ ಮಾರಿದ್ದೀನಿ, ಒಂದು ಮನೆ ಕಟ್ಟಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದೀರಿ. 14 ಸೈಟು ಪಡೆದಿದ್ದೀರಿ. 34 ಕೋಟಿ ರೂ. ಹಣ ಕೊಟ್ಟರೆ ಬಿಟ್ಟು ಬಿಡುತ್ತೇನೆ ಅಂದ್ರಿ. ಬಿಜೆಪಿಯವರು ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಹೇಳುತ್ತೀರಿ. ಇನ್ನೊಂದು ಕಡೆ 64 ಕೋಟಿ ರೂ. ಹಣ ಕೇಳುತ್ತೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ತವರಲ್ಲಿ ಕಟ್ಟೆಯೊಡೆದ ಆಕ್ರೋಶ – ರಾಜ್ಯಪಾಲರ ಪೋಸ್ಟರ್‌ಗೆ ಬೆಂಕಿ
ನಿಮಗೆ ಈಗಾಗಲೇ ವಯಸ್ಸಾಗಿದೆ. ಈ ಇಳಿವಯಸ್ಸಿನಲ್ಲಿ ಈ ರೀತಿ ಮಾಡೋದು ಸರಿಯಲ್ಲ. ಹಿಂದೆ ನಮಗೆ ತನಿಕೆ ಮಾಡೋಕೆ ಆಗಲ್ಲ, ರಾಜೀನಾಮೆ ಕೊಡಿ ಅಂತ ಹೇಳಿದ್ದೀರಿ. ಈಗ ಯಾವ ಮುಖ ಹೊತ್ತು ಮಾತಾಡುತ್ತಿದ್ದೀರಿ? ಡಿಕೆಶಿ ಅವರು ಇವತ್ತು ಮಾತನಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜಕೀಯ, ವೈಯಕ್ತಿಕ ಸೇಡು: ಸುರ್ಜೇವಾಲ
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ (DK Shivakumar), ಎಐಸಿಸಿ ಅಧ್ಯಕ್ಷ ಖರ್ಗೆ (Mallikarjun Kharge), ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi), ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು. ನೈತಿಕತೆ ಇದ್ದರೆ ರಾಜ್ಯದ ಸಿಎಂ ಆಗಿ ಮುಂದುವರೆಯಲು ಸಾಧ್ಯವಿಲ್ಲ. ಕೂಡಲೇ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ