ಬೆಂಗಳೂರು: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಎ.ಮಂಜು (A Manju) ಆಗ್ರಹಿಸಿದ್ದಾರೆ.
ಈ ಬಗ್ಗೆ ಜೆಪಿ ಭವನದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ.ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಮೇಲೆ ರಾಜೀನಾಮೆ ಕೊಡಬೇಕು ಅಂತ ಕಾನೂನಿನಲ್ಲಿ ಇಲ್ಲ. ಆದರೆ ನೈತಿಕತೆ ಅಂತ ಇದೆ. ಲಾಯರ್ ಆಗಿದ್ದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕು. ರಾಜೀನಾಮೆ ಕೊಟ್ಟು ತನಿಖೆ ನಡೆದರೆ ಕ್ಲಿಯರ್ ಆಗಿರುತ್ತದೆ ಅಂತ ವಿಪಕ್ಷಗಳಾದ ನಾವು ರಾಜೀನಾಮೆ ಕೇಳುತ್ತಿದ್ದೇವೆ. ಅವರು ಕೊಡಲ್ಲ ಅಂದರೆ ಕಾನೂನು ಇದೆ. ಅದರ ಪ್ರಕಾರವೇ ಕ್ರಮ ಆಗುತ್ತದೆ ಎಂದರು. ಇದನ್ನೂ ಓದಿ: ನನ್ನ ವಿರುದ್ಧದ ಕೇಸ್ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಬೇಡ: ಕುಮಾರಸ್ವಾಮಿ
Advertisement
Advertisement
ಕುಮಾರಸ್ವಾಮಿ (HD Kumaraswamy) ಕೇಸ್‌ಗೆ ರಾಜ್ಯಪಾಲರು ಅನುಮತಿ ಕೊಡಲಿಲ್ಲ ಎನ್ನುತ್ತಾರೆ. ಅವರು ಅಧಿಕಾರದಲ್ಲಿ ಇದ್ದಾಗ ನೋಡಿಕೊಳ್ಳಬೇಕಿತ್ತು. ನನಗೆ ಇರುವ ಮಾಹಿತಿ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಟೇ ಇದೆ. ಅದಕ್ಕೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ ಎನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೃದಯಾಘಾತ – ಬೆಳಗಾವಿಯಲ್ಲಿ ಯೋಧ ಸಾವು
Advertisement
ಸಿಎಂ ಅವರು ಮುಡಾದಲ್ಲಿ (MUDA Scam) 14 ಸೈಟ್ ಪಡೆದಿರೋದು ನಿಜ ಎಂದು ಸಾಬೀತು ಆಗಿದೆ. ಬದಲಾವಣೆ ಸೈಟ್ ಪಡೆದುಕೊಂಡಿದ್ದಾರೆ. 62 ಕೋಟಿ ರೂ. ಅಂತಾನೂ ಹೇಳಿದ್ದಾರೆ. ಸಿಎಂ ಅವರೇ ಒಪ್ಪಿಕೊಂಡ ಮೇಲೆ ಬೇರೆ ಯಾಕೆ ಮಾತನಾಡಬೇಕು. ಕುಮಾರಸ್ವಾಮಿ ಕೇಂದ್ರದ ಜೊತೆ ಸೇರಿ ಸರ್ಕಾರ ಅಸ್ಥಿರ ಮಾಡುತ್ತಿದ್ದಾರೆ ಎಂಬುದು ಅವರ ಭ್ರಮೆ. ಸರ್ಕಾರ ಅಸ್ಥಿರ ಮಾಡುವ ಅವಶ್ಯಕತೆ ನಮಗೆ ಇಲ್ಲ. ಅವರಿಗೆ 135 ಶಾಸಕರನ್ನು ಜನ ಕೊಟ್ಟಿದ್ದಾರೆ. ಅವರು ಅಧಿಕಾರ ಮಾಡಲಿ ಎಂದು ಜನ ಗೆಲ್ಲಿಸಿದ್ದಾರೆ. ಹೀಗೆ ಹಗರಣ ಮಾಡಿ ಅಂತ ಅಧಿಕಾರ ಕೊಟ್ಟಿಲ್ಲ. ಹಗರಣ ಮಾಡಿ ಅಂತ ಬಿಜೆಪಿ, ಕುಮಾರಸ್ವಾಮಿ ಹೇಳಿದ್ರಾ? ಸಿದ್ದರಾಮಯ್ಯ ಹಠ ಹಿಡಿಯಬಾರದು. ತನಿಖೆ ಎದುರಿಸಬೇಕು. ನಿರ್ದೋಷಿ ಅಂತ ಆದ ಮೇಲೆ ಮತ್ತೆ ಸಿಎಂ ಆಗಲಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು
Advertisement
ಸಿಎಂ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಇವರು ತನಿಖೆಗೆ ಅವಕಾಶ ಮಾಡಿಕೊಡಲಿ. ಸಿದ್ದರಾಮಯ್ಯ ನಾನು ಲಾಯರ್ ಅಂತಾರೆ. ಲಾಯರ್ ಆಗಿರುವುದರಿಂದ ನೈತಿಕತೆಯಿಂದ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನೀವು ತನಿಖೆಗೆ ಸಹಕಾರ ನೀಡಿದರೆ ದೇಶದಲ್ಲಿ ಒಳ್ಳೆಯ ರಾಜಕಾರಣಿ ಆಗುತ್ತೀರಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು
ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಯಾವ ಸರ್ಕಾರ ಇತ್ತು? ಅವಾಗ ಇವರು ಏನು ಮಾತನಾಡಿದರು? 14 ಸೈಟ್ ಪಡೆದಿರೋದು ಚೆಕ್ ರೀತಿ ಅಲ್ಲವಾ? ಅವರ ಹೆಂಡತಿ ಹೆಸರಿಗೆ ಸೈಟ್ ಬಂದಿದೆ ಅಂದರೆ ಅದು ಚೆಕ್ ರೀತಿನೇ ಅಲ್ವಾ? 62 ಕೋಟಿ ರೂ. ಕೊಡಿ ಅಂತ ಅವರೇ ಕೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಸಿಎಂ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಂಡೆ ಅನ್ನೋದೇ ಡೇಂಜರ್ – ಸಿದ್ದರಾಮಯ್ಯ ಸ್ಥಿತಿಗೆ ಪರೋಕ್ಷವಾಗಿ ಡಿಕೆಶಿ ಕಾರಣ ಎಂದ ಹೆಚ್ಡಿಕೆ