ಬೆಂಗಳೂರು: ನಮ್ಮಿಂದ ಸರ್ಕಾರ ಅಸ್ಥಿರವಾಗುವುದಿಲ್ಲ. ನಿಮ್ಮ ಜಗಳದಿಂದ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ.
ರಾಜ್ಯಪಾಲರ ಮೂಲಕ ಬಿಜೆಪಿ (BJP) ಕಾಂಗ್ರೆಸ್ ಸರ್ಕಾರ (Congress Government) ಅಸ್ಥಿರಗೊಳಿಸುವ ಆರೋಪವನ್ನು ನಿರಾಕರಿಸಿ ಪಬ್ಲಿಕ್ ಟಿವಿಗೆ ಅವರು ಹೇಳಿಕೆ ನೀಡಿದರು.
ನಿಮ್ಮ ಮನೆಯನ್ನು ನೀವು ಮೊದಲು ಸರಿ ಮಾಡಿಕೊಳ್ಳಿ, ಬೇರೆಯವರ ಮೇಲೆ ಆರೋಪ ಬಿಡಿ. ಬಿಜೆಪಿ ಯಾವ ಕಾರಣಕ್ಕೂಈ ಸರ್ಕಾರ ತೆಗೆಯುವ ಉದ್ದೇಶ ಹೊಂದಿಲ್ಲ. ಸಿಎಂ ಮೇಲೆ ಆರೋಪ ಬಂದಿದೆ. ಅವರು ಶುದ್ಧರಾಗಿ ಹೊರಗೆ ಬರಲಿ. ಪಾರದರ್ಶಕ ತನಿಖೆ ನಡೆಯಲಿ ಎಂದರು. ಇದನ್ನೂ ಓದಿ: Renukaswamy Case | ಪ್ರಮುಖ ಸಾಕ್ಷಿ, ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ!
ಸಿದ್ದರಾಮಯ್ಯ ಮೇಲೆ ನಮಗೇನೂ ಕೋಪ ಇಲ್ಲ. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳುತ್ತಿಲ್ಲ. ನಮಗೆ ವಿಪಕ್ಷ ಆಗಿ ಕೆಲಸ ಮಾಡಲು ಜನಾದೇಶ ಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಾಸಿಕ್ಯೂಷನ್ ವಾರ್ – ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾದ ಕಾಂಗ್ರೆಸ್
ಕಾಂಗ್ರೆಸ್ 58 ವರ್ಷ ಕಾಲ ದೇಶದಲ್ಲಿ ಆಡಳಿತ ಮಾಡಿದ್ದು, 92 ಬಾರಿ ಗಟ್ಟಿಮುಟ್ಟಾದ ಚುನಾಯಿತ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಉರುಳಿಸಿದೆ. INDIA ಒಕ್ಕೂಟದಲ್ಲಿರುವ ಅನೇಕ ಪಕ್ಷಗಳ ಸರ್ಕಾರಗಳನ್ನು ಇವರೇ ತೆಗೆದಿದ್ದಾರೆ. ಇವರು ಈಗ ನಮಗೆ ರಾಜ್ಯಪಾಲರ ವಿಚಾರದಲ್ಲಿ ಬೋಧನೆ ಮಾಡುತ್ತಿರುವುದು ಬಹಳ ದೊಡ್ಡ ಆಶ್ಚರ್ಯ ಎಂದು ಜೋಷಿಯವರು ಠಕ್ಕರ್ ನೀಡಿದರು.