ಬೆಂಗಳೂರು: ಮುಡಾ ಪ್ರಕರಣಕ್ಕೆ (MUDA Case) ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ. ರಾಮ ರಾಜ್ಯವೋ? ರಾವಣ ರಾಜ್ಯವೋ? ಅದು ನಿಮ್ಮ ಕೈಯಲ್ಲಿದೆ ಎಂಬ ಗಂಭೀರ ಅಭಿಪ್ರಾಯವನ್ನು ತನ್ನ ಆದೇಶದಲ್ಲಿ ವ್ಯಕ್ತಪಡಿಸಿತ್ತು.
ಸಿಎಂ ಸಿದ್ದರಾಮಯ್ಯ ವಿರುದ್ಧ ವಿರುದ್ಧ ಲೋಕಾಯುಕ್ತ ತನಿಖೆಗೆ ಗುರುವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ (A Special Court ) ಆದೇಶ ನೀಡಿತ್ತು. ಈ ಆದೇಶ ಪ್ರತಿಯಲ್ಲಿ ಆಡಳಿತ ಮತ್ತು ಆಡಳಿತಗಾರರ ಕುರಿತಾಗಿ ನ್ಯಾಯಾಧೀಶರಾದ ಸಂತೊಷ್ ಗಜಾನನ ಭಟ್ ಅವರು ವ್ಯಕ್ತಪಡಿಸಿದ ಕೆಲವು ಗಂಭೀರ ಅಭಿಪ್ರಾಯಗಳು ಗಮನ ಸೆಳೆದಿವೆ. ಇದನ್ನೂ ಓದಿ: ಸಿಎಂ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್ – RTI ಕಾರ್ಯಕರ್ತ ಸ್ಪಷ್ಟನೆ
Advertisement
Advertisement
ಕೋರ್ಟ್ ಹೇಳಿದ್ದು ಏನು?
ರಾಮ ಜೋಯಿಸರ `ರಾಜಧರ್ಮ ವಿತ್ ಲೆಸೆನ್ಸ್ ಆನ್ ರಾಜನೀತಿ’ ಕೃತಿಯ ಸಾಲುಗಳ ಉಲ್ಲೇಖಿಸಿದ ನ್ಯಾಯಾಧೀಶರು ಚುನಾಯಿತ ಜನಪ್ರತಿನಿಧಿಗಳ ಸರ್ಕಾರ ಆಡಳಿತದಲ್ಲಿದೆ. ಆಡಳಿತದಲ್ಲಿ ಇರುವವರು ರಾಜಧರ್ಮ ಪಾಲಿಸಬೇಕು.
Advertisement
ರಾಜಧರ್ಮ ಪಾಲಿಸದಿದ್ದರೆ ಅದು ರಾವಣ (Ravana) ರಾಜ್ಯ ಆಗಲಿದೆ. ರಾಮ (Rama) ರಾಜ್ಯವೋ? ರಾವಣ ರಾಜ್ಯವೋ? ಅದು ನಿಮ್ಮ ಕೈಯಲ್ಲಿದೆ. ಗಾಂಧೀಜಿ ರಾಮರಾಜ್ಯ, ಮಾದರಿ ಸಮಾಜದ ಕನಸು ಕಂಡಿದ್ದರು. ಆಡಳಿತದಲ್ಲಿ ಇರುವವರು ಪಾರದರ್ಶಕವಾದ ಆಡಳಿತ ನೀಡಬೇಕು. ಆಡಳಿತಗಾರರು ನೈತಿಕತೆ ಮತ್ತು ಸೌಹಾರ್ದತೆ ಪಾಲಿಸಬೇಕು. ರಾಜನ ನಡೆಯಲ್ಲಿ ಯಾವುದೇ ಸಂಶಯಗಳಿಗೆ ಅವಕಾಶವಿರಬಾರದು. ಇದನ್ನೂ ಓದಿ: MUDA Scam| ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ
Advertisement
ರಾಮ ಜೋಯಿಸರ `ರಾಜಧರ್ಮ ವಿತ್ ಲೆಸೆನ್ಸ್ ಆನ್ ರಾಜನೀತಿ’ ಕೃತಿಯಲ್ಲಿ ಮಹಾತ್ಮ ಗಾಂಧೀಜಿಯವರ (Gandhiji) ರಾಮರಾಜ್ಯದ ಕಲ್ಪನೆ, ಆಡಳಿತಗಾರರು ಪಾಲಿಸಬೇಕಾದ ನೈತಿಕತೆ, ಸೌಹಾರ್ದತೆ ಕುರಿತು ಹೇಳಿದ್ದರು. ಅಷ್ಟೇ ಅಲ್ಲದೇ ಮಹಾಭಾರತ ಶಾಂತಿ ಪರ್ವದಲ್ಲಿನ ಆಡಳಿತ ನಡೆಸುವ ರಾಜನ ನಡೆಯಲ್ಲಿ ಯಾವುದೇ ಸಂಶಯಗಳಿಗೆ ಅವಕಾಶವಿರಬಾರದು ಎಂಬ ಸಾಲುಗಳನ್ನು ಜಡ್ಜ್ ಉಲ್ಲೇಖಿಸಿದ್ದಾರೆ.