ಮೈಸೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ ಬರೆದ ಪತ್ರವನ್ನು ಅಧಿಕಾರಿಗಳು ತಿರುಚಿದ್ದಾರಾ ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ.
ಹೌದು. ಸಿಎಂ ಪತ್ನಿ ಬರೆದ ಬರೆದ ಪತ್ರ ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಪತ್ರದಿಂದಾಗಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿದ್ದಾರಾ ಎಂಬ ಅನುಮಾನ ಎದ್ದಿದೆ.
ಅನುಮಾನ ಯಾಕೆ?
ನಾವು ವಿಜಯನಗರ ಬಡಾವಣೆಯಲ್ಲೇ ಸೈಟ್ ನೀಡಬೇಕೆಂದು ಕೇಳಿಲ್ಲ. ಮುಡಾದಿಂದಲೇ 14 ಸೈಟ್ ಹಂಚಿಕೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಾರ್ವತಿ ಬರೆದ ಪತ್ರದಲ್ಲಿ ವಿಜಯನಗರದ 2 ಮತ್ತು ಮೂರನೇ ಹಂತದಲ್ಲೇ ನಿವೇಶನ ಕೊಡುವಂತೆ ಕೇಳಿದ್ದಾರಾ ಎಂಬ ಅನುಮಾನ ಎದ್ದಿದೆ. ಲಭ್ಯವಾಗಿರುವ ಪತ್ರದಲ್ಲಿ ವೈಟ್ನರ್ ಹಾಕಿ ಅಳಿಸಿದ್ದರಿಂದ ಈ ಪ್ರಶ್ನೆ ಮೂಡಿದೆ.
ಕೆಸರೆ ಗ್ರಾಮದ ಜಮೀನನ್ನು ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಮುಡಾ ಸ್ವಾಧಿನ ಪಡಿಸಿಕೊಂಡಿತ್ತು. ಈ ಜಮೀನನ್ನು ಸಿಎಂ ಪತ್ನಿಯ ಸಹೋದರ 2004 ರಲ್ಲಿ ಖರೀದಿ ಮಾಡುತ್ತಾರೆ. ಮುಡಾ ಸ್ವಾಧೀನ ಪಡಿಸಿಕೊಂಡ ನಿವೇಶನ ಹಂಚಿದ ಜಾಗವನ್ನು ಸಿಎಂ ಸಹೋದರ ಖರೀದಿ ಮಾಡಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ ಎದ್ದಿದೆ. ಸಿಎಂ ಪತ್ನಿ ಪ್ರಾಧಿಕಾರಕ್ಕೆ ಬರೆದ ಪತ್ರದಿಂದ ಈಗ ಈ ಎಲ್ಲಾ ಅನುಮಾನಗಳು ಎದ್ದಿದೆ ಮತ್ತು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.