ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕುಟುಂಬದ ವಿರುದ್ಧದ ಮುಡಾ ಸೈಟ್ ಹಂಚಿಕೆ ಹಗರಣದ ತನಿಖೆ ಮತ್ತಷ್ಟು ಚುರುಕಾಗಿದೆ. ಮೊನ್ನೆ ಮೊನ್ನೆಯಷ್ಟೇ ಮುಡಾ ಅಧಿಕಾರಿಗಳನ್ನು (MUDA Officers) ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿಲ್ಡರ್‌ಗೆ ಶಾಕ್ ಕೊಟ್ಟಿದ್ದಾರೆ.
ಮೈಸೂರು, ಬೆಂಗಳೂರು ಸೇರಿದಂತೆ 9 ಕಡೆ ರೇಡ್ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ರೇಡ್‌ನಲ್ಲಿ ಸಚಿವ ಮಹದೇವಪ್ಪ ಅಣ್ಣನ ಮಗ, ಆಪ್ತ ಶಿವಣ್ಣ, ಮುಡಾ ಮಾಜಿ ಆಯುಕ್ತರಾದ ದಿನೇಶ್ ಕುಮಾರ್, ನಟೇಶ್ ಅಷ್ಟೇ ಅಲ್ಲ, ಸಿಎಂ ಆಪ್ತ ರಾಕೇಶ್ ಪಾಪಣ್ಣ ಹೆಸರು ಕೇಳಿ ಬಂದಿದೆ. ಹಾಗಾದರೆ, ಎಲ್ಲೆಲ್ಲಿ ಇವತ್ತು ರೇಡ್ ಆಯ್ತು? ಯರ‍್ಯಾರಿಗೆ ಇಡಿ ಬಿಸಿ ಮುಟ್ಟಿದೆ? ಸೆಟ್ಲ್‌ಮೆಂಟ್ ಡೀಡ್ ಹೆಸರಲ್ಲಿ ಏನೇನ್ ಡೀಲಾಗಿದೆ ಅನ್ನೋದನ್ನು ನೋಡೋಣ.
Advertisement
Advertisement
ದಾಳಿ 1- ಮಂಜುನಾಥ್, ಬಿಲ್ಡರ್
* ಬೆಂಗಳೂರಿನ ಜೆ.ಪಿ.ನಗರ ನಿವಾಸ, ಕಚೇರಿ
* ಮುಡಾದಿಂದ 50:50 ನಿವೇಶನ ಪಡೆದು ಹಂಚಿಕೆ
* ಎಚ್‌ಸಿ ಮಹದೇವಪ್ಪ ಅಣ್ಣನ ಮಗ ನವೀನ್ ಬೋಸ್‌ಗೆ 50*80 ಸೈಟ್
* ಆಪ್ತ ಶಿವಣ್ಣಗೆ 60*40 ಸೈಟ್ ವರ್ಗಾವಣೆ
Advertisement
ದಾಳಿ 2 – ದಿನೇಶ್‌ಕುಮಾರ್, ಮಾಜಿ ಆಯುಕ್ತ
* ಬೆಂಗಳೂರಿನ ಹೆಬ್ಬಾಳ, ಬಾಣಸವಾಡಿಯಲ್ಲಿ ದಾಳಿ
* 2022ರಿಂದ 2024ವರೆಗೆ ಮುಡಾ ಆಯುಕ್ತ
* 50:50 ಅನುಪಾತದಲ್ಲಿ 1000ಕ್ಕೂ ಹೆಚ್ಚು ಸೈಟ್ ಹಂಚಿಕೆ
* ಇವರ ಕಾಲದಲ್ಲೇ ಸಿಎಂ ಪತ್ನಿ ದಾಖಲೆ ಮೇಲೆ ವೈಟ್‌ನರ್ ಆರೋಪ
* ಇ.ಡಿ ದಾಳಿ ಸುದ್ದಿ ತಿಳಿದು ವಾಕಿಂಗ್‌ಗೆ ಹೋಗಿ ಎಸ್ಕೇಪ್, ಮೊಬೈಲ್ ಸ್ವಿಚ್ ಆಫ್
Advertisement
ದಾಳಿ 3- ನಟೇಶ್, ಮಾಜಿ ಆಯುಕ್ತ
* ಬೆಂಗಳೂರಿನ ಮಲ್ಲೇಶ್ವರಂ ನಿವಾಸ
* 2020ರಿಂದ 2022ವರೆಗೆ ಮೂಡಾ ಆಯುಕ್ತ
* ಸಿಎಂ ಪತ್ನಿಗೆ 50:50 ಅನುಪಾತದಲ್ಲಿ 14 ಸೈಟ್ ಹಂಚಿಕೆ
* ನಟೇಶ್ ಅವಧಿಯಲ್ಲಿ 500ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆ
* ಬದಲಿ ನಿವೇಶನಗಳೂ ಕೂಡ ಹಂಚಿಕೆ
ಮುಡಾ ಕೇಸಲ್ಲಿ ಇಡಿ ಶಾಕ್
* ದಾಳಿ 4- ರಾಕೇಶ್ ಪಾಪಣ್ಣ, ಸಿಎಂ ಆಪ್ತ
* ಮೈಸೂರಿನ ಹಿನಕಲ್ ನಿವಾಸದ ಮೇಲೆ ದಾಳಿ
* 50:50 ಅನುಪಾತದಲ್ಲಿ 98,850 ಚದರ ಅಡಿ ಜಾಗ ಪರಿಹಾರ
* ಇದೇ ವರ್ಷದ ಜೂನ್‌ನಲ್ಲಿ ರಾಕೇಶ್‌ಗೆ ಕೊಟ್ಟಿರುವ ದಿನೇಶ್ ಕುಮಾರ್
* 50:50 ಅನುಪಾತದ ನಿವೇಶನ ಹಂಚಿಕೆಯಲ್ಲೂ ರಾಕೇಶ್ ಮಧ್ಯಸ್ಥಿಕೆ?
(ರಾಕೇಶ್ ಪಾಪಣ್ಣ ಮನೆಗೆ ಪ್ರಿಂಟರ್ ತರಿಸಿಕೊಂಡು ಇ.ಡಿ ಕಾರ್ಯಾಚರಣೆ ನಡೆಸಿದೆ)
* ಮೈಸೂರಿನಲ್ಲಿ ಕಾರ್ತಿಕ್ ಲೇಔಟ್ ಮಾಡಿರುವ ಬಿಲ್ಡರ್ ಮಂಜುನಾಥ್
* ಬಡಾವಣೆ ರಚನೆ ವೇಳೆ ತಮಗೆ ನ್ಯಾಯ ಸಮ್ಮತವಾಗಿ ಬೇಕಾದಷ್ಟು ಸಂಖ್ಯೆ ನಿವೇಶನ ರಚನೆ ಆಗಿಲ್ಲ
* ಮುಡಾ ನಕ್ಷೆ ಮಂಜೂರಿನಲ್ಲಿ ನನಗೆ ಅನ್ಯಾಯ ಆಗಿದೆ ಅಂತ ಮುಡಾಗೆ ಅರ್ಜಿ
* ಈ ಅರ್ಜಿಯಂತೆ ಬಿಲ್ಡರ್ ಮಂಜುನಾಥ್‌ಗೆ ಪರ್ಯಾಯ ನಿವೇಶನ ಹಂಚಿಕೆ
* ಈ ವಿಚಾರದಲ್ಲಿ ಕೆಲವು ಜನಪ್ರತಿನಿಧಿಗಳ ಕಣ್ಣು ಕೆಂಪಾಗಾಗಿತ್ತು
* ಅವರನ್ನು ಸಮಾಧಾನ ಪಡಿಸಲು ಜನಪ್ರತಿನಿಧಿಗಳ ಸಂಬಂಧಿಕರಿಗೆ ನಿವೇಶನ
* ಸೆಟಲ್‌ಮೆಂಟ್ ಡೀಡ್ ಹೆಸರಿನಲ್ಲಿ ಬೇರೆ ಬೇರೆ ಕಡೆ ನಿವೇಶನ ಹಂಚಿಕೆ