– ದಾಖಲೆ ಬಿಡುಗಡೆ ಮಾಡಿದ ದೂರುದಾರ ಸ್ನೇಹಮಯಿ ಕೃಷ್ಣ
ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿಯವರಿಗೆ ಕಳೆದುಕೊಂಡ ಜಮೀನಿಗೆ ಮಾರುಕಟ್ಟೆ ದರ ನೀಡಲು ಮುಡಾ (MUDA) ಮುಂದಾಗಿತ್ತು. ಆದರೆ ಮುಡಾದ ಪ್ರಸ್ತಾಪವನ್ನು ಪಾರ್ವತಿ ಒಪ್ಪಿರಲಿಲ್ಲ ಎಂದು ತಿಳಿದುಬಂದಿದೆ.
Advertisement
ಹೌದು, ಈ ವಿಚಾರವಾಗಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. 2014ರಲ್ಲಿ ಸಿಎಂ ಪತ್ನಿ ಪಾರ್ವತಿಯವರು ಮುಡಾಗೆ ಮನವಿ ಪತ್ರ ಬರೆದಿದ್ದರು. ನನ್ನ ಜಮೀನಿನಲ್ಲಿ ಮುಡಾ ನಿವೇಶನ ಮಾಡಿ ಹಂಚಿದೆ. ಇದಕ್ಕೆ ಪರಿಹಾರ ನೀಡುವಂತೆ ಪಾರ್ವತಿಯವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಾಸಿಕ್ಯೂಷನ್ ವಾರ್ – ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾದ ಕಾಂಗ್ರೆಸ್
Advertisement
Advertisement
ಸಿಎಂ ಪತ್ನಿಯವರ ಮನವಿಗೆ ಮುಡಾ ಮಾರುಕಟ್ಟೆ ದರ ಅಥವಾ 60:40 ಅನುಪಾತದಲ್ಲಿ ಪರಿಹಾರ ನೀಡಲು ನಿರ್ಧರಿಸಿತ್ತು. ಇದಕ್ಕೆ ಪಾರ್ವತಿಯವರು ನನಗೆ ಬದಲಿ ಜಮೀನಿನನ್ನೇ ಕೊಡಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಸಭೆಯ ನಡಾವಳಿಯಲ್ಲಿ ಮುಡಾದ ಅಂದಿನ ಅಧ್ಯಕ್ಷ ಡಿ.ಧೃವಕುಮಾರ್ ನಮೂದಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಅವರ ಆಪ್ತ ಧೃವಕುಮಾರ್ ಮುಡಾ ಅಧ್ಯಕ್ಷರಾಗಿದ್ದರು.
Advertisement
ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ಮುಡಾಗೆ ಪತ್ನಿ ಪಾರ್ವತಿ ಪತ್ರವನ್ನೇ ಬರೆದಿಲ್ಲ ಎಂದು ಬಹಿರಂಗವಾಗಿಯೇ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಪತ್ನಿ ಮುಡಾಗೆ ಪತ್ರ ಬರೆದ ಬಗ್ಗೆ ರಾಜ್ಯಪಾಲರಿಗೆ ನೀಡಿದ ಉತ್ತರದಲ್ಲಿ ಸಿಎಂ ಉಲ್ಲೇಖ ಮಾಡಿದ್ದರು. ಆದರೆ ಪಾರ್ವತಿ ಅವರು ಮಾರುಕಟ್ಟೆ ದರ ಅಥವಾ 60:40 ಅನುಪಾತದಲ್ಲಿ ಪರಿಹಾರ ಬೇಡ ಎಂದು ಹೇಳಿ ಬದಲಿ ಜಮೀನು ನೀಡಬೇಕೆಂದು ಬರೆದ ಪತ್ರ ರಿವೀಲ್ ಆಗುವುದರೊಂದಿಗೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: Renukaswamy Case | ಪ್ರಮುಖ ಸಾಕ್ಷಿ, ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ!