ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸದ್ಯಕ್ಕೆ ಸೇಫ್. ಆದರೆ ಮುಂದೆಯೂ ಅದೇ ಸ್ಟ್ಯಾಂಡ್ ಇರುತ್ತಾ? ಇದು ಕಾಂಗ್ರೆಸ್ (Congress) ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಕಾಂಗ್ರೆಸ್ ಹೈಕಮಾಂಡ್ ಬಳಿ ಪ್ಲ್ಯಾನ್ ‘ಬಿ’ ಗೇಮ್ ಪ್ಲ್ಯಾನ್ ಇದೆ ಎಂಬ ಮಾಹಿತಿ ಹೊರಬರುತ್ತಿದೆ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಪರ ನಿಲ್ಲೋದು ಪ್ಲ್ಯಾನ್ `ಎ’. ಆದರೆ ಮುಂದೆ ಹೆಚ್ಚು ಕಮ್ಮಿಯಾದ್ರೆ ಪ್ಲ್ಯಾನ್ ‘ಬಿ’ ಅಗತ್ಯತೆ ಬಗ್ಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಕೋರ್ಟ್ ಆದೇಶ ನೋಡಿಕೊಂಡು ಪ್ಲ್ಯಾನ್ ‘ಬಿ’ ಕಾರ್ಯಾಚರಣೆಗೆ ತಯಾರಿ ನಡೆಸುವ ಸಾಧ್ಯತೆ ಇದೆ.
ಇನ್ನು ಈಗಾಗಲೇ ಎಐಸಿಸಿ (AICC) ಪ್ರತ್ಯೇಕವಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಸಿಎಂ ವಿರುದ್ಧದ ಆರೋಪಗಳ ಬಗ್ಗೆ ಕಾನೂನು ತಜ್ಞರಿಂದ ಪ್ರತ್ಯೇಕ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ರಾಜಕೀಯ ಹೋರಾಟದಲ್ಲಿ ಕಡೆ ತನಕ ನಿಲ್ಲಬೇಕೆಂಬ ಸಂದೇಶ ಕೊಟ್ಟಾಯಿತು. ಆದರೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾದರೆ ಪ್ಲ್ಯಾನ್ ‘ಬಿ’ ತಯಾರಿಗೆ ತಂತ್ರವೂ ಇದೆ ಅಂತೆ. ಇದನ್ನೂ ಓದಿ: ರಾಖಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ – ಮೋದಿಗೆ ರಾಖಿ ಕಟ್ಟಿ ವಿದ್ಯಾರ್ಥಿಗಳ ಸಂಭ್ರಮ
ಈಗಾಗಲೇ ಎಐಸಿಸಿ ನಾಯಕರ ಮಟ್ಟದಲ್ಲಿ ಪ್ಲ್ಯಾನ್ ‘ಬಿ’ ಬ್ಲೂಪ್ರಿಂಟ್ ಬಗ್ಗೆ ಚರ್ಚೆ ಆಗಿದ್ದು, ಮುಂದಿನ ವಾರದ ಬಳಿಕ ಎಐಸಿಸಿಯಿಂದ ಪ್ಲ್ಯಾನ್ ‘ಬಿ’ ಬ್ಲೂಪ್ರಿಂಟ್ ರೆಡಿಯಾಗುವ ಸಾಧ್ಯತೆ ಇದೆ. ಕರ್ನಾಟಕದ ರಾಜಕೀಯ ಬೆಳವಣಿಗೆ, ಜಾತಿ ರಾಜಕಾರಣವೇ ಪ್ಲ್ಯಾನ್ `ಬಿ’ಗೆ ಆಧಾರ ಎನ್ನಲಾಗುತ್ತಿದೆ. ಪ್ಲ್ಯಾನ್ ‘ಬಿ’ ಸಿದ್ಧವಾದರೆ ಆಗಲೂ ಸಿಎಂ ಸಿದ್ದರಾಮಯ್ಯ ಸೇಫ್ ಆಗ್ತಾರಾ? ಅಥವಾ ಸಂಕಟವೋ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಆ.22ಕ್ಕೆ ಸಿಎಂ ಬಲ ಪ್ರದರ್ಶನ, ಆ.23ಕ್ಕೆ ಹೈಕಮಾಂಡ್‌ಗೆ ವರದಿ ಸಲ್ಲಿಕೆ!