ಮೈಸೂರು: ಮುಡಾ 50:50 ಸೈಟು ಹಂಚಿಕೆ ಹಗರಣ (50:50 Site Scam) ಮತ್ತೊಂದು ತಿರುವು, ಸಂಚಲನ ಸೃಷ್ಟಿಸಿದೆ. 50:50 ಅನುಪಾತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹೊತ್ತಲ್ಲೇ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ `ಪಬ್ಲಿಕ್ ಟಿವಿ’ಗೆ (Public TV) ಲಭ್ಯವಾಗಿದೆ.
ಈ ಪಟ್ಟಿಯಲ್ಲಿ ಇರುವ ಬೇರೆಯವರ ಹೆಸರು ಇದುವರೆಗೆ ಬಹಿರಂಗ ಆಗಿರಲಿಲ್ಲ. ಈಗ ಅದರ ಮೊದಲ ಕಂತು ಬಹಿರಂಗವಾಗಿದ್ದು 300 ಜನರಿಗೆ ಸೈಟ್ ಸಿಕ್ಕಿರುವ ಲಿಸ್ಟ್ ಬೆಳಕಿಗೆ ಬಂದಿವೆ. ಪ್ರಾಧಿಕಾರದಲ್ಲಿ ಸೈಟ್‌ಗಳನ್ನು ಕಡ್ಲೇಪುರಿ ಥರ ಹಂಚಲಾಗಿದೆ. 50:50 ಅನುಪಾತದ ಸೈಟ್ ಹಂಚುವಲ್ಲಿ ಶರವೇಗವೂ ಕೂಡ ಇರೋದು ಗೊತ್ತಾಗಿದೆ. ಒಬ್ಬ ವ್ಯಕ್ತಿಗೆ ಮುಡಾದಿಂದ (MUDA) ಪರಿಹಾರ ರೂಪದಲ್ಲಿ ಹತ್ತಲ್ಲ, ಹದಿನೈದಲ್ಲ ಬರೋಬ್ಬರಿ 25 ಸೈಟ್ ಸಿಕ್ಕಿವೆ. ಇದನ್ನೂ ಓದಿ: ನೀಟ್ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್, ಬ್ಲ್ಯಾಕ್‌ಮೇಲ್ – ಕಾಮುಕರು ಅರೆಸ್ಟ್
ಅಬ್ದುಲ್ ವಾಜಿದ್‌ಗೆ 26 ಸೈಟ್
ವಾಜಿದ್ ವಂಶಸ್ಥರ ಜಮೀನನ್ನು 1962ರಲ್ಲಿ ಸ್ವಾಧೀನ ಪಡಿಸಿ ಕೊಳ್ಳಲಾಗಿತ್ತು. 61 ವರ್ಷಗಳ ಬಳಿಕ 2022ರ ಡಿಸೆಂಬರ್‌ನಲ್ಲಿ ಮುಡಾಗೆ ಅರ್ಜಿ ಹಾಕಲಾಗಿದೆ. ಮುಡಾ ಆಯುಕ್ತರು 2023ರ ಫೆಬ್ರವರಿಯಲ್ಲಿ ಅಂದರೆ ಅರ್ಜಿ ಕೊಟ್ಟ ಎರಡೇ ತಿಂಗಳಿಗೆ 25 ಸೈಟ್ ಮಂಜೂರು ಮಾಡಿದ್ದಾರೆ. ಸರ್ಕಾರದ ಕಾನೂನು ಹೇಳುವಂತೆ, 2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗಲ್ಲ. ಆದರೆ, ಇದು 1962ರ ಕೇಸ್ ಎಂಬುದು ದಾಖಲೆಯಲ್ಲಿದೆ. ಇದನ್ನೂ ಓದಿ: ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು
ಯರ‍್ಯಾರಿಗೆ ಎಷ್ಟೆಷ್ಟು ಮುಡಾ ಸೈಟ್?
ಸೈಯದ್ ಯೂಸಫ್: 21 ಸೈಟ್
ಮಲ್ಲಪ್ಪ: 19 ಸೈಟ್
ಎಸ್.ವಿ.ವೆಂಕಟಪ್ಪ: 17 ಸೈಟ್
ದೇವಮ್ಮ: 16 ಸೈಟ್
ಮಹದೇವು & ಗೀತಾ: 12 ಸೈಟ್
ಸುರೇಶಮ್ಮ: 11 ಸೈಟ್
ವೈರಮುಡಿ: 10 ಸೈಟ್
ಚೌಡಯ್ಯ: 7 ಸೈಟ್
ಇನ್ನು, ಕಡತಗಳು ಮಿಸ್ಸಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಜೊತೆಗೆ, ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಆಯ್ದ ಸೈಟ್‌ಗಳ ಕಡತಗಳೇ ಮಾಯವಾಗಿರೋ ವಿಚಾರವನ್ನು ಲೋಕಾಯುಕ್ತ ನೋಡಿಕೊಳ್ಳುತ್ತೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮಧ್ಯೆ, ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಡ್ರಿಲ್ ಮಾಡಿದೆ.