ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಕುಟುಂಬಕ್ಕೆ ಸಂಬಂಧಿಸಿದ ಮುಡಾ ಹಗರಣ (MUDA Scam) ಆರೋಪ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಎಂ ಪತ್ನಿ ಪಾರ್ವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೇಳಿದ್ದು 13 ಸೈಟ್. ಆದರೆ ಪ್ರಾಧಿಕಾರ ಅವರಿಗೆ ಖಾತೆ ಮಾಡಿಕೊಟ್ಟಿದ್ದು 14 ಸೈಟ್‌ಗೆ ಎಂಬ ಅಂಶ ಈಗ ಬಯಲಾಗಿದೆ. ಇದನ್ನೂ ಓದಿ: Manipur | ರಾಕೆಟ್ ದಾಳಿ ಬೆನ್ನಲ್ಲೇ ಮಷೀನ್ ಗನ್ ಬಳಕೆಗೆ ಮುಂದಾದ ಪೊಲೀಸರು – ಕಾಂಗ್ರೆಸ್ ವಿರೋಧ
Advertisement
ಸಿಎಂ ಪತ್ನಿ ಪಾರ್ವತಿ ಹೆಸರಲ್ಲಿ 13 ಸೈಟ್ ಖಾತೆಗಾಗಿ ಅರ್ಜಿ ಹಾಕಲಾಗಿತ್ತು. ಜನವರಿ 13, 2022 ರಂದು ಕ್ರಯಪತ್ರವನ್ನು ನೋಂದಣಿ ಮಾಡಲಾಗಿದೆ. ದನ್ನು ಖಾತೆ ಮಾಡಿಕೊಡಿ ಎಂದು ಪಾರ್ವತಿ ಅವರ ಹೆಸರಿನಲ್ಲಿ ಸಿಎಂ ಖಾಸಗಿ ಆಪ್ತ ಸಹಾಯಕ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್, ಪೊಲೀಸರ ಲೋಪ ಮುಚ್ಚಿ ಹಾಕಲು ಸಿಕ್ಕ ಸಿಕ್ಕವರು ಅರೆಸ್ಟ್: ಹೆಚ್‌ಡಿಕೆ
Advertisement
ವಿಜಯನಗರ 3 ನೇ ಹಂತ ಸಿ,ಡಿ,ಇ & ಜಿ ಬ್ಲಾಕ್ ನಲ್ಲಿ ನಿ.ಸಂ. 25, 331,332,213, 214, 215, 05 ಮತ್ತು ವಿಜಯನಗರ 4 ನೇ ಹಂತ 2 ನೇ ಫೇಸ್ ನಿ. ಸಂಖ್ಯೆ 5108, 5085, 11189, 10855, 12065, ಮತ್ತು 12068 ಸಂಖ್ಯೆಯ ನಿವೇಶನ ಖಾತೆಗಾಗಿ ಜನವರಿ 14, 2022 ರಂದು ಅರ್ಜಿ ಹಾಕಿದ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಹಿರಂಗವಾಗಿದೆ.
Advertisement