ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟು (MUDA Site) ಹಂಚಿಕೆ ಹಗರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸಿಎಂ ಸಿದ್ದರಾಮಯ್ಯ (Siddaramaiah) ವರದಿ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮುಡಾ ಸೈಟು ಹಂಚಿಕೆಯಲ್ಲಿ ಅಕ್ರಮವಾಗಿಲ್ಲ. ಕಾನೂನುಬದ್ಧವಾಗಿ ಸೈಟು ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ವರದಿ ನೀಡಿದ್ದಾರೆ. ಈ ಬೆನ್ನಲ್ಲೇ ಮೈಸೂರಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಆಪ್ತ, ಮುಡಾ ಅಧ್ಯಕ್ಷ ಕೆ.ಮರೀಗೌಡ ಮತ್ತು ಕಾಂಗ್ರೆಸ್ ಶಾಸಕರು ಹಲವು ವಿಚಾರ ಬಯಲು ಮಾಡಿದ್ರು.
Advertisement
Advertisement
ಸಿಎಂ ಪುತ್ರ ಯತೀಂದ್ರ ಬಗ್ಗೆ ಆರೋಪ ಮಾಡಿದ್ದ ಎಂಎಲ್‌ಸಿ ಹೆಚ್ ವಿಶ್ವನಾಥ್ ಕೂಡ ಪತ್ನಿ ಹೆಸರಲ್ಲಿ ಬದಲಿ ನಿವೇಶನ ಪಡೆದಿದ್ದಾರೆ ಎಂದು ಮುಡಾ ಅಧ್ಯಕ್ಷ ಮರೀಗೌಡ ಆರೋಪಿಸಿದರಲ್ಲದೇ ರಾಜಕೀಯವಾಗಿ ದಿವಾಳಿಯಾಗಿರುವ ಹೆಚ್. ವಿಶ್ವನಾಥ್ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?
Advertisement
Advertisement
ಇದೇ ವೇಳೆ, ಸಿಎಂ ಆಪ್ತ ಪಾಪಣ್ಣಗೆ ಹಂಚಲಾಗಿದ್ದ ಬದಲಿ ನಿವೇಶನ ಹಂಚಿಕೆಗೆ ತಡೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮರೀಗೌಡ, ಹಂಚಿಕೆ ವೇಳೆ ತಪ್ಪಾಗಿದೆ. ಇದು ಗೊತ್ತಾದ ಕೂಡಲೇ ತಡೆ ಹಿಡಿದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮುಡಾ ಹಗರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸ್ತಿಲ್ಲ, ಎಸ್‌ಐಟಿಗೆ ತನಿಖೆ ವಹಿಸುವ ಅಗತ್ಯವೇ ಇಲ್ಲ ಎಂದು ವಿಪಕ್ಷಗಳಿಗೆ ಗೃಹ ಸಚಿವ ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ – ನಾಲ್ವರು ಸೈನಿಕರು ಹುತಾತ್ಮ!