ಬೆಂಗಳೂರು: ಸಿಎಂ ವಿರುದ್ಧದ ಮುಡಾ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯಕ್ತ ಪೊಲೀಸರು ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ. ಇದೇ ವಾರದ ಅಂತ್ಯದೊಳಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ಈ ಮುನ್ನ ತನಿಖೆ ನಡೆಸಿದ ತನಿಖಾಧಿಕಾರಿ ಎಸ್‌ಪಿ ಉದೇಶ್, ತನ್ನ ಹಿರಿಯ ಅಧಿಕಾರಿಗಳಾದ ಐಜಿಪಿ ಸುಬ್ರಹ್ಮಣ್ಣೇಶ್ವರ ರಾವ್ ಮತ್ತು ಎಡಿಜಿಪಿ ಮನೀಶ್ ಕರ್ಬೀಕರ್‌ಗೆ ವರದಿಯ ಪ್ರತ್ಯೇಕ ಪ್ರತಿ ಸಲ್ಲಿಸಿದ್ದಾರೆ.
Advertisement
ವರದಿ ಪರಿಶೀಲಿಸಿ, ಇದುವರೆಗೆ ನಡೆದಿರುವ ತನಿಖೆಯ ಸರಿ-ತಪ್ಪುಗಳ ಪರಿಶೀಲನೆ ಮಾಡಲಿರುವ ಹಿರಿಯ ಅಧಿಕಾರಿಗಳು, ಮತ್ತೆ ಲೋಕಾಯುಕ್ತ ಎಸ್‌ಪಿ ಉದೇಶ್‌ಗೆ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲು ಸೂಚಿಸಲಿದ್ದಾರೆ.
Advertisement
ಮೂಲಗಳ ಮಾಹಿತಿ ಪ್ರಕಾರ, ಇದೇ ವಾರದ ಅಂತ್ಯದೊಳಗೆ ಮುಡಾ ಹಗರಣದ ಅಂತಿಮ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಲಿದ್ದಾರೆ.