– ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲರು ಸ್ವಯಂ ಪ್ರೇರಣೆಯಿಂದ ವರ್ತಿಸಬಹುದು: ಕೋರ್ಟ್
ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.31 ಕ್ಕೆ ಹೈಕೋರ್ಟ್ ಮುಂದೂಡಿದೆ.
Advertisement
ಶನಿವಾರ ಬೆಳಗ್ಗೆ 10:30 ಕ್ಕೆ ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಆ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ. ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದೆ.
Advertisement
Advertisement
ಆಪಾದಿತ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸ್ವಯಂ ಪ್ರೇರಣೆಯಿಂದ ವರ್ತಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಈ ಸಂದರ್ಭದಲ್ಲಿ ಅವರು ಸಂಪುಟದ ಇಚ್ಛೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
ರಾಜ್ಯಪಾಲರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ವಿಷಯ ತಿಳಿಸಿದೆ. ರಾಜ್ಯ ಸಚಿವ ಸಂಪುಟದ ಅನುಮತಿಯಿಲ್ಲದೆ ರಾಜ್ಯಪಾಲರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಿರುವುದರಿಂದ ರಾಜ್ಯಪಾಲರ ಕ್ರಮ ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದರು.
ಮುಖ್ಯಮಂತ್ರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಸಂಸದ ಅಭಿಷೇಕ್ ಮನುಸಿಂಘ್ವಿ ಅವರು, ಅಕ್ರಮ ಭೂಮಿ ಮಂಜೂರಾತಿಗೆ ಸಂಬAಧಿಸಿದAತೆ ಸಿದ್ದರಾಮಯ್ಯ ಎಲ್ಲಿಯೂ ಯಾವುದೇ ನಿರ್ಧಾರ ಅಥವಾ ಶಿಫಾರಸು ಮಾಡಿಲ್ಲ ಎಂದು ತಿಳಿಸಿದರು.
ಕೆಲ ಪ್ರತಿವಾದಿಗಳು ಮಾತ್ರ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಎಲ್ಲಾ ದೂರುದಾರರು ಆಕ್ಷೇಪಣೆ ಸಲ್ಲಿಕೆ ಮಾಡಿಲ್ಲ. ರಾಜ್ಯಪಾಲರ ಪರವಾಗಿ ಈಗಲೂ ಆಕ್ಷೇಪಣೆ ಸಲ್ಲಿಸಿ ವಾದ ಮಾಡಲಿ ಎಂದರು. ರಾಜ್ಯಪಾಲರ ಪರ ವಕೀಲರು ವಾದಿಸಿ, ರಾಜ್ಯಪಾಲರು ಯಾವುದೇ ಆಕ್ಷೇಪಣೆ ಸಲ್ಲಿಕೆ ಮಾಡುವುದಿಲ್ಲ. ಅವಶ್ಯಕತೆ ಇರುವ ದಾಖಲಾತಿ ಸಲ್ಲಿಕೆ ಮಾಡಲಿದ್ದಾರೆ ಅಷ್ಟೇ. ಆಕ್ಷೇಪಣೆ ಸಲ್ಲಿಕೆ ಮಾಡುವುದಿಲ್ಲ ಎಂದು ಸಿಂಘ್ವಿ ತಿಳಿಸಿದರು. ದೂರುದಾರ ಪ್ರದೀಪ್ ಪರ ವಕೀಲ ಪ್ರಭುಲಿಂಗ ನಾವದಗಿ ಹೇಳಿಕೆಯನ್ನು ಹೈಕೋರ್ಟ್ ದಾಖಲಿಸಿತು.
ಕಳೆದ ಬಾರಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ವಾದ ಮಂಡನೆ ಮಾಡಿದ್ದೆ. 17ಎ ಬಗ್ಗೆ ಉಲ್ಲೇಖಿಸಿ ವಾದ ಮಂಡನೆ ಮಾಡಿದ್ದೆ. 17ಎ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೆಲಸ ಮಾಡುತ್ತದೆ ಎಂಬುದನ್ನು ಉಲ್ಲೇಖಿಸಿ ವಾದಿಸಿದರು. 17ಎ ಅನುಮತಿಯನ್ನು ತನಿಖಾ ಸಂಸ್ಥೆ ಪಡೆಯೋದು. ರಾಜ್ಯಪಾಲರಿಗೆ ಈ ಬಗ್ಗೆ ಅಧಿಕಾರ ಇರುವುದಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ, ಸುಪ್ರೀಂ ಕೋರ್ಟ್ನ ಕೆಲವು ಆದೇಶಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ದೂರುದಾರರು 17ಎ ಅಲ್ಲಿ ಅನುಮತಿಯನ್ನು ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಜೊತೆಗೆ ರಾಜ್ಯಪಾಲರಿಗೂ ಕೂಡ ಇದನ್ನ ಪರಿಶೀಲನೆ ಮಾಡಲು ಅವಕಾಶ ಇಲ್ಲ. ಪೂರ್ವಾನುಮತಿ ಬೇಕಿಲ್ಲ ಎಂದು ಹೇಳಿದ್ದಾರೆ. ಟಿಜೆ ಅಬ್ರಹಾಂ ದೂರು ನೀಡುವಾಗ ಉಲ್ಲೇಖ ಆಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ಸುಳ್ಳು ಮಾಹಿತಿ ನೀಡಿರೋ ಅಬ್ರಹಾಂಗೆ ರಾಜ್ಯಪಾಲರು ದಂಡ ವಿಧಿಸಬೇಕಿತ್ತು. ಅದನ್ನು ಬಿಟ್ಟು ದೂರುದಾರರಿಗೆ ಅವಕಾಶ ನೀಡಿದ್ದಾರೆ. ಸಮಯ ವ್ಯರ್ಥ ಮಾಡುತ್ತಿರುವುದಕ್ಕೆ ಅಬ್ರಹಾಂಗೆ ದಂಡ ವಿಧಿಸಬೇಕು. ಅಬ್ರಹಾಂಗೆ ಅರ್ಜಿ ಹಿಂಪಡೆಯಲು ಸೂಚಿಸಿ, ರಾಜ್ಯಪಾಲರು ದಂಡ ವಿಧಿಸಬೇಕು. ಆನಂತರ ಈ ನ್ಯಾಯಾಲಯ ದಂಡ ವಿಧಿಸಬೇಕು. ಲೋಕಾಯುಕ್ತರಿಗೂ ಅಬ್ರಹಾಂ ದೂರು ನೀಡಿದ್ದಾರೆ. ಲೋಕಾಯುಕ್ತ ದೂರಿನಲ್ಲಿ ಅಬ್ರಹಾಂ ಸೆಕ್ಷನ್ 17ಎ ಬಗ್ಗೆ ಮಾತನಾಡಿಲ್ಲ. ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ನ ಆದೇಶಗಳಿವೆ. ಈ ಬಗ್ಗೆ ನಾನು ವಾದ ಮಂಡಿಸಲಿದ್ದೇನೆ. ಟಿಜೆ ಅಬ್ರಹಾಂ ಸಲ್ಲಿಸಿರುವ ಆಕ್ಷೇಪಣೆ ಗಮನಿಸಬೇಕು. 17ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೆ ಎಂದು ಹೇಳಿದ್ದಾರೆ. ಹೀಗಿದ್ದಾಗ ರಾಜ್ಯಪಾಲರು ಅಬ್ರಹಾಂಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು. ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ವಾದಿಸಿದರು.
ಉಳಿದ ಇಬ್ಬರ ದೂರುಗಳಿಗೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ದೂರುದಾರರು ತಮ್ಮ ಪ್ರಮಾಣಪತ್ರದಲ್ಲಿ 17ಎ ಬೇಕಿಲ್ಲ ಎಂದು ಕೆಲವೊಂದು ಕಾರಣಗಳನ್ನು ನೀಡಿದ್ದಾರೆ. ಸಿಎಂ ಆದೇಶ ಅಥವಾ ಶಿಫಾರಸು ಮಾಡಿಲ್ಲ ಎಂದಿರುವುದರಿಂದ 17ಎ ಬೇಕಿಲ್ಲ ಎಂದಿದ್ದಾರೆ. 10-15 ವರ್ಷದ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗ್ತಿದೆ. ಬಿಎನ್‌ಎಸ್‌ನಲ್ಲಿ ನೋಟಿಸ್ ನೀಡಿದ್ದಾರೆ. ಆದರೇ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಅವರ ಪ್ರಾಸಿಕ್ಯೂಷನ್ ಪರ್ಮಿಷನ್ ಆಗಿಲ್ಲ. ರಾಜ್ಯಪಾಲರು ಆ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಸಿಂಘ್ವಿ ತಿಳಿಸಿದರು. ಇದಕ್ಕೆ ನ್ಯಾಯಾಧೀಶರು, ಅವೆಲ್ಲಾ ತನಿಖೆ ಮುಕ್ತಾಯ ಆಗಿದ್ಯಾ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಯಾವುದೇ ಒಂದೇ ಒಂದು ಅಂಶದಲ್ಲೂ ಕೂಡ ತಮ್ಮ ವಿವೇಚನೆ ಬಳಸಿಲ್ಲ. ಪ್ರಾಸಿಕ್ಯೂಷನ್ ಪರ್ಮಿಷನ್ ಕೊಡುವಾಗ ಬಳಸಿಲ್ಲ. ಕ್ಯಾಬಿನೆಟ್‌ನ ಸಲಹೆಯನ್ನು ಕೂಡ ಬಳಸಿಕೊಂಡಿಲ್ಲ. ಕ್ಯಾಬಿನೆಟ್ ಸಲಹೆಯು ಕೆಲವೊಂದು ನ್ಯಾಯಾಲಯ ಆದೇಶ ಉಲ್ಲೇಖ ಮಾಡಲಾಗಿತ್ತು. ಇತರೆ ವಿಚಾರಕ್ಕೆ ಕ್ಯಾಬಿನೆಟ್ ಸೂಚನೆ ಪಡೆಯಬೇಕು. ಆದರೆ ಸಿಎಂ ವಿರುದ್ಧದ ದೂರಿಗೆ ಕ್ಯಾಬಿನೆಟ್ ಸಲಹೆ ಸೂಚನೆಯನ್ನು ಪಡೆದಿಲ್ಲ ಎಂದು ಸಿಂಘ್ವಿ ವಾದಿಸಿದರು.
ಸಂಪುಟದ ತೀರ್ಮಾನದ ಪ್ರಕಾರ ರಾಜ್ಯಪಾಲರು ನಡೆಯಬೇಕಿಲ್ಲ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಇದೇ ವೇಳೆ ಜಡ್ಜ್ ಸ್ಪಷ್ಟಪಡಿಸಿದರು.
ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ರಾಜ್ಯಪಾಲರ ಇಂತಹ ಆದೇಶ ಕ್ರಮದಿಂದ ಹಾಳು ಮಾಡಲು ಸಾಧ್ಯವಿಲ್ಲ. ಜನರ ಬಹುಮತದ ಮೂಲಕ ಸರ್ಕಾರ ಆಯ್ಕೆ ಆಗಿದೆ. ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ರಾಜ್ಯಪಾಲರು ಇಂತಹ ಕ್ರಮಗಳಿಂದ ಬದಲಿಸಲಾಗದು. ಹೀಗಾಗಿಯೇ ರಾಜ್ಯಪಾಲರ ಅಧಿಕಾರಗಳಿಗೆ ನಿರ್ಬಂಧಗಳಿವೆ. ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಸಿಂಘ್ವಿ ವಾದ ಮಾಡಿದರು.