ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೈಕೋರ್ಟ್‌ನಲ್ಲಿ ಒಂದು ವಾರಗಳ ಬಳಿಕ ಮಧ್ಯಂತರ ರಿಲೀಫ್ ಸಿಕ್ಕಿದೆ.
ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ 2ನೇ ಬಾರಿಗೆ ಮುಂದೂಡಿಕೆಯಾಗಿದೆ. ಗಣೇಶ ಹಬ್ಬದ ಬಳಿಕ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ (Karnataka High Court) ವಿಚಾರಣೆ ನಡೆಸಲಿದೆ.
Advertisement
Advertisement
ವಿಚಾರಣೆ ಆರಂಭವಾಗುತ್ತಿದ್ದಂತೆ, ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲಯ ರಾಘವನ್ ವಾದ ಮಂಡನೆ ಮಾಡಿದರು. ಆರಂಭದಲ್ಲೇ ಜಡ್ಜ್ ಈಗಾಗಲೇ ಮಣೀಂದರ್ ಸಿಂಗ್ ವಾದ ಮಂಡಿಸಿದ್ದಾರೆ, ಕನ್ನಡದಲ್ಲಿ ಇರುವ ಮಾಹಿತಿ ಏನಾದ್ರೂ ಇದ್ರೆ ಹೇಳಿ ಎಂದು ಕೇಳಿದರು.
Advertisement
ನಂತರ ವಾದ ಆರಂಭಿಸಿದ ರಾಘವನ್, ನಾನು ಮೂರು ವಿಷಯಗಳ ಮೇಲೆ ವಾದ ಮಂಡನೆ ಮಾಡ್ತಾ ಇದ್ದೀನಿ, 17ಎ ಅನ್ವಯ ಪ್ರಾಸಿಕ್ಯೂಷನ್ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯ. ನನ್ನ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕಷ್ಟು ಸತ್ಯಾಂಶಗಳು ಇದ್ದಾವೆ. ಇದನ್ನ ಕೋರ್ಟ್ ಗಮನಕ್ಕೆ ತರುತ್ತಾ ಇದ್ದೇನೆ ಎಂದು ವಾದ ಆರಂಭಿಸಿದರು. ಈ ವೇಳೆ ಹಲವು ಅಂಶಗಳನ್ನು ಕೋರ್ಟ್ ಗಮನಕ್ಕೆ ತಂದರು.
Advertisement
ಆರೋಪಗಳೆಲ್ಲವೂ ತನಿಖೆ ಬಳಿಕ ಕ್ಲೀನ್ ಚಿಟ್ ಆಗಬಹುದು:
ನಾವು ಈಗ ಮಾಡುತ್ತಿರುವ ಆರೋಪಗಳೆಲ್ಲವೂ ತನಿಖೆ ಬಳಿಕ ಕ್ಲೀನ್ ಚಿಟ್ ಆಗಬಹುದು. ಯಾವುದೇ ಆರೋಪ ಹೊರಗೆ ಬರದೇ ಇರಬಹುದು. ತನಿಖೆಯೇ ನಡೆಯದೇ ಕ್ಲೀನ್ ಅಂತ ಹೇಳೋಕೆ ಆಗೋದಿಲ್ಲ. ಈ ಹಂತದಲ್ಲಿಯೇ ಕ್ಲೀನ್ ಅನ್ನಬಾರದು. ತನಿಖೆ ನಡೆದರೆ ಸತ್ಯಾಂಶ ಬರಲಿದೆ. ಸಿದ್ದರಾಮಯ್ಯ ಅವರು 1996 ರಿಂದ 1999ರ ವರೆಗೂ ಉಪ ಮುಖ್ಯಮಂತ್ರಿ, 2004 ರಿಂದ 2005ರ ವರೆಗೂ ಉಪಮುಖ್ಯಮಂತ್ರಿ, 2013 ರಿಂದ 2018ರ ವರೆಗೆ ಮುಖ್ಯಮಂತ್ರಿ ಹಾಗೂ 2023 ರಿಂದ ಈಗ ಮತ್ತೆ ಮುಖ್ಯಮಂತ್ರಿ. ಮಲ್ಲಯ್ಯ ಮತ್ತು ದೇವರಾಜು ಸಹೋದರರು, ಮೈಲಾರಾಯ್ಯಗೆ ಕೆಸರೆ ಭೂಮಿಯ ಎಲ್ಲಾ ಅಧಿಕಾರ ಇತ್ತು. ದೇವರಾಜುಗೆ ಯಾವುದೇ ಅಧಿಕಾರ ಇರೋದಿಲ್ಲ. ನಿಂಗ ಎಂಬುವವರಿಗೆ ಜಮೀನು ಗ್ರಾಂಟ್ ಸಿಕ್ಕಿತ್ತು. ಮೈಲಾರಯ್ಯ ಅವರಿಗೆ ದೇವರಾಜ ಮತ್ತು ಅವರ ಸಹೋದರ ಜಾಮೀನನ್ನು ಮಾರಾಟ ಮಾಡಿದ್ದರು. ಇದರಲ್ಲಿ ಹಕ್ಕು ಖುಲಾಸೆಯೂ ಆಗಿದೆ. ದೇವರಾಜು ಮೈಲಾರಯ್ಯಗೆ ಡಿನೋಟಿಫೈ ಆಗುವ ಮುನ್ನ ಮಾರಾಟ ಮಾಡಿದ್ದಾರೆ. ಡಿನೋಟಿಫೈ ಆಗುವ ಮುನ್ನ ಮಾರಾಟ ಮಾಡಿರೋದ್ರಿಂದ ಅಧಿಕಾರ ಖುಲಾಸೆ ಆಗಿದೆ ಎಂದು ವಾದಿಸಿದರು.
ಎರಡು ಸೈಟಿಗಷ್ಟೇ ಅವಕಾಶವಿತ್ತು:
ಈ ವೇಳೆ ಮಧ್ಯಪ್ರವೇಶಿಸಿದ ಜಡ್ಜ್ ಇದೊಂದೇ ಜಮೀನಾ ಡಿನೋಟಿಫೈ ಆಗಿರೋದು.? ಬೇರೆ ಜಮೀನು ಡಿನೋಟಿಫೈ ಆಗಿದ್ಯಾ? ಎಂದು ಪ್ರಶ್ನೆ ಮಾಡಿದರು. ಬಳಿಕ ಡಿಸಿ ಅವರು ಡಿನೋಟಿಫೈ ಮಾಡಿದ ವರದಿಯನ್ನು ಓದಿದರು. 2004ರಲ್ಲಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ.ಎಂ ಮಲ್ಲಿಕಾರ್ಜುನ ಸ್ವಾಮಿ ದೇವರಾಜು ಆಕ್ಷೇಪಾರ್ಹವಾದ ಭೂಮಿ ಮಾರಾಟ ಮಾಡುತ್ತಾರೆ. ಈಗಾಗಲೇ ಅಭಿವೃದ್ಧಿ ಆಗುತ್ತಾ ಇದ್ದ ಏರಿಯಾವನ್ನು ಮತ್ತೆ ಕೃಷಿ ಭೂಮಿ ಮಾಡ್ತಾರೆ. ನಿಂಗ ಎಂಬುವರಿಗೆ ಈ ಜಮೀನು ಮಂಜೂರಾಗಿತ್ತು. ನಿಂಗ ಅವರಿಗೆ ಮೂವರು ಮಕ್ಕಳು, ಮಲ್ಲಯ್ಯ, ಮೈಲಾರಯ್ಯ, ದೇವರಾಜು. ಮಲ್ಲಯ್ಯ, ದೇವರಾಜು ತಮ್ಮ ಹಕ್ಕನ್ನು ಮೈಲಾರಪ್ಪನಿಗೆ ಬಿಡುಗಡೆ ಮಾಡಿದ್ದರು. ಹೀಗಾಗಿ ದೇವರಾಜುವಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ. ಮೂರು ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4,800 ಚದರಡಿ ಪರಿಹಾರ ಇರುತ್ತದೆ. 1994ರ ನಿಯಮದ ಪ್ರಕಾರ ಎರಡು ಸೈಟಿಗಷ್ಟೇ ಅವಕಾಶವಿತ್ತು ಎಂದು ಭೂಪರಿವರ್ತನೆ ದಾಖಲೆಗಳನ್ನು ಕೋರ್ಟ್ ಗಮನಕ್ಕೆ ರಾಘವನ್ ತಂದರು.
ಮುಡಾ ಭೂಮಿ ವಶಪಡಿಸಿಕೊಂಡ ಮೇಲೆ ದೇವರಾಜು ಹೇಗೆ ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡುತ್ತಾರೆ? ಸರಳವಾದ ತನಿಖೆ ನಡೆಯಬೇಕಾದ ಈ ಪ್ರಕರಣಕ್ಕೆ ನ್ಯಾಯಾಲಯದ ಇಷ್ಟು ಸಮಯ ತೆಗೆದುಕೊಳ್ಳುವ ಅಗತ್ಯವೇನಿದೆ? ಇದೆಲ್ಲಾ ತನಿಖೆಯೂ ನಡೆಯಬೇಕು. ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ನೀವು ಹೇಳ್ತಾ ಇರೋದು ಏನೋ ಸಂಶಯ ನಡೆದಿದೆ ಅಂತಾನಾ? ಅಂತ ಕೇಳಿದರು. ಅದಕ್ಕೆ ರಾಘವನ್, ಹೌದು, ಎಲ್ಲಿ ನಡೆದಿದೆ ಮಾಡಿದ್ದು ಯಾರು ಗೊತ್ತಾಗಬೇಕು? ಆಡಳಿತಾಧಿಕಾರಿಗಳ ಯಾರು ಅಂತ ಗೊತ್ತಾಗಬೇಕು? ಅಂತ ಪಟ್ಟು ಹಿಡಿದರು. ದೇವರಾಜು ಭೂಮಿಯ ಅಸಲಿ ಮಾಲೀಕನೇ ಅಲ್ಲ. ದೇವರಾಜು ಮಲ್ಲಿಕಾರ್ಜುನಗೆ ಹೇಗೆ ಕೊಟ್ಟರು? ಮಲ್ಲಿಕಾರ್ಜುನ ಸಹೋದರಿಗೆ ಧಾನಪತ್ರ ಯಾಕೆ ಕೊಟ್ಟರು. ಈ ಬಗ್ಗೆ ತನಿಖೆ ಆಗಬೇಕಾಗಿದೆ ಎಂದು ಪ್ರಬಲ ವಾದ ಮಂಡನೆ ಮಾಡಿದರು.
ಪಾರ್ವತಿ ಅವರು ನಿಜವಾದ ಮಾಲೀಕರೇ ಅಲ್ಲ:
ಭೂಮಿ ಪರಭಾರೆ ಮಾಡಿಕೊಳ್ಳವಾಗಲೇ ಸಾಕಷ್ಟು ಅಕ್ರಮ ಆಗಿದೆ. ಪಾರ್ವತಿ ಅವರು ಮುಡಾಗೆ ಪರಿಹಾರ ಕೇಳುತ್ತಾರೆ. ಅವರು ಹೇಗೆ ಪರಿಹಾರ ಕೇಳ್ತಾರೆ? ಅವರು ನಿಜವಾದ ಮಾಲೀಕರೆ ಅಲ್ಲ. 2015 ರಲ್ಲಿ 50:50 ಅನುಪಾತವನ್ನು ತರ್ತಾರೆ. ಆಗಲೇ ಮತ್ತಷ್ಟು ಅನುಮಾನ ಪ್ರಾರಂಭವಾಗುತ್ತೆ. 2004ರಲ್ಲಿಯೇ ಮುಡಾ ಭೂಮಿ ವಶಕ್ಕೆ ಪಡೆದುಕೊಂಡಿತ್ತು. 2019ರ ತನಕ ಯಾಕೆ ಪರಿಹಾರ ಕೇಳಲಿಲ್ಲ? ಎಂದು ವಾದಿಸಿದಾಗ 60:40 ಪರಿಹಾರಕ್ಕೆ ಅವರು ಒಪ್ಪಲಾಗಿತ್ತಾ? ಎಂದು ಜಡ್ಜ್ ಪ್ರಶ್ನಿಸಿದರು.
ಪಾರ್ವತಿ ಅವರಲ್ಲದೇ ಬೇರೆ ಇದೇ ಯಾರಾದರೂ ಸ್ಥಾನದಲ್ಲಿದ್ದರೇ ಅವರು ನ್ಯಾಯಾಲಯದ ಆದೇಶ ಪಡೆದು ಮುಡಾ ಸಂಪರ್ಕಿಸಬೇಕಿತ್ತು? ಇಲ್ಲಿ ಪಾವತಿ ಅವರಾಗಿರುವುದರಿಂದ ಅದ್ಯಾವುದೂ ನಡೆದಿಲ್ಲ. ಪಾರ್ವತಿ ಅವರು ಕೋರ್ಟ್‌ಗೆ ಬರುವ ಪ್ರಯತ್ನವನ್ನೇ ಮಾಡಲಿಲ್ಲ. ಮಲ್ಲಿಕಾರ್ಜುನ ಸ್ವಾಮಿ ಪಾರ್ವತಿ ಅವರಿಗೆ ದಾನ ಮಾಡಲಾಗಿದೆ. 23/06/2015 ಬದಲಿ ಸೈಟ್ ಗೆ ಮನವಿ ಮಾಡಲಾಗಿದೆ. ಸಾಮಾನ್ಯ ಜನ ಮಾಡಿದ್ರೆ ಈ ರೀತಿ ಅದೇಶ ಆಗುತ್ತಾ? ಎಂದು ಪಟ್ಟಿನ ಮೇಲೆ ಪಟ್ಟು ಹಾಕಿದರು.
ಈ ಹಗರಣದಲ್ಲಿ ಸಿಎಂ ಅವರ ಪಾತ್ರ ಇದೆ ಅಂತ ಎಲ್ಲರೂ ಪ್ರಶ್ನೆ ಮಾಡ್ತಾ ಇದ್ದರು. 2015 ರಿಂದ ನಿರಂತರವಾಗಿ ಪ್ರಕ್ರಿಯೆಗಳು ಪ್ರಾರಂಭ ಆಯ್ತು. 50:50 ಅನುಪಾತವೂ ಬಂದಿದ್ದು ಇವರದ್ದೆ ಅಧಿಕಾರ ಸಮಯದಲ್ಲಿ. ಆಸ್ತಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಮುಡಾ ವಿವೇಚನೆ ಬಳಸಿಲ್ಲ. ಎಲ್ಲಾ ವಿಚಾರಗಳನ್ನ ಗಾಳಿಗೆ ತೂರಿರುವುದರಿಂದ ತನಿಖೆ ನಡೆಯಬೇಕು. 2017-21ರಿಂದ ಯಾವುದೇ ಬೆಳವಣಿಗೆಯಾಗಿಲ್ಲ. 2021ರ ಡಿಸೆಂಬರ್‌ನಲ್ಲಿ 38 ಸಾವಿರ ಚದರ ಅಡಿ ಜಾಗವನ್ನು ಪಾರ್ವತಿ ಅವರಿಗೆ ಮುಡಾ ಹಂಚಿಕೆ ಮಾಡುತ್ತದೆ. 2017ರ ನಿರ್ಣಯ ಪ್ರಮುಖವಾದ ಕೊಂಡಿಯಾಗಿದೆ. 2017-21ರಿಂದ ಯಾವುದೇ ಬೆಳವಣಿಗೆಯಾಗಿರುವುದಿಲ್ಲ. 2021ರ ಡಿಸೆಂಬರ್‌ನಲ್ಲಿ 38 ಸಾವಿರ ಚದರ ಅಡಿ ಜಾಗವನ್ನು ಪಾರ್ವತಿ ಅವರಿಗೆ ಮುಡಾ ಹಂಚಿಕೆ ಮಾಡುತ್ತದೆ. 2017ರ ನಿರ್ಣಯ ಪ್ರಮುಖವಾದ ಕೊಂಡಿಯಾಗಿದೆ ಎಂದರು. ಈ ವೇಳೆ 2023ರಲ್ಲಿ ಪಾರ್ವತಿ ಅವರಿಗೆ ಮಾತ್ರ ನಿವೇಶನ ನೀಡಲಾಗಿದ್ಯಾ? ಎಂದು ಜಡ್ಜ್ ಪ್ರಶ್ನಿಸಿದಾಗ ವಕೀಲ ರಾಘವನ್ ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರು 2004ರಲ್ಲಿ ಮಂತ್ರಿ ಆಗಿದ್ದರು. ಮೈಸೂರಿನ ಉಸ್ತುವಾರಿ ಸಚಿವರು ಆಗಿದ್ರು. 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ರು. ಎಲ್ಲಾ ಬದಲಾವಣೆಗಳು ಆಗಲೇ ನಡೆದಿದೆ. ಈಗಾಗಲೇ ಸರ್ಕಾರ ತನಿಖೆಗೆ ಆದೇಶ ಮಾಡಿದೆ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖದ ಆಗ್ತಾ ಇದೆ. ಇದರಿಂದ ಇದರಲ್ಲಿ ಅಕ್ರಮ ಇದೆ ಅಂತ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾ ಇದೆ. ರಾಜ್ಯಪಾಲರು ಆದೇಶವನ್ನು ಮಾಡುವಾಗ ಇದೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದು ವಾದ ಮಂಡನೆ ಮಾಡಿದರು.
ಬಳಿಕ ವಾದ ಮಂಡಿಸಿದ ಸಿಎಂ ಪರ ವಕೀಲ ಮನು ಸಿಂಘ್ವಿ, ಕ್ಯಾಬಿನೆಟ್ ನಿರ್ಧಾರ ಎಲ್ಲಾ ಎಜಿ ಅವರ ವರದಿ ಮೇಲೆ ಇದೆ. ಆದ್ದರಿಂದ ಸೆಪ್ಟೆಂಬರ್ 12ಕ್ಕೆ ವಿಚಾರಣೆ ಮುಂದೂಡುವಂತೆ ಸಿಂಘ್ವಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ಗುರುವಾರದ ಒಳಗೆ ವಿಚಾರಣೆ ಮುಗಿಸಬೇಕಿದೆ. ಸೋಮವಾರದ ಒಳಗೆ ಇತ್ಯರ್ಥ ಆಗಬೇಕು ಎಂದು ಹೇಳಿ, ಸೆಪ್ಟೆಂಬರ್ 9ರ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿದರು.