ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣ (MUDA Case) ಸಂಬಂಧ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ಪಾರ್ವತಿ ಸಿದ್ದರಾಮಯ್ಯ ಅವರು ಬರೆದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ. ಸಿಎಂ ತೋರಿಸಿರುವ ಪತ್ರದಲ್ಲಿರುವ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ (RTI) ಪಡೆದ ಪತ್ರದಲ್ಲಿ ಇರುವ ಸಹಿ ಬೇರೆ ಬೇರೆ ರೀತಿ ಇದೆ. ಪಾರ್ವತಿ ಅವರ ಸಹಿ ನಕಲಿ ಆಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: IPL 2025 | ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನೂತನ ಮೆಂಟರ್ ಆಗಿ ಜಹೀರ್ ಖಾನ್ ನೇಮಕ
Advertisement
Advertisement
ವೈಟ್ನರ್ ಹಿಂದಿನ ಪದಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಪಾರ್ವತಿ ಅವರು ಸಂಚು ರೂಪಿಸಿ ಸುಳ್ಳು ಪತ್ರ ಸೃಷ್ಟಿಸಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ್ದಾರೆ. ಇದಕ್ಕೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗರಂ ಆಗಿದ್ದಾರೆ. ಸಿಎಂ ಪತ್ನಿ ಸಹಿ ನಕಲಿ ಅಂತಾ ಹೇಳೋದಕ್ಕೆ ದೂರುದಾರರೇನಾದ್ರೂ ಎಫ್‌ಎಸ್‌ಎಲ್ ಅಧಿಕಾರಿನಾ ಎಂದು ಪ್ರಶ್ನಿಸಿದ್ದಾರೆ.
Advertisement
ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್‌ಮೇಲರ್, ಆತನ ಕಡೆಯವರು ನನ್ನ ಬಳಿ ಬಂದು 100 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಇಷ್ಟರಲ್ಲೇ ಅದೆಲ್ಲವನ್ನು ಬಯಲು ಮಾಡ್ತೇನೆ ಎಂದು ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕೋಲ್ಡ್ ಬ್ಲಡೆಡ್ ಕೊಲೆ ಕೇಸ್‌ನಲ್ಲಿ ಪವಿತ್ರಾ ಭಾಗಿ – ಮಹಿಳೆಯರಿಗೇಕೆ ವಿಶೇಷ ಅವಕಾಶ ಕೊಡಬೇಕು?; ಎಸ್‌ಪಿಪಿ ವಾದ
ಅತ್ತ, ಸುಳ್ಳು ದಾಖಲೆ ಕೊಟ್ಟು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಆರೋಪ ಮಾಡಿದ್ದಾರೆ. ಬಿಜೆಪಿ ಕೂಡ ಟ್ವೀಟ್ ಮೂಲಕ ಹರಿಹಾಯ್ದಿದೆ. ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆ ಬೆಳೆಸಿಕೊಂಡರು: ಸಿದ್ದರಾಮಯ್ಯ