ಮೈಸೂರು: ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್ ಇದು. ಪ್ಲೀಸ್ ಅಂಡರ್‌ಲೈನ್ ದಿಸ್ ವರ್ಡ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೇಸರದಿಂದ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಯಾಕೆ ರಾಜೀನಾಮೆ ಕೊಡಲಿ? ನಾನು ಏನು ತಪ್ಪು ಮಾಡಿದ್ದೇನೆ ಹೇಳಿ? ನಾನು ಯಾವ ತಪ್ಪು ಮಾಡಿಲ್ಲ. ರಾಜೀನಾಮೆ ಪ್ರಶ್ನೆಗಳೇ ಬರುವುದಿಲ್ಲ. ನನ್ನ ಕಂಡರೇ ವಿಪಕ್ಷಗಳಿಗೆ ಭಯ. ಹೀಗಾಗಿ ಪದೇ ಪದೆ ನನ್ನ ಟಾರ್ಗೆಟ್ ಮಾಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ನಿಮ್ಮಿಂದ ನಮ್ಮ ಸಿದ್ದರಾಮಯ್ಯಗೆ ಈ ಸ್ಥಿತಿ ಬಂತು – ಮುಡಾ ಅಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್
Advertisement
Advertisement
ಇದು ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್. ನಾನು ಮತ್ತೆ ಹೇಳುತ್ತಿದ್ದೇನೆ. ಇದು ರಾಜಕೀಯ ಸಂಬಂಧದ ಮೊದಲ ಕೇಸ್. ಪ್ಲೀಸ್ ಅಂಡರ್‌ಲೈನ್ ದಿಸ್ ವರ್ಡ್. ಕಾನೂನು ಹೋರಾಟವನ್ನ ನಮ್ಮ ವಕೀಲರು ಮಾಡುತ್ತಾರೆ ಎಂದು ತಿಳಿಸಿದರು.
Advertisement
ಇವತ್ತು ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನನ್ನ ಸ್ವಾಗತಕ್ಕೆ ಬಂದಿದ್ದಾರೆ. ನಾನು ಯಾರನ್ನೂ ಕರೆದಿಲ್ಲ, ಅವರೇ ಪ್ರೀತಿಯಿಂದ ಬಂದಿದ್ದಾರೆ. ನನಗೆ ಯಾವ ಭಯವೂ ಇಲ್ಲ. ನಾನು ಭಯಗೊಂಡ ರೀತಿ ಕಾಣುತ್ತಿದ್ದೀನಾ ಎಂದು ಕೇಳಿದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಡಾ.ಕೆ ಸುಧಾಕರ್ ನೇಮಕ
Advertisement
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಸಿಬಿಯೇ ಇದೆ. ಇದಕ್ಕೆ ಯಾಕೆ ಕುಮಾರಸ್ವಾಮಿ ಮಾತನಾಡಲ್ಲ? ನಾನು ಲೋಕಾಯುಕ್ತವನ್ನ ಮುಚ್ಚಿಲ್ಲ. ಎಸಿಬಿ ರಚನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮ ಹಾಗೂ ಸಭೆ ನಿಮಿತ್ತ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮೈಸೂರಿಗೆ ಆಗಮಿಸಿದ್ದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ನೆರದಿದ್ದರು. ‘ನಾವು ನಿಮ್ಮೊಂದಿಗೆ’ ಎಂಬ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಸಿದ್ದರಾಮಯ್ಯಗೆ ಅಭಯ ನೀಡಿದರು. ಈ ವೇಳೆ ಸಿಎಂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಡೋಲು, ನಗಾರಿ, ಜನಪದ ಕಲಾ ತಂಡಗಳಿಂದ ಸಿಎಂಗೆ ಸ್ವಾಗತ ಕೋರಲಾಯಿತು.