ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌ – CBI ತನಿಖೆಗೆ ವಹಿಸಲು ಹೈಕೋರ್ಟ್‌ ನಕಾರ

Public TV
1 Min Read
Siddaramaiah 1

ಬೆಂಗಳೂರು/ಧಾರವಾಡ: ಮುಡಾ ಹಗರಣ (MUDA Case) ಪ್ರಕರಣದಲ್ಲಿ ಸಿಬಿಐ ತನಿಖೆ ಕುಣಿಕೆಯಿಂದ ಸಿಎಂ ಸಿದ್ದರಾಮಯ್ಯ (Siddaramaiah) ಪಾರಾಗಿದ್ದಾರೆ. ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಲು ಧಾರವಾಡ ಹೈಕೋರ್ಟ್‌ (Dahrwad High Court) ನಿರಾಕರಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಜಾ ಮಾಡಿದೆ. ಸ್ನೇಹಮಯಿ ಕೃಷ್ಣ ಪರ ಮಣಿಂದರಸಿಂಗ್ ವಾದ ಮಂಡಿಸಿದ್ದರು. ಇದನ್ನೂ ಓದಿ: ಸಿಎಂ ನೈತಿಕತೆ ಕಳೆದುಕೊಂಡಿದ್ದಾರೆ, ಮುಡಾ ಕೇಸ್‌ ಸಿಬಿಐಗೆ ಹೋಗೋದು ನಿಶ್ಚಿತ: ಸ್ನೇಹಮಹಿ ಕೃಷ್ಣ

ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ ಅಲ್ಲ ಎಂದು ಹೇಳಲು ಆಗಲ್ಲ. ಲೋಕಾಯುಕ್ತ ಪೊಲೀಸ್ ತನಿಖೆಯಲ್ಲಿ ತಾರತಮ್ಯ ಇದೆ‌ ಎಂದು ಹೇಳಲು ಆಧಾರ ಇಲ್ಲ. ಅದೊಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾ ತನಿಖೆ ಅಸಮರ್ಪಕ ಅಲ್ಲ ಎಂದು ಹೇಳಲು ಆಗಲ್ಲ. ಹೀಗಾಗಿ, ಸಿಬಿಐಗೆ ಇದನ್ನ ಕೊಡಲು ಹೈಕೋರ್ಟ್‌ ನಕಾರ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ತನಿಖೆ ಪಕ್ಷಾತೀತ, ನಿಷ್ಪಕ್ಷಪಾತ ಅಥವಾ ಸಿಬಿಐ ತನಿಖೆಗೆ ನಿರ್ದೇಶಿಸಲು ಕಳಪೆಯಾಗಿದೆ ಎಂದು ದಾಖಲೆಯಲ್ಲಿರುವ ವಸ್ತು ವಿಷಯ ಸೂಚಿಸುವುದಿಲ್ಲ. ಪರಿಣಾಮವಾಗಿ ಸಿಬಿಐ ತನಿಖೆಯ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಏಕಸದಸ್ಯ ಪೀಠದ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶುಕ್ರವಾರ ಸಿದ್ದರಾಮಯ್ಯ, ಬಿಎಸ್‌ವೈಗೆ ಬಿಗ್‌ ಡೇ!

Share This Article