ಚಿತ್ರದುರ್ಗ: ಸಿಎಂ (Chief Minister) ಬದಲಾವಣೆಯ ಸುಳಿವು ನಾಯಕರಿಗೆ ಸಿಕ್ಕಿದೆ. ಹೀಗಾಗಿ ನಾನು ಸಿಎಂ, ನೀನು ಸಿಎಂ ಕಾಂಗ್ರೆಸ್ ನಾಯಕರು (Congress Leader) ಓಡಾಡುತ್ತಿದ್ದಾರೆಂದು ಸಂಸದ ಗೋವಿಂದ ಕಾರಜೋಳ (Govind Karjol) ಹೇಳಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರಾದ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಡಾ.ಜಿ ಪರಮೇಶ್ವರ್ (Parameshwar) ಸಿಎಂ ಆಗಬೇಕೆನ್ನುತ್ತಿದ್ದಾರೆ. ಖರ್ಗೆ ವಿಚಾರ ಏನಿದೆ ಗೊತ್ತಿಲ್ಲ. ಅವರು ಸಿಎಂ ಆಗುತ್ತಾರೋ ದೆಹಲಿಯಲ್ಲಿರುತ್ತಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ (Congress) ಪಕ್ಷದಲ್ಲಿ ಡಜನ್‌ಗಟ್ಟಲೇ ಸಿಎಂ ಆಕಾಂಕ್ಷಿಗಳಿದ್ದಾರೆ ಎಂದರು.
Advertisement
Advertisement
ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಂ.ಬಿ ಪಾಟೀಲ್ ಸೇರಿದಂತೆ ಅನೇಕರು ಸಿಎಂ ಆಕಾಂಕ್ಷಿಗಳಿದ್ದು, ಸಭೆ ನಡೆಸುವುದರಲ್ಲಿ ಬಿಸಿಯಾಗಿದ್ದಾರೆ. ಮಾಜಿ ಸ್ಪೀಕರ್ ಕೋಳಿವಾಡ ಅವರು ಅನುಭವದ ಆಧಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಿಎಂ ವಿರುದ್ಧ ಕೇಳಿಬಂದಿರುವ ಮುಡಾ ಹಗರಣ ಹರಿಯಾಣ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಮಹಾರಾಷ್ಟ್ರ ಚುನಾವಣೆ ಮೇಲೂ ಕರಿನೆರಳು ಬೀರಲಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು ಎಂದರು. ಇದನ್ನೂ ಓದಿ: ಸಿಎಂ ವೇಟಿಂಗ್ ಪಟ್ಟಿಯಲ್ಲಿ ಡಿಕೆಶಿ ಮೊದಲು, ದಿನೇ ದಿನೇ ಆಕಾಂಕ್ಷಿಗಳ ಪಟ್ಟಿ ಜಾಸ್ತಿಯಾಗ್ತಿದೆ – ವಿಜಯೇಂದ್ರ
Advertisement
ರಾಜ್ಯದಲ್ಲಿ ಸ್ವಚ್ಛ ಆಡಳಿತ ಬಯಸುವವರು ರಾಜೀನಾಮೆ ಕೇಳುತ್ತಿದ್ದು ಹಗರಣಗಳ ಸರಮಾಲೆ ಸಿಎಂ ಕೊರಳಿಗೆ ಬಿದ್ದಿದೆ. ಕಾಂತರಾಜು ವರದಿ ಜಾರಿ ವಿಚಾರ ಮೂಲಕ ಸಿಎಂ ಗೊಂದಲ ಸೃಷ್ಟಿಸಿದ್ದಾರೆ. ಸಿಎಂ ಕುರ್ಚಿಗೆ ಕಂಟಕ ಬಂದಾಗ ಈ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಸಿಎಂ ಅಷ್ಟೊಂದು ಕಾಳಜಿ ಇದ್ದರೆ ಒಳಮೀಸಲಾತಿ ಜಾರಿ ಮಾಡಲಿ ಎಂದು ಸವಾಲು ಹಾಕಿದರು.
Advertisement