ಮೈಸೂರು: ಮುಡಾ ಹಗರಣದ (MUDA Scam) ಗೊಂದಲ ನಡುವೆಯೆ ಗುರುವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಸಭೆ ನಡೆಯಿತು. 10 ತಿಂಗಳ ಬಳಿಕ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು (50:50 Site) ಜಪ್ತಿ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ಸೈಟುಗಳನ್ನು ಜಪ್ತಿ ಮಾಡಲು ಸರ್ವ ಸದಸ್ಯರು ಒಮ್ಮದ ಅಭಿಪ್ರಾಯ ಸೂಚಿಸಿದರು. ನ್ಯಾಯಮೂರ್ತಿ ಪಿ.ಎನ್ ದೇಸಾಯಿ ವರದಿ ನಂತರ ಜಪ್ತಿಯ ವರದಿ ಅಂಗಕರಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಡಿ.ರೂಪಾಗೆ ಹಿನ್ನಡೆ
Advertisement
Advertisement
ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್ ಗೌಡ, ಮಧು ಮಾದೇಗೌಡ, ರಮೇಶ್ ಬಂಡಿಸಿದ್ದೇಗೌಡ, ಶ್ರೀವತ್ಸ, ಎಚ್. ವಿಶ್ವನಾಥ್ ಸೇರಿದಂತೆ ಆಹ್ವಾನಿತ ಶಾಸಕರು ಸಭೆಯಲ್ಲಿ ಹಾಜರಿದ್ದರು. ಇದನ್ನೂ ಓದಿ: ಜೈಶಂಕರ್ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್
Advertisement
Advertisement
ಸಭೆಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ (Congress) ಶಾಸಕ ಹರೀಶ್ ಗೌಡ, 2020 ರಿಂದ 2024ರ ವರೆಗೂ ಕೊಟ್ಟಿರಿವ 50:50 ಅನುಪಾತದ ಎಲ್ಲಾ ಸೈಟ್‌ಗಳನ್ನ ಸರ್ಕಾರ ತಕ್ಷಣವೇ ಜಪ್ತಿ ಮಾಡಬೇಕು. ದೇಸಾಯಿ ಆಯೋಗದ ತನಿಖಾ ವರದಿ ಬಂದಮೇಲೆ ನ್ಯಾಯಸಮ್ಮತ ಸೈಟ್‌ಗಳನ್ನು ವಾಪಸ್ ಕೊಡಲಿ. ಅಕ್ರಮ ಸೈಟ್‌ಗಳನ್ನ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿ. ನಾನು ಒಂದು ಇಂಚೂ ಜಾಗವನ್ನು 50:50 ಅನುಪಾತದಲ್ಲಿ ಪಡೆದಿಲ್ಲ. ಒಂದು ಇಂಚು ಜಾಗಕ್ಕೂ ನಾನು ಶಿಫಾರಸ್ಸು ಮಾಡಿಲ್ಲ. 50:50 ಅನುಪಾತದಲ್ಲಿ ನನ್ನದು ಯಾವುದಾದರೂ ಸೈಟ್ ಇದ್ದರೆ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು. ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಆರ್ಥಿಕ ಅನ್ಯಾಯ ನಿಲ್ಲಬೇಕು: ಎಲ್.ಹನುಮಂತಯ್ಯ
ಶಾಸಕ ಜಿ.ಟಿ. ದೇವೇಗೌಡ ಮಾತ್ರ 50:50 ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು. 50:50 ಅನುಪಾತದಲ್ಲಿ ಆಗಿರುವ ಅಕ್ರಮ ಸೈಟ್ ಗಳನ್ನ ರದ್ದು ಮಾಡಬೇಕು. ಸರ್ಕಾರ ಅಕ್ರಮವಾಗಿ ಪಡೆದಿರೋ ನಿವೇಶನಗಳನ್ನ ವಾಪಾಸ್ ಪಡೆಯಲಿ. ಆದರೆ ಪ್ರಾಧಿಕಾರದ ದೃಷ್ಟಿಯಿಂದ 50:50 ಅನುಪಾತ ಬೇಕು ಎಂದರು. ನಿಯಮಾನುಸಾರ 50:50 ಅನುಪಾದಡಿ ಅರ್ಹರಿಗೆ ನಿವೇಶನ ನೀಡಲಿ. ಕಾನೂನು ಬಾಹಿರವಾಗಿ ನೀಡಿದ್ದರೆ ಅದನ್ನ ವಾಪಸ್ ಪಡೆದುಕೊಳ್ಳಲಿ ಎಂದು ಹೇಳಿದರು.