ಮಡಿಕೇರಿ: ಮುಡಾ ಒಂದು ಸಣ್ಣ ಕೇಸ್ ಅಷ್ಟೇ, ಚುನಾವಣಾ ಬಾಂಡ್ ದೊಡ್ಡ ಹಗರಣ ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ (Sharana Prakash Patil) ಹೇಳಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಇಡಿ, ಐಟಿಗಳನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆಯಿಂದ ಬಾಂಡ್ ಸಂಗ್ರಹಿಸಲಾಗಿದೆ ಎಂದು ಎಫ್‌ಐಆರ್ ಆಗಿದೆ. ಅದರಲ್ಲಿ ದಾಖಲೆಗಳಿವೆ. ಐಟಿ ದಾಳಿ ಆಗುತ್ತದೆ. ಅದಾದ ಬಳಿಕ ಅವರು ಚುನಾವಣಾ ಬಾಂಡ್ ಕೊಡುತ್ತಾರೆ. ನಂತರ ಆ ಕೇಸು ಕ್ಲೋಸ್ ಆಗುತ್ತದೆ. ಒಂದಲ್ಲ ಇಂತಹ ಹಲವು ನಿದರ್ಶನಗಳು ಇವೆ ಎಂದು ತಿಳಿಸಿದರು.ಇದನ್ನೂ ಓದಿ: BBK 11: ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್
Advertisement
Advertisement
ಕೇಂದ್ರ ಸರ್ಕಾರ (Central Government) 8,000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿದೆ. ಬೆದರಿಕೆಯೊಡ್ಡಿ ಹಣ ಸಂಗ್ರಹಿಸಿದೆ ಎಂದು ಎಫ್‌ಆರ್ ದಾಖಲಾಗಿದೆ. ಕಾಂಗ್ರೆಸ್ (Congress) ಕೂಡ ಚುನಾವಣಾ ಬಾಂಡ್ ಸ್ವೀಕರಿಸಿದೆ. ಆದರೆ ಕಾಂಗ್ರೆಸ್ ಯಾರಿಗೂ ಫೇವರ್ ಮಾಡಿಲ್ಲ. ಯಾರಿಗಾದರೂ ಫೇವರ್ ಮಾಡಿ ಬಾಂಡ್ ತೆಗೆದುಕೊಂಡಿದ್ದರೆ ಅಕ್ರಮ. ಅದು ನಮ್ಮ ಸರ್ಕಾರದಲ್ಲಿ ಇಲ್ಲ. ನಾವು ಯಾರಿಗೂ ಫೇವರ್ ಮಾಡಿಲ್ಲ. ಆದರೆ ಬಿಜೆಪಿ (BJP) ಬೆದರಿಸಿ ಬ್ಲಾಕ್ ಮೇಲ್ ಮಾಡಿ ಬಾಂಡ್ ತೆಗೆದುಕೊಂಡಿದೆ. ಇದೊಂದು ದೊಡ್ಡ ಹಗರಣ. ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.
Advertisement
ನಿರ್ಮಲಾ ಸೀತರಾಮನ್ (Niramala Sitharaman), ಜೆಪಿ ನಡ್ಡಾ (JP Nadda) ಹಾಗೂ ವಿಜಯೇಂದ್ರ (Vijayendra) ಮೇಲೆ ಎಫ್‌ಐಆರ್ ದಾಖಲಾಗಿರುವುದು ರಾಜಕೀಯ ಪ್ರೇರಿತ ಎಂಬ ವಿಚಾರವಾಗಿ ಮಾತನಾಡಿ, ಇದಕ್ಕೆ ಯಾರು ನಿರ್ದೇಶನ ನೀಡಲು ಸಾಧ್ಯ? ಎಫ್‌ಐಆರ್ (FIR) ದಾಖಲಿಸಲು ಹೇಳಿರುವುದು ಕೋರ್ಟ್. ಕೋರ್ಟಿನ ನಿರ್ದೇಶನದ ಮೇಲೆ ಎಫ್‌ಐಆರ್ ಆಗಿ ತನಿಖೆ ಆಗಬೇಕಾಗಿದೆ ಎಂದರು.ಇದನ್ನೂ ಓದಿ: ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ