ಮೈಸೂರು: ಒಂದೇ ಒಂದು ನಿವೇಶನ ಪಡೆಯಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ(ಮೂಡಾ) 20 – 30 ವರ್ಷದಿಂದ ಕಾದಿರುವವರ ಸಂಖ್ಯೆ ಬಹು ದೊಡ್ಡದಿದೆ. ಇಂತಹದರಲ್ಲಿ ಒಬ್ಬ ವ್ಯಕ್ತಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಂದಲ್ಲ, ಎರಡಲ್ಲ, ಮೂರು ನಿವೇಶನ ಮಂಜೂರಾಗಿರುವ ದಾಖಲೆಗಳು ಈಗ ಬಹಿರಂಗವಾಗಿವೆ.
ಮಾಹಿತಿ ಹಕ್ಕು ಕಾರ್ಯಕರ್ತರ ಪ್ರಶ್ನೆಯಿಂದಾಗಿ ಈ ಅಕ್ರಮ ಬಯಲಿಗೆ ಬಂದಿದೆ. ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದ ಎಂ.ಎನ್.ರಾಮಕೃಷ್ಣ ತಮ್ಮ ಹೆಸರಲ್ಲಿ ಮೂರು ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ.
Advertisement
Advertisement
ಮೈಸೂರಿನ ದಟ್ಟಗಳ್ಳಿ, ವಿಜಯನಗರ ಹಾಗೂ ದೇವನೂರು ಬಡಾವಣೆಯಲ್ಲಿ ಎರಡು 30*40 ವಿಸ್ತೀರ್ಣದ ನಿವೇಶನಗಳು ಹಾಗೂ ಒಂದು 50*80 ವಿಸ್ತೀರ್ಣದ ನಿವೇಶನ ಮಂಜೂರು ಮಾಡಿಸಿ ಕೊಂಡಿದ್ದಾರೆ. ಮೂರು ನಿವೇಶನಗಳ ಪೈಕಿ ಒಂದೇ ದಿನ ಎರಡು ನಿವೇಶನ ಮಂಜೂರಾಗಿದ್ದು ಇದಾದ ಎರಡು ವರ್ಷದ ನಂತರ ಮತ್ತೊಂದು ನಿವೇಶನ ಮಂಜೂರಾಗಿದೆ. ಕೇಂದ್ರ ಸರ್ಕಾರಿ ನೌಕರರ ಕೋಟಾದಡಿ ಈ ನಿವೇಶನಗಳು ಮಂಜೂರಾಗಿವೆ.
Advertisement
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಬ್ಬರಿಗೆ ಒಂದೇ ನಿವೇಶನ ಎಂಬ ನಿಯಮವಿದೆ. ಆದರೆ, ಮೂಡಾ ಅಧಿಕಾರಿಗಳು ಈ ನಿಯಮ ಗಾಳಿಗೆ ತೂರಿ ಅಕ್ರಮವಾಗಿ ನಿವೇಶನ ಮಂಜೂರು ಮಾಡಿ ಕೊಟ್ಟಿದ್ದಾರೆ.
Advertisement
ಮಂಜೂರಾದ ನಿವೇಶನಗಳನ್ನು ರಾಮಕೃಷ್ಣ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಮೂಡಾ ಆಯುಕ್ತ ಪಿ.ಎಸ್. ಕಾಂತರಾಜು ತಿಳಿಸಿದ್ದಾರೆ.