– ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್
ಮೈಸೂರು: ಮೂಡ ಹಗರಣದಲ್ಲಿ (MUDA Case) ಸಿಎಂ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರಿಗೆ (Snehamayi Krishna) ಹಣದ ಅಮಿಷ ಒಡ್ಡಲು ಮುಡಾದ ಮಾಜಿ ಆಯುಕ್ತ ಪ್ಲಾನ್ ಮಾಡಿದ್ರಾ ಎಂಬ ಅನುಮಾನ ಮಾಡುವಂತಹ ಆಡಿಯೋವನ್ನು ಸ್ನೇಹಮಹಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.
6 ಸೆಕೆಂಡ್ ಆಡಿಯೊ ಮಾತ್ರ ಬಿಡುಗಡೆ ಮಾಡಿರುವ ಸ್ನೇಹಮಯಿ ಕೃಷ್ಣ, ಸಂಪೂರ್ಣ ಆಡಿಯೋವನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ಕಳಂಕ ಮುಕ್ತ; ಲೋಕಾಯುಕ್ತ ಸಲ್ಲಿಸಿದ್ದ ʻಬಿ ರಿಪೋರ್ಟ್ʼ ಒಪ್ಪಿದ ಕೋರ್ಟ್
6 ಸೆಕೆಂಡ್ ಆಡಿಯೋದಲ್ಲಿ ಸ್ನೇಹಮಯಿ ಕೃಷ್ಣನನ್ನು ಏನಾದ್ರು ಲಿಂಕ್ ಹಿಡಿದು ಕನೆಕ್ಷನ್ ತಗೋಬೇಕಲ್ಲ ಒನ್ ಟು ಒನ್… ಎಂದು ಡಿ.ಬಿ.ನಟೇಶ್, ಮೈಸೂರು ಮೂಲದ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದರೆ ಎನ್ನಲಾಗುತ್ತಿರುವ ಆಡಿಯೋ ಇದಾಗಿದೆ.

