– ಮರೀಗೌಡ, ನಟೇಶ್ ಸೇರಿ ನಾಲ್ವರಿಗೆ ವಿಚಾರಣೆ
ಬೆಂಗಳೂರು: ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸ್ತಿರುವ ತನಿಖೆ ಸಿಎಂ ಆಪ್ತೇಷ್ಠರ ಬುಡಕ್ಕೆ ಬಂದು ನಿಂತಿದೆ. ಮುಡಾ ಮಾಜಿ ಅಧ್ಯಕ್ಷ ಮರೀಗೌಡ, ಶಿವಣ್ಣ, ಮಾಜಿ ಆಯುಕ್ತ ನಟೇಶ್, 2004ರಲ್ಲಿ ಮೈಸೂರು ತಹಶೀಲ್ದಾರ್ ಆಗಿದ್ದ ಮಾಳಿಗೆ ಶಂಕರ್ರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.
Advertisement
ಸತತ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಶಿವಣ್ಣ ಸಂಜೆ ಹೊತ್ತಿಗೆ ಅಸ್ವಸ್ಥಗೊಂಡ್ರು. ಕೂಡ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಇನ್ನು, ಈ ಕ್ಷಣದವರೆಗೂ ಮರೀಗೌಡ, ಮಾಳಿಗೆ ಶಂಕರ್ ವಿಚಾರಣೆಯನ್ನು ಇಡಿ ಮುಂದುವರೆಸಿದೆ. ಇನ್ನು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಇಡಿ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು
Advertisement
Advertisement
ಈ ಮಧ್ಯೆ ಮುಡಾದ ಮತ್ತಷ್ಟು ಅಕ್ರಮಗಳು ಬಹಿರಂಗಗೊಂಡಿವೆ. ಸರಿಯಾದ ಮೂಲ ದಾಖಲೆಗಳೇ ಇಲ್ಲದೇ 1950 ಸೈಟ್ ಹಂಚಿಕೆಯಾಗಿವೆ. ಅಲ್ಲದೇ 5 ಸಾವಿರ ಸೈಟ್ಗಳಿಗೆ 2 ಸಾವಿರ ಬಾಂಡ್ ಪೇಪರ್ಗಳೇ ಇಲ್ಲ ಎನ್ನಲಾಗಿದೆ. ಇನ್ನು, ನನ್ನ ವಿರುದ್ಧದ ದೂರಿನಲ್ಲಿ ಸತ್ಯಾಂಶ ಇಲ್ಲ… ದಾಖಲೆ ನಕಲಿ ಆಗಿದ್ರೆ ಕಾನೂನು ಹೋರಾಟ ಮಾಡಲಿ ಎಂದು ಸಿಎಂಗೆ ದೂರುದಾರ ಸ್ನೇಹಮಯಿ ಕೃಷ್ಣ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ
Advertisement
ಈ ಮಧ್ಯೆ, ಮುಡಾ ಕೇಸಲ್ಲಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನವೆಂಬರ್ 23ಕ್ಕೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ. ಇದೇ ಶುಕ್ರವಾರ ಅಥ್ವಾ ಶನಿವಾರ ವಿಚಾರಣೆ ನಡೆಸಿ ಎಂಬ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ಕೆವಿ ಅರವಿಂದ್ ಅವರಿದ್ದ ಪೀಠ ತಿರಸ್ಕರಿಸಿದೆ.
ಮುಡಾ ಕೇಸಲ್ಲಿ ಇಡಿ ವಿಚಾರಣೆಯ ಹಾದಿ…
ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜುಗೆ ಡ್ರಿಲ್
ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್ಗೆ ಇಡಿ ಶಾಕ್
ಅಕ್ಟೋಬರ್ 30 ದಿನೇಶ್ ಕುಮಾರ್ – ಮುಡಾ ಮಾಜಿ ಆಯುಕ್ತ
ನವೆಂಬರಗ 11 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್ಗೆ ಗ್ರಿಲ್, ಪಾಲಯ್ಯ
ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ಗೆ ಗ್ರಿಲ್
ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
ನವೆಂಬರ್ 14 ರಂದು ನಿವೃತ್ತ ತಹಶೀಲ್ದಾರ್ ಮಾಳಿಗೆ ಶಂಕರ್ ವಿಚಾರಣೆ
ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮರೀಗೌಡ ಆಪ್ತ ಶಿವಣ್ಣ ವಿಚಾರಣೆ