ಮೈಸೂರು/ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ (Chief Minister) ಬಾಮೈದ ಮಲ್ಲಿಕಾರ್ಜುನಸ್ವಾಮಿ ಅವರನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಇಡಿ ಮುಂದೆ ಹಾಜರಾದ ಮಲ್ಲಿಕಾರ್ಜುನ ಸ್ವಾಮಿ (Mallikarjunaswamy) ಅವರು ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿದರು. ಸಂಜೆ ವೇಳೆಗೆ ವಿಚಾರಣೆ ಮುಗಿದ ಬಳಿಕ ಮನೆಗೆ ತೆರಳಿದರು. ಎ-4 ಹಾಗೂ ಭೂಮಾಲೀಕ ದೇವರಾಜು ಬಳಿ ಜಮೀನು ಪಡೆದು ಸಿಎಂ ಪತ್ನಿಗೆ ಎ-3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಕುಂಕುಮ ರೂಪದಲ್ಲಿ ಭೂಮಿ ನೀಡಿದ್ದರು. ಮುಡಾ ಪ್ರಕರಣದಲ್ಲಿ ಇಡಿ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿಎಂ ಪತ್ನಿ ಪಾರ್ವತಿ ಹಾಗೂ ಸಿದ್ದರಾಮಯ್ಯ (Siddaramaiah) ಅವರಿಗೂ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ
Advertisement
Advertisement
ಮುಡಾ ತನಿಖೆಯ ಸಂಬಂಧ ಈವರೆಗೆ ಯಾರ‍್ಯಾರಿಗೆ ಇಡಿ ನೋಟಿಸ್?
Advertisement
* ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
* ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
* ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
* ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜು ವಿಚಾರಣೆ
* ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
* ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
* ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಶಾಕ್
* ನವೆಂಬರ್ 12 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್‌ಗೆ ವಿಚಾರಣೆ
* ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ವಿಚಾರಣೆ
* ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
* ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮಾಳಿಗೆ ಶಂಕರ್, ಮರೀಗೌಡ ಆಪ್ತ
ಶಿವಣ್ಣ ವಿಚಾರಣೆ
* ನವೆಂಬರ್ 18ರಂದು ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆ
Advertisement
ಇನ್ನೂ, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ಸೋಮಣ್ಣ ಮುಖಾಮುಖಿ ಆಗಿದ್ರು. ಸಿಎಂ ಆಗಮಿಸುವಾಗ ಸೋಮಣ್ಣ ಹೊರಡ್ತಿದ್ರು. ಈ ವೇಳೆ, ಸಿಎಂ ಬಳಿ ಮುಡಾ ಕೇಸ್ ಪ್ರಸ್ತಾಪಿಸಿದ ಸೋಮಣ್ಣ, ಮುಂಚೆಯೇ ಸೈಟ್ ವಾಪಸ್ ಮಾಡಿದ್ರೆ ಇಷ್ಟೆಲ್ಲಾ ರಾದ್ಧಾಂತ ಆಗ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ರು. ಅದಕ್ಕೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡ್ರು. ಹಾಗಿದ್ರೆ ಸದನದಲ್ಲೇಕೆ 65 ಕೋಟಿ ಸೈಟ್ ಅಂತಾ ಹೇಳಿದ್ದು ಎಂದು ಸೋಮಣ್ಣ ಕೇಳಿದ್ರು.. ಅದಕ್ಕೆ ಅದು ಹಾಗಲ್ಲ.. ನಾನು ಹೇಳಿದ್ದು ಬೇರೆ ಎಂದು ಸಿಎಂ ಸಮಜಾಯಿಷಿ ಕೊಟ್ರು.. ದೇವರು, ನಂಬಿಕೆಗಳ ವಿಚಾರಗಳು ಪ್ರಸ್ತಾಪ ಆದ್ವು. ನಾನು ದೇವರಲ್ಲಿ ನಂಬಿಕೆ ಇಟ್ಟಿಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೊಂಡ್ರು.
ಈ ಮಧ್ಯೆ, ಜಿಟಿ ದೇವೇಗೌಡ ಸಂಬಂಧಿ ಮಹೇಂದ್ರಗೆ ಅಕ್ರಮವಾಗಿ 50:50 ಸೈಟ್ ನೀಡಿದ ಪ್ರಕರಣ ಸಂಬಂಧ ಇನ್ನಷ್ಟು ವಿಚಾರ ಬಯಲಾಗಿದೆ. 2020ರಲ್ಲಿ ಮಹೇಂದ್ರ ಜಮೀನು ಖರೀದಿಸಿದ್ರು. ಇದಾದ ಏಳೇ ತಿಂಗಳಿಗೆ ಮಹೇಂದ್ರಗೆ 50:50 ಅನುಪಾತದಲ್ಲಿ 19 ಸೈಟ್ ಹಂಚಿಕೆ ಆಗಿದ್ವು. ಮುಡಾ ವಶಪಡಿಸಿಕೊಂಡ ದೇವನೂರು ಭೂಮಿಯಲ್ಲಿ ಲೇಔಟ್ ಅಭಿವೃದ್ಧಿ ಆಗಿ, ಮನೆ ಕಟ್ಟಿದ ಸ್ಥಳದಲ್ಲಿನ ಜಮೀನನ್ನು ಮಹೇಂದ್ರ ಖರೀದಿಸಿದ್ದಾದ್ರೂ ಹೇಗೆ ಎಂಬುದೇ ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಕ್ತಿದೆ, ಸರ್ಕಾರ ಪರಿಷ್ಕರಣೆ ಮಾಡಬೇಕು: ನಟ ಚೇತನ್