ಬೆಂಗಳೂರು: ಮುಡಾ ಪ್ರಕರಣದಲ್ಲಿ (MUDA Case) ಸಾಕ್ಷ್ಯಾಧಾರಗಳು ಇರದ್ದಕ್ಕೆ ಸಿದ್ದರಾಮಯ್ಯ ಅವರಿಗೆ (Siddaramaiah) ಲೋಕಾಯುಕ್ತ (Lokayukta) ಕ್ಲೀನ್ ಚಿಟ್ ಕೊಟ್ಟಿದೆ. ಲೋಕಾಯುಕ್ತ ತನಿಖೆಯನ್ನು ಬಿಜೆಪಿ ಪ್ರಶ್ನೆ ಮಾಡುವುದು ಸರಿನಾ ಎಂದು ಗೃಹ ಸಚಿವ ಪರಮೇಶ್ವರ್ (G. Parameshwara) ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಮುಡಾ ಪ್ರಕರಣವನ್ನು ಸಿಬಿಐಗೆ (CBI) ಕೊಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐಗೆ ಕೊಡುವ ವಿಚಾರದಲ್ಲಿ ಹೈಕೋರ್ಟ್ ಆದೇಶ ಮಾಡಿದೆ. ಸಿಬಿಐಗೆ ಕೊಡೋ ಅಗತ್ಯ ಇಲ್ಲ. ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಎರಡು ಏಜೆನ್ಸಿಗಳು ಒಂದೇ ವಿಷಯದಲ್ಲಿ ತನಿಖೆ ಮಾಡೋದು ಕಾನೂನಿಗೆ ವಿರುದ್ದ ಅಂತ ಹೇಳಿದ್ದಾರೆ. ಲೋಕಾಯುಕ್ತದವರು ಕ್ಲೀನ್ ಚಿಟ್ ಕೊಟ್ಟಿದ್ದಾರೆ ಅಂದರೆ ಲೋಕಾಯುಕ್ತ ತನಿಖೆಯಲ್ಲಿ ಬಿಜೆಪಿ ಪ್ರಶ್ನೆ ಮಾಡ್ತಿದೆಯಾ ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಅರ್ಚಕರಿಗೆ ಸೇರಬೇಕಿದ್ದ ಹಣ ಅಧಿಕಾರಿಗಳ ಕುಟುಂಬಕ್ಕೆ – ಮುಜರಾಯಿ ಇಲಾಖೆಯ 1.87 ಕೋಟಿ ಗುಳುಂ
Advertisement
Advertisement
ಲೋಕಾಯುಕ್ತಗೆ ಸಿಕ್ಕ ಸಾಕ್ಷಿ ಆಧಾರದ ಮೇಲೆ ಅವರು ತೀರ್ಮಾನ ಮಾಡಿದ್ದಾರೆ .ಸಾಕ್ಷಿ, ಪುರಾವೆ ಇಲ್ಲ ಅಂದಾಗ ಅವರು ಒಂದು ತೀರ್ಮಾನ ಕೊಟ್ಟಿದ್ದಾರೆ. ಅದನ್ನ ಬಿಜೆಪಿ ಪ್ರಶ್ನೆ ಮಾಡೋದು ಎಷ್ಟು ಸರಿ? ಬಿಜೆಪಿ ಅವರಿಗೆ ಅನುಕೂಲ ಆದಾಗ ಎಲ್ಲವೂ ಸರಿ ಇರುತ್ತದೆ. ಇವರಿಗೆ ವಿರುದ್ಧವಾಗಿ ಬಂದರೆ ವಿಚಾರ ಸರಿ ಇರೋದಿಲ್ಲವಾ? ಇದು ಎಂತಹ ರಾಜಕೀಯ ಅಂತ ನನಗೆ ಗೊತ್ತಿಲ್ಲ ಅಂತ ಬಿಜೆಪಿ ಮೇಲೆ ಕಿಡಿಕಾರಿದರು.
Advertisement
ಕೋರ್ಟ್ ಸಿಬಿಐಗೆ ಬೇಡ ಅಂತ ಹೇಳಿದೆ. ಬೇಕಾದ್ರೆ ಮತ್ತೆ ಕೋರ್ಟ್ ಮುಂದೆ ಹೋಗಿ ಸಿಬಿಐಗೆ ಕೊಡಿ ಅಂತ ಒತ್ತಾಯ ಮಾಡಲಿ. ಈಗಾಗಲೇ ಕೋರ್ಟ್ ತೀರ್ಮಾನ ಮಾಡಿದೆ. ಸಿಬಿಐ ಅಗತ್ಯವಿಲ್ಲ ಅಂತ. ಮತ್ತೆ ಮತ್ತೆ ಅದನ್ನೇ ಮಾತಾಡಿದ್ರೆ ಏನ್ ಅರ್ಥ ಇದೆ. ಮೇಲ್ನೋಟಕ್ಕೆ ಕಂಡುಬರುತ್ತಿದೆ ಅಂತ ಕೋರ್ಟ್ ಹೇಳಿತ್ತು. ಅದನ್ನ ತನಿಖೆ ಮಾಡೋಕೆ ಕೋರ್ಟ್ ಹೇಳಿತ್ತು. ಲೋಕಾಯುಕ್ತ ತನಿಖೆ ಮಾಡಿ ಅಂತ ಅವರೇ ಹೇಳಿದ್ರು. ತನಿಖೆಯಲ್ಲಿ ಮೇಲ್ನೋಟಕ್ಕೆ ಇದ್ದು ಆರೋಪ ಇಲ್ಲ ಅಂತ ಹೇಳಿದ್ದಾರೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಸರ್ಕಾರದ ಅಧೀನದಲ್ಲಿ ಇದೆ ಅಂತ ಹೇಗೆ ಆಗುತ್ತದೆ. ಲೋಕಾಯುಕ್ತ ಕೆಲಸ ಕಾರ್ಯಗಳಲ್ಲಿ ಯಾವುದೇ ಡೈರೆಕ್ಟರ್ ಕೊಡುತ್ತಾ? ಹಾಗೆ ಹೀಗೆ ಮಾಡಿ ಅಂತ ಸೂಚನೆ ಕೊಡೋಕೆ ಆಗುತ್ತಾ? ಅದು ಸ್ವತಂತ್ರ ಸಂಸ್ಥೆ ಎಂದರು.
Advertisement
ಲೋಕಾಯುಕ್ತ ರಿಪೋರ್ಟ್ ಸಿಎಂ 5 ವರ್ಷ ಮುಂದುವರೆಯೋ ಚರ್ಚೆಗೆ ಶಕ್ತಿ ನೀಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಮಾತಾಡೊಲ್ಲ. ರಾಜಕೀಯ ಪ್ರಶ್ನೆಗಳಿಗೆ ನಾನು ಉತ್ತರ ಕೊಡೊಲ್ಲ ಎಂದರು.