MUDA Case | ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ – ಹೆಚ್‌ಡಿಕೆ

Public TV
2 Min Read
HD Kumaraswamy 4

– ಇಡಿ ಸೀಳುನಾಯಿ ಆದ್ರೆ ನಿಮ್ಮ ಎಸ್‌ಐಟಿ ಏನು? ಅಂತ ಪ್ರಶ್ನೆ

ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Case) ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಡಾ ಅಕ್ರಮದ ಬಗ್ಗೆ ಇಡಿ ಲೋಕಾಯುಕ್ತಗೆ ಪತ್ರ ಬರೆದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಸರ್ಕಾರ ಮತ್ತು ಸಚಿವರು ಆಲಿಬಾಬಾ 40 ಕಳ್ಳರಿ ರೀತಿ. ಇಡಿ ಪತ್ರಕ್ಕೂ ಕೇಂದ್ರ ಸರ್ಕಾರಕ್ಕೂ ಏನ್ ಸಂಬಂಧ? ಮುಡಾ ಹಗರಣದ ಬಗ್ಗೆ ಹೈಕೋರ್ಟ್‌ನಲ್ಲಿ ತನಿಖೆಗೆ ಆದೇಶ ಆಗಿದೆ. ಅದರ ಮೇಲೆ ತನಿಖೆ ನಡೆಯಿತ್ತಿದೆ. ಇಡಿಯವರಿಗೆ ಕೇಂದ್ರ ಸರ್ಕಾರ (Central Government) ಸೂಚನೆ ಕೊಟ್ಟಿಲ್ಲ. ಮುಡಾ ಕೇಸ್‌ನಲ್ಲಿ ರಾಜ್ಯಪಾಲರಿಗೆ ದೂರು ನೀಡಿರೋರೆ ಇಡಿಗೂ (ED) ದೂರು ಕೊಟ್ಟಿದ್ದಾರೆ. ಮುಡಾದಲ್ಲಿ ಹಣಕಾಸು ವ್ಯವಹಾರ ನಡೆದಿರೋ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ. ಅದರ ಮೇಲೆ ಇಡಿ ತನಿಖೆ ನಡೆಸಿದೆ, ಮಾಹಿತಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು (Lokayukta Officers) ಸರ್ಕಾರದ ಅಧೀನದಲ್ಲಿ ಬರೋರು. ಇವತ್ತು ಎಷ್ಟು ಜನ ಮಂತ್ರಿಗಳು ಸಮಜಾಯಿಷಿ ಕೊಡ್ತಿದ್ದಾರೆ. ಇಡಿಯನ್ನ ಕೃಷ್ಣಭೈರೇಗೌಡರು ಸೀಳು ನಾಯಿ ಅಂದಿದ್ದಾರೆ. ಅವರಿಗೆ ಹ್ಯಾಟ್ಸ್ ಆಫ್ ಮಾಡೋಣ. ಇಡಿ ಸೀಳು ನಾಯಿ ಆದರೆ ನಿಮ್ಮ ಎಸ್‌ಐಟಿ ಏನು? ಎಸ್‌ಐಟಿ ಅವರು ಏನು ಮಾಡಿದ್ರು. ನಿಮ್ಮ ಸರ್ಕಾರದಲ್ಲಿ ಎಷ್ಟು ಎಸ್‌ಐಟಿ (SIT) ಮಾಡಿದ್ದೀರಾ? 17-18 ಎಸ್‌ಐಟಿ ಮಾಡಿದ್ದೀರಾ. ಸಹೋದರ ರೇವಣ್ಣನ ಕೇಸ್ ನಲ್ಲಿ ಯಾವ ರೀತಿ ನಡೆದುಕೊಂಡ್ರಿ. ಮಾಜಿ ಪ್ರಧಾನಿಗಳ ಮನೆಗೆ ಪೊಲೀಸರನ್ನ ನುಗ್ಗಿಸಿ ರೇವಣ್ಣನನ್ನ ಅರೆಸ್ಟ್ ಮಾಡಿಸಿದ್ರಿ. ನಿಮಗೆ ಯಾವ ನೈತಿಕತೆ ಇದೆ? ರೇವಣ್ಣ ನಿಮಗೆ ಏನ್ ಮಾಡಿದ್ದ? 5 ವರ್ಷ ಕೇಸನ್ನ ಯಾರಿಂದಲೋ ದೂರು ಪಡೆದು ಏನೇನು ನಡೆಸಿದ್ದೀರಾ ನೀವು, ಎಲ್ಲವೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಹಾಸನ ಜನಕಲ್ಯಾಣ ಸಮಾವೇಶ ಕುರಿತು ಮಾತನಾಡಿ, ಹಾಸನದಲ್ಲಿ ಅದೇನೋ ಸಮಾವೇಶ ಮಾಡ್ತಿದ್ದಾರಂತೆ, ಸಾಂತ್ವನ ಹೇಳೋಕೆ ಹೋಗ್ತಾರಂತೆ. ಯಾರಿಗೆ ಸಾಂತ್ವನ ಹೇಳ್ತೀಯಪ್ಪ? ಅ ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿದ್ರಿ. ಯಾರನ್ನಾದ್ರು ಒಬ್ಬರನ್ನ ಅರೆಸ್ಟ್ ಮಾಡಿದ್ರಾ? ಆ ವಿಡಿಯೋ ಬಿಟ್ಟೋರನ್ನ ಅರೆಸ್ಟ್ ಮಾಡಿದ್ರಾ? ಇದು ನಿಮ್ಮ ಎಸ್‌ಐಟಿ ತನಿಖೆನಾ? ಇದೆಲ್ಲದ್ದಕ್ಕೂ ಕಾಲ ಒಂದು ದಿನ ಉತ್ತರ ಕೊಡುತ್ತೆ. ಸತ್ಯಗಳು ಹೊರಗೆ ಬರುತ್ತೆ. ಕೃಷ್ಣಭೈರೇಗೌಡರೇ ನೀವು ಹೇಗೆ ನಡೆದುಕೊಳ್ತೀರಾ, ನಿಮ್ ಸರ್ಕಾರ ಹೇಗೆ ನಡೆದುಕೊಳ್ತಿದೆ, ಪರಮೇಶ್ವರ್ ಹೇಳಿಕೆ ನೋಡಿದೆ. ಇವರನ್ನು ದೇವರೇ ಕಾಪಾಡಬೇಕು. ಆಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತಾಗಿದೆ ಇವರದ್ದು. ಹೇಳಿಕೆ ಕೊಡೋಕೆ ಸಚಿವರು ಕ್ಯೂ ನಿಂತಿದ್ದಾರೆ. ಈ ರಾಜ್ಯ ಸರ್ಕಾರ ಆಲಿಬಾಬಾ ಮತ್ತು 40 ಮಂದಿ ಕಳ್ಳರ ಸಂತೆ ಎಂದು ಲೇವಡಿ ಮಾಡಿದ್ದಾರೆ.

Share This Article