ಬಾಗಲಕೋಟೆ: ಸಿದ್ದರಾಮಯ್ಯನವರ (Siddaramaiah) ಪತ್ನಿ ಸೈಟ್ ಮರಳಿಸಿದ್ದು ತಪ್ಪಾ? ಪ್ರಕರಣದಲ್ಲಿ ಏನು ತಪ್ಪಿದೆ ಎಂದು ಜನರಿಗೆ ತೋರಿಸಲಿ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ (RB Tiimmapur) ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಿಂದ (MUDA Case) ಸಿಎಂ ಅವರ ಧರ್ಮಪತ್ನಿಗೆ ಮುಜುಗರವಾಗಿದೆ. ಹೀಗಾಗಿ ಅವರು ಸೈಟ್ ಮರಳಿಸಿದ್ದಾರೆ. ನಮ್ಮ ಮನೆಯವರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಈ ಆಸ್ತಿಯೇ ಬೇಡ ಎಂದಿದ್ದಾರೆ. ಸೈಟ್ ಮರಳಸಿದ್ದು ತಪ್ಪಾ? ಪ್ರಕರಣದಲ್ಲಿ ಏನು ತಪ್ಪಿದೆ ಎಂದು ಜನರಿಗೆ ತೋರಿಸಲಿ. ಇದರಲ್ಲಿ ಸಿಎಂ ಅವರ ಚಾರಿತ್ರ್ಯ ವಧೆ ಮಾಡುವ ಕೆಲಸ ನಡೆಯುತ್ತಿದೆ ಇದು ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಮಾಜಿ ಸಂಸದ ಮುನಿಸ್ವಾಮಿ
Advertisement
Advertisement
ಮುಡಾ ಪ್ರಕರಣದಲ್ಲಿ ವಿಪಕ್ಷಗಳು ಹಾಗೂ ಕೇಂದ್ರ ಸರ್ಕಾರದ ಕುತಂತ್ರದಿಂದ ಸಿಎಂ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ವಿಪಕ್ಷ ನಾಯಕರ ಕುತಂತ್ರಗಳು ನಡೆಯುವುದಿಲ್ಲ. ಜನ ನಮ್ಮ ಜೊತೆ ಇದ್ದಾರೆ. ಷಡ್ಯಂತ್ರ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ. ನಮ್ಮ ಸಿಎಂ ಯಾವ ಆರೋಪಕ್ಕೂ ಜಗ್ಗುವುದಿಲ್ಲ ಎಂದು ಹೇಳಿದರು.
Advertisement
ರಾಜ್ಯದಲ್ಲಿ ಬಿಜೆಪಿಗೆ (BJP) ಜನ ಬಹುಮತ ನೀಡಿಲ್ಲ. ಅವರು ಕುದುರೆ ವ್ಯಾಪಾರ ಮಾಡಿಯೇ ಅಧಿಕಾರ ಮಾಡಿದ್ದಾರೆ. ಈಗಲೂ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಈಗ ನಮ್ಮ ಶಾಸಕರು ಮತ್ತಷ್ಟು ಗಟ್ಟಿಯಾಗಿದ್ದಾರೆ. ಬಿಜೆಪಿಯವರ ಆಪರೇಷನ್ ಯಾವತ್ತೂ ಫಲಿಸಲ್ಲ ಎಂದು ಹೇಳಿದರು.
Advertisement
ಸಿಎಂ ಆಗಲು ಬಿಜೆಪಿಯಲ್ಲಿ ಸಾವಿರ ಕೋಟಿ ಇಟ್ಟಿದ್ದಾರೆ ಎಂಬ ಶಾಸಕ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನೋಡಿ ಇದು ಕರ್ನಾಟಕದ ಜನರಿಗೆ ಗೊತ್ತು, ಜನ ಬಿಜೆಪಿಯವರಿಗೆ ನೀವು ಯೋಗ್ಯರಲ್ಲ ಎನ್ನುವ ದೃಷ್ಟಿಯಿಂದಲೇ ಯಾವತ್ತೂ ಅಧಿಕಾರ ಕೊಟ್ಟಿಲ್ಲ. ಇಂತಹ ಹಣ ಮತ್ತೊಂದು ಮಗದೊಂದು ತೋರಿಸಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಈಗಲೂ ಪ್ರಯತ್ನಿಸಿದ್ದಾರೆಯೋ ಏನೋ ಹೇಳಕ್ಕಾಗಲ್ಲ. ಆದರೆ ಬಿಜೆಪಿಯವರ ಇತಿಹಾಸ ಕರ್ನಾಟಕದಲ್ಲಿ ಜನ ಬರೆದಿದ್ದಾರೆ, ಬಾಂಬೆಯಲ್ಲಿ ಏನೇನ್ ಆಯ್ತು ಅಂತ ನಿಮ್ಮ ಟಿವಿಯಲ್ಲಿ ಎಲ್ಲ ನಾವು ನೋಡಿದ್ದೇವೆ. ನಾವು ಅಷ್ಟೇ ಅಲ್ಲ. ಭಾರತ ಜನತೆಗೆ ತೋರಿಸಿದ ನಿಮಗೆ ಧನ್ಯವಾದಗಳು ಎಂದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು.