– ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು: ಮುಡಾ ಪ್ರಕರಣದಲ್ಲಿ ಇ.ಡಿ ವಿಚಾರಣೆಯಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ಮುಂದುವರಿದಿದೆ.
Advertisement
ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಧಾರವಾಡ ಹೈಕೋರ್ಟ್‌ನಲ್ಲಿ ನಡೆಯಿತು. ಸಮನ್ಸ್ ರದ್ದು ಕೋರಿದ್ದ ಅರ್ಜಿಗೆ ಇ.ಡಿ ಪರ ಹಿರಿಯ ವಕೀಲ ಅರವಿಂದ ಕಾಮತ್ ಸುದೀರ್ಘ 144 ಪುಟಗಳ ಆಕ್ಷೇಪಣೆ ಸಲ್ಲಿಸಿದ್ದರು.
Advertisement
ಸುಪ್ರೀಂ ಕೋರ್ಟ್‌ಗಳ ವಿವಿಧ ಆದೇಶ ಉಲ್ಲೇಖಿಸಿ ಅರವಿಂದ್ ಚೌಟ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. ಅಂತಿಮ ಆದೇಶದ ತನಕ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ.
Advertisement
ಪಾರ್ವತಿ ಪರ ವಕೀಲರ ವಾದವೇನು?
* ಮೂಲ ಅಂಶಗಳೇ ಇಲ್ಲದೇ ಇಡಿ ಇಸಿಐಆರ್ ದಾಖಲಿಸಿದೆ
* ಸೈಟ್‌ಗಳನ್ನು ಹಿಂತಿರುಗಿಸಿರುವುದು ಅಪರಾಧ ಒಪ್ಪಿಕೊಂಡಂತಲ್ಲ
* ಮುಖ್ಯಮಂತ್ರಿ ಮೇಲೆ ಆರೋಪ ಬಂದಿದ್ದಕ್ಕೆಂದು ಸೈಟ್ ಹಿಂತಿರುಗಿಸಲಾಗಿದೆ
* ಲೋಕಾಯುಕ್ತ ಎಫ್‌ಐಆರ್ ದಾಖಲು ಮಾಡಿದಾಗ 14 ಸೈಟ್‌ಗಳನ್ನು ವಾಪಸ್ ಮಾಡಿದ್ದಾರೆ
* 2024 ರ ಅ.1 ರಂದು ಪಾರ್ವತಿ ಅವರು 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ
* ಅದೇ ದಿನ ಇ.ಡಿ ಅಧಿಕಾರಿಗಳು ಇಸಿಐಆರ್ ದಾಖಲು ಮಾಡಿದ್ರು,
* ಆದ್ರೆ ಪಾರ್ವತಿ ಅವರು ಸೈಟಿಂದ ಲಾಭಾಂಶವನ್ನು ಪಡೆದೇ ಇಲ್ಲ
* ಹೀಗಿರುವಾಗ ಮನಿಲಾಂಡ್ರಿಂಗ್ ಪ್ರಕರಣ ದಾಖಲು ಮಾಡಿದ್ದಾರೆ
* ಮನಿಲಾಂಡ್ರಿಂಗ್ ತನಿಖೆ ಮಾಡೋದು ಇಡಿ ಅಧಿಕಾರಿಗಳ ತನಿಖಾ ವ್ಯಾಪ್ತಿಗೆ ಬರೋದಿಲ್ಲ
* ಪಿಎಂಎಲ್‌ಎ ಸೆಕ್ಷನ್ ಪ್ರಕಾರ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಲಾಭಾಂಶ ಮಾಡಬೇಕು ಅಥವಾ ಆ ಹಣದಿಂದ ಬೇರೆ ಯಾವುದಾದರೂ ಪ್ರಕ್ರಿಯೆ ಮಾಡಿರಬೇಕು
* 14 ಸೈಟ್‌ಗಳನ್ನು ಸ್ವಯಂ ಪ್ರೇರಿತವಾಗಿ ಪಾರ್ವತಿ ಅವರು ವಾಪಸು ನೀಡಿದ್ದಾರೆ
* ಅಕ್ರಮವಾಗಿ ಗಳಿಸಿದ ಆಸ್ತಿ ತಮ್ಮ ಬಳಿ ಇದ್ದು, ಬಳಕೆ ಮಾಡುತ್ತಿದ್ದು, ಚಟುವಟಿಕೆ ನಡೆಯುತ್ತಿದ್ದರೆ ಮಾತ್ರ ಸೆಕ್ಷನ್ 3 ಅನ್ವಯ ಆಗುತ್ತೆ
* ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಇಡಿ ತನಿಖೆ ನಡೆಸಬಹುದು. ಆದರೆ ಸೈಟ್‌ಗಳನ್ನು ಮರಳಿಸಿದ ನಂತರ ಇಡಿ ತನಿಖೆ ಆರಂಭಿಸಿದೆ
* ಈಗ ಇ.ಡಿ ಮುಟ್ಟುಗೋಲು ಹಾಕಿಕೊಂಡಿರೋ ಜಮೀನು ಕೂಡ ಕಾನೂನಾತ್ಮಕಾವಾಗಿ ಇಲ್ಲ
* ತನ್ನ ಕಾರ್ಯವ್ಯಾಪ್ತಿ ಬಿಟ್ಟು ಇಡಿ ಪರ್ಯಾಯ ತನಿಖೆ ನಡೆಸುತ್ತಿದೆ
Advertisement
ಇ.ಡಿ ಪರ ಎಎಸ್‌ಜಿ ಅರವಿಂದ್ ಕಾಮತ್ ವಾದವೇನು?
* ಮುಡಾ ನಿಯಮಗಳನ್ನು ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿದೆ
* ತನಿಖಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟ ಇ.ಡಿ
* 1990 ರಿಂದ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ನಿವೇಶನ ಪಡೆದಿದ್ದು, 5 ಸಾವಿರ ಕೋಟಿಗೂ ದೊಡ್ಡ ಹಗರಣವಾಗಿದೆ
* ಆರೋಪಿಗಳ ಸಂಬಂಧಿಕರು ರಿಯಲ್ ಎಸ್ಟೇಟ್‌ನಲ್ಲಿ ಇದ್ದಾರೆ. ಹೀಗಾಗಿ ಮಾಹಿತಿಯನ್ನು ಕೇಳೋದ್ರಲ್ಲಿ ತಪ್ಪಿಲ್ಲ
* ಸಚಿವ ಬೈರತಿ ಸುರೇಶ್ ಸಂಬಂಧಿಗಳು ರಿಯಲ್ ಎಸ್ಟೇಟ್‌ನಲ್ಲಿ ಇದ್ದಾರೆ
* ಕೆಲವೊಮ್ಮೆ ಸಂಬಂಧಿಗಳ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ಹೀಗಾಗಿ ಈ ಮಾಹಿತಿಯನ್ನು ಕೇಳಲಾಗಿದೆ
* ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಲ್ಲಿ ಸೈಟ್‌ಗಳ ರಿಜಿಸ್ಟ್ರಾರ್ ಮಾಡಲಾಗಿದೆ
* ಹೀಗಾಗಿ ಇದು ಕೇವಲ 14 ಸೈಟ್‌ಗಳಿಗೆ ಸಂಬಂಧಿಸಿದ ದೂರು ಮಾತ್ರವಲ್ಲ
* ನಗರಾಭಿವೃದ್ಧಿ ಸಚಿವರು ತಮ್ಮ ಸಂಬಂಧಿಕರ ಹೆಸರಲ್ಲಿ ಜಮೀನು ಮಾಡಿದ್ದಾರೆ
* ಹೀಗಾಗಿ ನಾವು ನಿಮ್ಮ ಮತ್ತು ನಿಮ್ಮ ಕುಟುಂಬದ ಮಾಹಿತಿ ನೀಡಿ ಅಂದಿದ್ದು, ನಮ್ಮ ತನಿಖೆಯಲ್ಲಿ ಇದೆಲ್ಲಾ ಬಹಿರಂಗ ಆಗಿದೆ
* ಮುಡಾ ಅಧಿಕಾರಿಗಳು ಜೆಟ್ ಸ್ಪೀಡ್‌ನಲ್ಲಿ ಅದೇ ದಿನ ಸೈಟ್ ವಾಪಸ್ ಪಡೆದಿದ್ದಾರೆ
* ಸಿಎಂ ಅವರ ಪತ್ನಿ ಆಗಿರೋದ್ರಿಂದ ಒಂದೇ ದಿನಕ್ಕೆ ಪ್ರಕ್ರಿಯೆ ಮುಗಿಸುತ್ತಾರೆ. ಯಾಕಾಗಿ ಅಷ್ಟೊಂದು ಆತುರದ ಕ್ರಮ ಆಗಿದೆ
* ಇದು ಹೇಗಿದೆ ಅಂದರೆ, ಆರೋಪಿ ಒಬ್ಬ ತನ್ನ ಕಳ್ಳತನ ಇನ್ನೊಬ್ಬನ ಕೈಯಲ್ಲಿ ಕೊಟ್ಟಿದ್ದಾರೆ. ಇನ್ನೊಂದು ಕೈಯಲ್ಲಿ ಕೊಟ್ಟು ತಾವು ಕೈ ತೊಳೆದುಕೊಂಡು ಸ್ವಚ್ಛವಾದಂತೆ
* ಸಿಎಂ ಸಿದ್ದರಾಮಯ್ಯ ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ಈ ಸೈಟ್‌ಗಳನ್ನು ಮುಚ್ಚಿಟ್ಟಿದ್ದಾರೆ. ಯಾಕೆ ಮುಚ್ಚಿಟ್ಟಿದ್ರು?