ಮೈಸೂರು: ಮುಡಾದ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಇಬ್ಬರು ಜೆಡಿಎಸ್ ಶಾಸಕರ ವಿರುದ್ಧ ದೂರು ನೀಡಿದ್ದಾರೆ.
ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ಜೆಡಿಎಸ್ ಶಾಸಕರಾದ ಜಿ.ಟಿ ದೇವೇಗೌಡ (GT Devegowda) ಹಾಗೂ ಪುತ್ರ ಜಿ.ಡಿ ಹರೀಶ್ ಗೌಡ (Harish Gowda) ವಿರುದ್ಧ ಲೋಕಾಯುಕ್ತಕ್ಕೆ (Lokayukta) ದೂರು ಸಲ್ಲಸಿದ್ದಾರೆ. ಇದನ್ನೂ ಓದಿ: MUDA Scam | ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್ ಆರೋಪ
ಮುಡಾ ಸೈಟು ಹಂಚಿಕೆಯಲ್ಲಿ ಶಾಸಕ ಜಿ.ಟಿ ದೇವೇಗೌಡರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ವೇ ನಂ.81/2ರಲ್ಲಿ 2.22 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲವೆಂದು 19 ನಿವೇಶನವನ್ನು ಜಿಟಿಡಿ ಕುಟುಂಬ ಪಡೆದುಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಭೂ ಮಾಲೀಕನ ಮನೆಗೆ ತೆರಳಿ ಮಾತುಕತೆ ನಡೆಸಿರುವ ಫೋಟೋ ಸಹ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?
ದೇವನೂರು ಗ್ರಾಮದ ಶಂಕರಯ್ಯ ಕುಟುಂಬದ ಜೊತೆ ಶಾಸಕರಾದ ಜಿ.ಟಿ ದೇವೇಗೌಡ ಹಾಗೂ ಪುತ್ರ ಜಿ.ಡಿ ಹರೀಶ್ ಗೌಡ ವ್ಯವಹಾರ ನಡೆಸಿದ್ದಾರೆ ಹಾಗೂ ಕುಟುಂಬಸ್ಥರನ್ನು ಭೇಟಿಯಾಗಿ ಚೆಕ್ ನೀಡುತ್ತಿದ್ದಾರೆ ಎನ್ನಲಾದ ಫೋಟೋಗಳ ದಾಖಲೆಯೊಂದಿಗೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?
ಜಿ.ಟಿ ದೇವೇಗೌಡ ಅವರು ತಮ್ಮ ಸಹೋದರಿ ಮಗ ಮಹೇಂದ್ರ ಮೂಲಕ ಬೇನಾಮಿ ಆಸ್ತಿ ಖರೀದಿಸಿದ್ದಾರೆ. ಅಂದಿನ ತಹಸಿಲ್ದಾರ್ ರಕ್ಷಿತ್ ಅವರ ಮೇಲೆ ಪ್ರಭಾವ ಬೀರಿ ಮುಡಾ ಆಸ್ತಿಗೆ ಪರಿಹಾರ ಪಡೆದಿದ್ದಾರೆ. ದೇವನೂರು 2ನೇ ಹಂತದ ಸರ್ವೆ ನಂ. 81/2ರಲ್ಲಿ 20ಕ್ಕೂ ಹೆಚ್ಚು ಮನೆ ಇದ್ದರೂ ಪರಿಹಾರ ತೆಗೆದುಕೊಂಡಿದ್ದಾರೆ. ಇದರಲ್ಲಿ ಜಿಟಿಡಿ ಅವರ ಪ್ರಭಾವ, ಬೇನಾಮಿ ಆಸ್ತಿ ಹೊಂದಿರುವುದು ಹಾಗೂ ಅಧಿಕಾರಿಯ ತಪ್ಪು ಎದ್ದು ಕಾಣುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂಬುದು ನನ್ನ ಮನವಿ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಮನವೊ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಶಾಸಕ ಜಿ.ಟಿ ದೇವೇಗೌಡ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಸೈಟು ಕಿಕ್ ಬ್ಯಾಕ್ ಪಡೆದಿರುವ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್