ಹೈದರಾಬಾದ್: ಬೀಳುತ್ತಿದ್ದ ಮೊಬೈಲ್ ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಎಂಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಎಂಟೆಕ್ ಮೊದಲ ವರ್ಷ ಓದುತ್ತಿದ್ದ ವಿ. ಪ್ರಶಾಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ಪ್ರಶಾಂತ್ ರಜೆ ಇದ್ದ ಹಿನ್ನೆಲೆಯಲ್ಲಿ ವಾರಂಗಲ್ ಜಿಲ್ಲೆಯಲ್ಲಿರುವ ತನ್ನೂರು ಹಾಸನಪರ್ತಿಗೆ ರೈಲಿನಲ್ಲಿ ಹೊರಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ.
Advertisement
Advertisement
ಪ್ರಶಾಂತ್ ರೆಡ್ಡಿ ಸಿಕಿಂದರಬಾದ್-ನಲಾಗುಂಡಾ ಮಾರ್ಗದ ಶಾತವಾಹನ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಈ ವೇಳೆ ರೈಲು ಬೋಗಿಯ ಬಾಗಿಲಿನ ಬಳಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದನು. ಆಗ ಮೊಬೈಲ್ ಆತನ ಕೈಯಿಂದ ಆಕಸ್ಮಿಕವಾಗಿ ಜಾರಿದೆ. ನಂತರ ಪ್ರಶಾಂತ್ ಜಾರಿ ಬೀಳುತ್ತಿದ್ದ ಮೊಬೈಲ್ ಅನ್ನು ಹಿಡಿದುಕೊಳ್ಳಲು ಹೋಗಿ ರೈಲಿನ ಕೆಳಗೆ ಬಿದ್ದು, ರೈಲು ಕೆಳಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.
Advertisement
ಈ ಘಟನೆ ಸಂಬಂಧ ಸಿಕಿಂದರಬಾದ್ ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ. ವಿದ್ಯಾರ್ಥಿ ಪ್ರಶಾಂತ್ ರೆಡ್ಡಿ ಮೃತ ದೇಹವನ್ನು ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.