ಚಿಕ್ಕಬಳ್ಳಾಪುರ: ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಕಾಣದಂತೆ ಮಾಯವಾಗಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಬಚ್ಚೇಗೌಡ ಯಾವುದೇ ಕಾರ್ಯಕ್ರಮಗಳಲ್ಲಿ ನನಗೆ ಕಾಣಿಸುತ್ತಿಲ್ಲ. ಕಾಣದಂತೆ ಮಾಯವಾಗಿದ್ದಾರೆ. ಈ ಬಗ್ಗೆ ವಿಭಾಗೀಯ ಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಾನು ಅರುಣ್ ಸಿಂಗ್ ಅವರ ಬಳಿ ಪ್ರಸ್ತಾಪ ಮಾಡುತ್ತೇನೆ. ಸಂಸದರ ಅನುದಾನವನ್ನು ಯಾವುದೇ ತಾಲೂಕುಗಳಿಗೆ ಹಂಚಿಕೆ ಮಾಡುತ್ತಿಲ್ಲ. ಹೊಸಕೋಟೆ ತಾಲೂಕಿಗೆ ಮಾತ್ರ ಸೀಮಿತಿ ಮಾಡಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ: ಸಿದ್ದರಾಮಯ್ಯ
Advertisement
Advertisement
ಉಪ ಚುನಾವಣೆ ವೇಳೆ ನನ್ನ ಸೋಲಿಗೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದರು. ಆ ಬಗ್ಗೆ ನನ್ನ ಬಳಿ ಮೊಬೈಲ್ ದಾಖಲೆಗಳಿವೆ. ಈ ಎಲ್ಲದರ ಬಗ್ಗೆ ಸೀರಿಯಸ್ ಆಗಿ ಹೈಕಮಾಂಡ್ ಗಮನಕ್ಕೆ ತಂದು ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
Advertisement
ರಾಜ್ಯ ಸರ್ಕಾರದ ವಿರುದ್ದ 40 ಪರ್ಸೆಂಟ್ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಮಿಷನ್ ಆರೋಪಕ್ಕೆ ಕಾಂಗ್ರೆಸ್‌ನವರು ಯಾವುದಾದರೂ ದಾಖಲೆ ನೀಡಿದ್ದಾರಾ? ಆರೋಪಕ್ಕೆ ಅವರ ಬಳಿ ಆಡಿಯೋ ವೀಡಿಯೋ ಅಥವಾ ಬೇರೆ ದಾಖಲೆಗಳಿವೆಯಾ? ಕಾಂಗ್ರೆಸ್‌ನವರು ಈ ಹಿಂದೆ 40 ಪರ್ಸೆಂಟ್ ಕಮಿಷನ್ ಪಡೆದಿದ್ದಾರೋ ಏನೋ ಗೊತ್ತಿಲ್ಲ. ಅದಕ್ಕಾಗಿ ಎಲ್ಲರೂ ಅದೇ ರೀತಿ ಅಂತ ಹೇಳುತ್ತಿರುವುದು ಸರಿಯಲ್ಲ. ಸತ್ಯಾಸತ್ಯತೆ ಬಗ್ಗೆ ಮಾತ್ರ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗೊಂದಲದ, ಪಿತೂರಿಯ, ನಾಯಕನಿಲ್ಲದ ಪಕ್ಷ: ಅರುಣ್ ಸಿಂಗ್