ರಾಯಚೂರು: ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಮನಸ್ಥಿತಿ ಗೊತ್ತಿಲ್ಲ, ಆದರೆ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ (MTB Nagaraj) ಹೇಳಿದರು.
ರಾಯಚೂರು (Raichur) ತಾಲೂಕಿನ ಗಾಣದಾಳದಲ್ಲಿ ನಡೆದ ಕನಕದಾಸ ಪುತ್ಥಳಿ ಅನಾವರಣ ಹಾಗೂ ಕನಕ ಭವನ ಭೂಮಿ ಪೂಜೆ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು, ಹೆಚ್. ವಿಶ್ವನಾಥ್ (H Vishwanath) ಅವರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಹೋಗಿದ್ದರು, ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋದಾಗ ಅಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಅವರು ಕಾಂಗ್ರೆಸ್‍ಗೆ (Congress) ಹೋಗುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
Advertisement
Advertisement
ಈ ಬಾರಿಯ ರಾಜ್ಯದ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲು ಶ್ರಮಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ತೆರುವುದೊಂದೇ ಗುರಿಯಾಗಿದೆ. ವರಿಷ್ಠರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಹೇಳಿದರೇ ಹೊಸಕೋಟೆಯಿಂದ ಸ್ಪರ್ಧಿಸುತ್ತೇನೆ. ಮಗ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದರೆ ಮಗನನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತೇನೆ. ಆದರೆ ಬಿಜೆಪಿ ಬಿಟ್ಟು ಹೋಗಲ್ಲ ಎಂದರು.
Advertisement
ಜನಾರ್ದನ ರೆಡ್ಡಿ ಹೊಸ ಪಕ್ಷಕ್ಕೆ ಆಹ್ವಾನ ನೀಡಿರುವ ಗುಮಾನಿ ವಿಚಾರದ ಬಗ್ಗೆ ಮಾತನಾಡಿ, ನಾನು ಯಾವ ಪ್ರಾದೇಶಿಕ ಪಕ್ಷಕ್ಕೂ ಹೋಗಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದರು. ಇನ್ನೂ ಸಿದ್ದರಾಮಯ್ಯಗೆ ಸಿದ್ರಾಮುಲ್ಲಾಖಾನ್ ಅಂತ ಬಿಂಬಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಹಾಗೇ ಕರೆಯುತ್ತಾರೋ ಅವರವರ ವೈಯಕ್ತಿಕ ವಿಚಾರ ಅಷ್ಟೇ ಎಂದು ಹೇಳಿದರು.
Advertisement
ಸಮುದಾಯದ ಎರಡನೇ ಹಂತದ ನಾಯಕನ ಪಟ್ಟಕ್ಕೆ ಓಡಾಡುತ್ತಿದ್ದಾರೆ ಎನ್ನುವ ವಿಚಾರವನ್ನು ತಳ್ಳಿಹಾಕಿದ ಅವರು, ಮೊದಲನೇ ಹಂತ, ಎರಡನೇ ಹಂತದ ನಾಯಕನಾಗಬೇಕು ಎನ್ನುವ ಮನಸ್ಥಿತಿಯಿಲ್ಲ. ನಮ್ಮಂಥ ಶಕ್ತಿ ಇರುವವರು ಸಮುದಾಯದ ಸಂಘಟನೆ ಮಾಡಬೇಕು ಎಂದರು. ಇದನ್ನೂ ಓದಿ: ಸೈನಿಕರ ಕಲ್ಯಾಣ, ಸೇನೆಯ ಸಬಲೀಕರಣಕ್ಕೆ ಸರ್ಕಾರ ಬದ್ಧ: ಗೆಹ್ಲೋಟ್
ರಾಜ್ಯ ಹಾಗೂ ಮಹಾರಾಷ್ಟ್ರದ ಮಧ್ಯೆ ಗಡಿ ವಿವಾದ ಮತ್ತೆ ಶುರುವಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರು ಬಹಳ ಕ್ಯಾತೆ ತೆಗೆದಿದ್ದಾರೆ. ಕನ್ನಡ ಸಂಘಟನೆ ಹೋರಾಟಗಾರರು ಪ್ರತಿಭಟಿಸುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನ ಸಾಮರಸ್ಯವಾಗಿ ಬಗೆಹರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ದೆಹಲಿ ಅಭಿವೃದ್ಧಿಗೆ ಮೋದಿ ಆಶೀರ್ವಾದ ಬೇಕು: ಕೇಜ್ರಿವಾಲ್