ಬೆಂಗಳೂರು: ಸಣ್ಣ ಕೈಗಾರಿಕೆ ಹಾಗೂ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ಮತ್ತೊಮ್ಮೆ ಭರ್ಜರಿಯಾಗಿ ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಎಂಟಿಬಿ ಭರ್ಜರಿಯಾಗಿ ನಾಗಿಣಿ ಡಾನ್ಸ್ ಮಾಡಿರುವಂತಹ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಕಾರ್ಯಕರ್ತರ ಭುಜದ ಮೇಲೆ ಕುಳಿತು ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ. ಜಡಿಗೇನಹಳ್ಳಿ ಹೋಬಳಿಯ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಗಮಿಸಿದ ವೇಳೆಯಲ್ಲಿ ಎಂಟಿಬಿ ಕಾರ್ಯಕರ್ತರೊಂದಿಗೆ ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ನಾಯಿಗಳಿಂದ ತಪ್ಪಿಸಿಕೊಂಡು ಬಂದು ಮನೆಯ ಹಾಲ್‍ನಲ್ಲಿ ಕೂತ ಜಿಂಕೆ
ಎಂಟಿಬಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಇದು ಕೇವಲ ಸಚಿವರನ್ನು ಮೆಚ್ಚಿಸಲು ಈ ರೀತಿ ಅದ್ದೂರಿಯಾಗಿ ಸ್ವಾಗತವನ್ನು ಕೋರಲಾಗಿದೆ. ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮವನ್ನು ಮುಚ್ಚಿ ಹಾಕಲು ಈ ರೀತಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಇದನ್ನೂ ಓದಿ: ಪ್ರಧಾನಿ ಕಚೇರಿ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಡಿಸಿಗೆ ಫೇಕ್ ಕಾಲ್- ನಕಲಿ ಅಧಿಕಾರಿ ವಿರುದ್ಧ FIR