ನಿಮಿಷದಲ್ಲೇ 35 ಲಕ್ಷ ರೂ. ದಾನ ಮಾಡಿದ ಎಂಟಿಬಿ ನಾಗರಾಜ್

Public TV
2 Min Read
MTB Nagaraj

ಚಿಕ್ಕಬಳ್ಳಾಪುರ: ರಾಜ್ಯ ಪೌರಾಡಳಿತ ಇಲಾಖಾ ಸಚಿವ ಹಾಗೂ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಕೇವಲ ಒಂದೇ ನಿಮಿಷದಲ್ಲಿ ಹಿಂದೆ ಮುಂದೆ ನೋಡದೇ 35 ಲಕ್ಷ ರೂಪಾಯಿ ದಾನ ಮಾಡಿದ್ದಾರೆ.

MTB Nagaraj 2

ಅಂದಹಾಗೆ ಚಿಕ್ಕಬಳ್ಳಾಪುರ ಹೊರವಲಯದ ಜೈನ್ ಆಸ್ಪತ್ರೆ ಅವರಣದಲ್ಲಿ ದಿವಂಗತ ಮಂಗಿಶೆಟ್ಟಿ ನರಸಿಂಹಯ್ಯ ರಂಗಮ್ಮ ಟ್ರಸ್ಟ್ ಹಾಗೂ ಜೈನ್ ಮಿಷನ್ ಆಸ್ಪತ್ರೆ ನೇತೃತ್ವದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರದೊಂದಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂಟಿಬಿ ನಾಗರಾಜ್ ಅವರು ಆಗಮಿಸಿದ್ದರು. ಇದನ್ನೂ ಓದಿ: ‘ಕರ್ನಾಟಕ ರತ್ನ’ದ ಅರ್ಥನೇ ಪುನೀತ್ ರಾಜ್ ಕುಮಾರ್ : ಜ್ಯೂನಿಯರ್ ಎನ್.ಟಿ.ಆರ್

MTB Nagaraj 1

ಕಾಲಿಲ್ಲದ ವಿಶೇಷಚೇತನರಿಗೆ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್ ವತಿಯಿಂದ ಉಚಿತವಾಗಿ ಕೃತಕ ಕಾಲು ಜೋಡಣೆ ಶಿಬಿರ ಇದಾಗಿತ್ತು. ಸರಿಸುಮಾರು 200 ಮಂದಿ ಕಾಲಿಲ್ಲದ ಕೈ ಇಲ್ಲದ ವಿಶೇಷಚೇನತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾಲು ಜೋಡಣೆ ಮಾಡಿಕೊಳ್ಳಲು ಆಗಮಿಸಿದ್ದರು. ಇವರನ್ನು ಕಂಡು ಎಂಟಿಬಿ ನಾಗರಾಜ್‍ರವರ ಮನಸ್ಸು ಕರಗಿದೆ. ಇದನ್ನೂ ಓದಿ: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಭಾವುಕರಾಗಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ

ವೇದಿಕೆ ಮೇಲೆ ಭಾಷಣ ಮಾಡಿದ ಎಂಟಿಬಿ ನಾಗರಾಜ್ ಅವರು, ದಿವಂಗತ ಮಂಗಿ ಶೆಟ್ಟಿ ನರಸಿಂಹಯ್ಯನವರ ಸಮಾಜಮುಖಿ ಕಾಯಕಗಳನ್ನು ಕೊಂಡಾಡಿದರು. ಅಂದಹಾಗೆ ದಿವಂಗತ ಮಂಗಶೆಟ್ಟಿ ನರಸಿಂಹಯ್ಯನವರು ಚಿಕ್ಕಬಳ್ಳಾಪುರ ನಗರದಲ್ಲಿ 1881ರಲ್ಲಿ ಜನಿಸಿ, ಕೂಲಿ ಕೆಲಸ ಮಾಡುತ್ತಾ ಆದರ್ಶದ ಜೀವನ ನಡೆಸಿದವರು. ತಮ್ಮ ಸ್ವಂತ ಪರಿಶ್ರಮದಿಂದ ದುಡಿದು ಆಸ್ತಿ ಮಾಡಿದರೂ 1961ರಲ್ಲಿ ತಮ್ಮ ಎಲ್ಲ ಆಸ್ತಿಯನ್ನು ಟ್ರಸ್ಟ್‌ಗೆ ಸೇರಿಸಿ ಅದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದರು. ಇದೇ ಟ್ರಸ್ಟ್ ಮೂಲಕ ಅವರ ನಿಧನದ ತರುವಾಯ ಟ್ರಸ್ಟ್‌ನ ಸದಸ್ಯರು ಸಮಾಜಮುಖಿ ಕಾಯಕಗಳು ಮುಂದುವರೆಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಟ್ರಸ್ಟ್‌ನ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡ ಎಂಟಿಬಿ ನಾಗರಾಜ್ ಟ್ರಸ್ಟ್‌ನವರು ಮನವಿ ಮಾಡದಿದ್ದರೂ, ಅವರ ಸಮಾಜಮುಖಿ ಕಾಯಕಗಳಿಗೆ ಮನಸೋತು ವೇದಿಕೆ ಮೇಕೆ 10 ಲಕ್ಷ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

ಇದೇ ವೇಳೆ ಜೈನ್ ಮಿಷನ್ ಆಸ್ಪತ್ರೆಯವರು ಸಹ ಮನವಿ ಮಾಡಿಕೊಂಡಾಗ ಅವರಿಗೂ ಸಹ 25 ಲಕ್ಷ ರೂ. ಹಣ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು. ಸಂಸ್ಥೆಯವರು ಮನವಿ ಮಾಡದಿದ್ದರೂ ಸಮಾಜಮುಖಿ ಸೇವೆಗಳನ್ನು ನೋಡಿ ಹಿಂದೆ, ಮುಂದೆ ನೋಡದೇ ಕೇವಲ ಒಂದೇ ನಿಮಿಷದಲ್ಲಿ 35 ರೂ. ಲಕ್ಷ ದೇಣಿಗೆ ನೀಡುವ ಮೂಲಕ ನೆರೆದಿದ್ದವರಿಗೆ ದಾನವೀರ ಶೂರ ಕರ್ಣ ಎಂಬಂತೆ ಕಂಡರು. ಇನ್ನೂ ಈ ಬಗ್ಗೆ ಮಾತನಾಡಿದ ನಾನು ದುಡಿದಿರೋ ಹಣದಲ್ಲಿ ಪ್ರತಿನಿತ್ಯ ಹತ್ತು ಹಲವು ಮಂದಿಗೆ ಸಹಾಯ ಮಾಡುತ್ತಿದ್ದೇನೆ. ಅದೇ ರೀತಿ ಇವರ ಸಮಾಜಮುಖಿ ಕಾಯಕಗಳು ನನಗೆ ಸಂತೋಷ ತಂದಿವೆ. ಹೀಗಾಗಿ ಬಹಳ ಸಂತೋಷದಿಂದ ಸಹಾಯ ಮಾಡಿದ್ದೇನೆ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *