ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಚಾಲೆಂಜನ್ನು ಸ್ವೀಕರಿಸಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಪ್ರತಿ ಸವಾಲು ಒಡ್ಡಿದ್ದಾರೆ.
ನಿನ್ನೆ ತಡರಾತ್ರಿ ಪುಣೆಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಎಂಟಿಬಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಇನ್ನೂ ಏನೂ ಮಾತಾಡಿಲ್ಲ. ನಾಳೆಯಿಂದ(ಸೋಮವಾರ) ಆ ವಿಚಾರದ ಬಗ್ಗೆ ಚರ್ಚೆ ಮಾಡಬೇಕು. ನಾವು ಕೂಡ ಹೋರಾಟದ ಮೂಲಕವೇ ರಾಜಕೀಯ ಪ್ರವೇಶ ಮಾಡಿದವರಾಗಿದ್ದೇವೆ. ರಣರಂಗಕ್ಕೆ ಬರುವವರು ಬರಲಿ, ಅವರನ್ನು ಸಂತೋಷವಾಗಿ ಅವರನ್ನು ಸ್ವೀಕಾರ ಮಾಡುವುದಾಗಿ ಪ್ರತಿ ಸವಾಲು ಹಾಕಿದ್ದಾರೆ.
Advertisement
Advertisement
ಡಿಕೆಶಿ ಸವಾಲೇನು..?
ದೋಸ್ತಿ ಸರ್ಕಾರ ಪತನಕ್ಕೂ ಮುನ್ನ ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಚರ್ಚೆಯ ವೇಳೆ ಡಿಕೆಶಿ ಅವರು ಎಂಟಿಬಿ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ನನ್ನ ನಿನ್ನ ಭೇಟಿ ಹೊಸಕೋಟೆಯ ರಾಜಕೀಯ ರಣರಂಗದಲ್ಲಿ ಎಂದು ಎಂಬಿಟಿಬಿ ಹೇಳಿದ್ದಾರೆ. ಇರಲಿ ನಾನು ಅವರನ್ನು ಅಲ್ಲೇ ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು.
Advertisement
ಸ್ಪೀಕರ್ ಭಾನುವಾರ ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿ ಕರೆಸು 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಮಧ್ಯರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್‍ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಆಗಮಿಸಿದ್ದಾರೆ. ಮೊದಲು ಬಂದ ನಾಲ್ವರು ಅನರ್ಹರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೊರಟಿದ್ದಾರೆ.
Advertisement
ಸುಮಾರು 15 ನಿಮಿಷಗಳ ಬಳಿಕ ಒಬ್ಬಂಟಿಯಾಗಿ ಬಂದ ಎಂಟಿಬಿ ನಾಗರಾಜ್ ಅವರು, ನಾನು ಪುಣೆಯಿಂದ ಒಬ್ಬನೇ ಬಂದೆ. ನನಗಿಂತ ಮುಂದೆ ನಾಲ್ಕು ಜನ ಹೋದರು. ಇನ್ನುಳಿದವರು ಮುಂಬೈನಲ್ಲಿದ್ದಾರೆ. ಅವರು ಸೋಮವಾರ ದೆಹಲಿಗೆ ಹೋಗಿ ಸುಪ್ರಿಂಕೋರ್ಟಿಗೆ ಅರ್ಜಿ ಹಾಕುತ್ತಾರೆ. ಸ್ಪೀಕರ್ ಅನರ್ಹ ಆದೇಶ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.